ಅದೊಂದು ಕಾರಣಕ್ಕಾಗಿ ಗಾಂಜಾ ಸೇವನೆ ಕಲಿತಿದ್ದೆ: ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್

0 4

ಮಾ ದ ಕ ವಸ್ತು ಸೇವನೆ ಪ್ರಕರಣದಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಗೆ ಎನ್ ಸಿ ಬಿ ಕ್ಲೀನ್ ಚಿಟ್ ನೀಡಿದೆ. ಕ್ಲೀನ್ ಚಿಟ್ ಪಡೆದಿರುವ ಆರ್ಯನ್ ಖಾನ್ ವಿಚಾರಣೆಯ ವೇಳೆಯಲ್ಲಿ ತಾನು ಗಾಂ ಜಾ ಸೇವನೆಯನ್ನು ಮಾಡುತ್ತಿದ್ದೆ ಎನ್ನುವ ವಿಚಾರವನ್ನು ಒಪ್ಪಿಕೊಂಡಿದ್ದರು ಎನ್ನುವ ವಿಷಯವನ್ನು ಎನ್ ಸಿ ಬಿ ಕೋರ್ಟ್ ಗೆ ತಾನು ಸಲ್ಲಿಸಿರುವ ಆ ರೋ ಪ ಪಟ್ಟಿಯಲ್ಲಿ ದಾಖಲಿಸಿದ್ದು, ಆರ್ಯನ್ ಏಕೆ ಗಾಂ ಜಾ ಸೇವನೆ ಮಾಡುತ್ತಿದ್ದರು ಎನ್ನುವ ವಿವರಣೆಯನ್ನು ಸಹಾ ನೀಡಲಾಗಿದೆ.

ಆರ್ಯನ್ ಗೆ ಅಮೆರಿಕಾದಲ್ಲಿ ವ್ಯಾಸಾಂಗ ಮಾಡುವಾಗ ನಿದ್ರೆಯ ಸಮಸ್ಯೆ ಕಾಡುತ್ತಿದ್ದ ಕಾರಣ ಆ ಸಮಸ್ಯೆಯಿಂದ ಹೊರ ಬರುವ ಸಲುವಾಗಿ ಗಾಂ ಜಾ ಸೇವನೆಯನ್ನು ಮಾಡುತ್ತಿದ್ದುದ್ದಾಗಿ, ನಿದ್ರಾಹೀನತೆಗೆ ಅದು ಪರಿಣಾಮಕಾರಿ ಎಂದು ತಿಳಿದು ತಾನು ಅದರ ಅಭ್ಯಾಸವನ್ನು ಮಾಡಿಕೊಂಡಿದ್ದೆ ಎನ್ನುವ ವಿಷಯಗಳನ್ನು ಆರ್ಯನ್ ಖಾನ್ ವಿಚಾರಣೆಯ ವೇಳೆಯಲ್ಲಿ ತಿಳಿಸಿದ್ದರು ಎಂದು ಎನ್ ಸಿ ಬಿ ತನ್ನ ಆ ರೋ ಪ ಪಟ್ಟಿಯಲ್ಲಿ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ.

ಇದೇ ವೇಳೆ ಆರ್ಯನ್ ತನಗೆ ಮುಂಬೈನ ಬಾಂದ್ರಾದಲ್ಲಿ ಮಾ ದ ಕ ವಸ್ತು ಮಾರಾಟಗಾರನ ಸಂಪರ್ಕವಿದೆ, ಆದರೆ ಆತನ ಹೆಸರು ಮತ್ತು ವಿಳಾಸ ಗೊತ್ತಿಲ್ಲ ಎನ್ನುವ ವಿಚಾರವನ್ನು ಸಹಾ ತಿಳಿಸಿದ್ದರು ಎಂದು ಎನ್ ಸಿ ಬಿ ಹೇಳಿದೆ. ಇದೇ ಪ್ರಕರಣದಲ್ಲಿ ಬಂ ಧ ನಕ್ಕೆ ಒಳಪಟ್ಟಿರುವ ಇತರೆ ಕೆಲವರು ಸಹಾ ಓದು, ಕೆಲಸ ಮುಂತಾದ ಒತ್ತಡಗಳಿಂದ ಹೊರ ಬರುವುದಕ್ಕಾಗಿಯೇ ಡ್ರ ಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಹೇಳಿದ್ದರು ಎನ್ನುವುದನ್ನು ಎನ್ ಸಿ ಬಿ ತಿಳಿಸಿದೆ.

ಕಳೆದ ವರ್ಷ ಮುಂಬೈನಿಂದ ಗೋವಾ ಕಡೆ ಹೊರಟಿದ್ದ ಕ್ರೂಸ್ ಒಂದರ ಮೇಲೆ ಎನ್ ಸಿ ಬಿ ನಡೆಸಿದ ಧಾಳಿಯಲ್ಲಿ ಬಂ ಧಿ ಸಲಾಗಿದ್ದ ಒಟ್ಟು 20 ಮಂದಿಯಲ್ಲಿ 14 ಮಂದಿ ವಿ ರು ದ್ಧ ಸುಮಾರು ಆರು ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಎನ್ ಸಿ ಬಿ, ಯಾವುದೇ ಬಲವಾದ ಸಾಕ್ಷಿ, ಪುರಾವೆಗಳು ಇಲ್ಲದ ಕಾರಣ ಆರ್ಯನ್ ಸೇರಿ ಒಟ್ಟು ಆರು ಮಂದಿಯ ಹೆಸರನ್ನು ಆ ರೋ ಪ ಪಟ್ಟಿಯಿಂದ ಕೈ ಬಿಟ್ಟು ಕ್ಲೀನ್ ಚಿಟ್ ನೀಡಿದೆ.

Leave A Reply

Your email address will not be published.