ಅದೊಂದು ಕನಸಿಗಾಗಿ ನಾನು ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ: ದಿನೇಶ್ ಕಾರ್ತಿಕ್ ಕನಸು ಯಾವುದು??
ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಸಹಾ ರಾಮಭಕ್ತ ಹನುಮಂತನ ಮಂದಿರಗಳಿವೆ. ಇಲ್ಲಿ ಹನುಮಂತನನ್ನು ಭಕ್ತಿ ಶ್ರದ್ಧೆಗಳಿಂದ ಆರಾಧನೆ ಮಾಡಲಾಗುತ್ತದೆ. ಆದರೆ ನಮ್ಮ ದೇಶದ ಕೆಲವು ಕಡೆ ಮಾತ್ರ ಹನುಮಾನ್ ಆರಾಧನೆಗೆ ನಿಷೇಧ ಇದೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಆದರೆ ಇದರ ಹಿಂದೆ ಸ್ಥಳೀಯವಾಗಿ ಜನರು ಕೆಲವು ಕಾರಣಗಳನ್ನು ನೀಡುತ್ತಾರೆ. ನಾವಿಂದು ನಿಮಗೆ ಅಂತಹುದೇ ಒಂದು ಗ್ರಾಮದ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಗ್ರಾಮದಲ್ಲೊ ಹನುಮಂತನ ಆರಾಧನೆ ಮಾಡುವುದಿಲ್ಲ, ಮಕ್ಕಳಿಗೆ ಹನುಮಂತನ ಹೆಸರುಗಳನ್ನು ಇಡುವುದಿಲ್ಲ.
ಇಷ್ಟೇ ಅಲ್ಲ ಇಲ್ಲಿನ ಜನರು ಮಾರುತಿ ಕಾರುಗಳನ್ನು ಸಹಾ ಖರೀದಿ ಮಾಡುವುದಿಲ್ಲ. ಈ ಗ್ರಾಮದಲ್ಲಿ ಅವರದ್ದೇ ಆದ ಗ್ರಾಮ ದೇವತೆ ಇದ್ದು, ವಿಚಿತ್ರ ಏನೆಂದರೆ ಇಲ್ಲಿ ಒಬ್ಬ ದೈತ್ಯ ನನ್ನು ದೇವರ ಸ್ಥಾನದಲ್ಲಿ ಇರಿಸಿ ಆರಾಧನೆ ಮಾಡುತ್ತಾರೆ ಈ ಗ್ರಾಮದ ಜನರು. ಅಲ್ಲದೇ ಈ ಆರಾಧನೆಯಲ್ಲಿ ತಪ್ಪಾದರೆ ಶಿ ಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗಾದರೆ ಯಾವುದೀ ಗ್ರಾಮ? ಏನಿದರ ಹಿನ್ನೆಲೆ ಎನ್ನುವುದನ್ನು ತಿಳಿಯೋಣ ಬನ್ನಿ.
ಈ ವಿಶೇಷವಾದ ಗ್ರಾಮದ ಹೆಸರು ದೈತ್ಯ ನಮ್ದೂರ್. ಮಹಾರಾಷ್ಟ್ರದ ಅಹ್ಮದಾಬಾದ್ ಜಿಲ್ಲೆಯ ಪಾರ್ನರ್ ನಲ್ಲಿ ಇದ್ದು, ಮುಂಬೈ ನಿಂದ 5 ಗಂಟೆಗಳ ಪ್ರಯಾಣ ಮಾಡಬೇಕಾಗಿರುತ್ತದೆ. ಪುರಾಣ ಕಥೆಗಳ ಪ್ರಕಾರ, ತ್ರೇತಾಯುಗದಲ್ಲಿ ಈ ಪ್ರದೇಶದಲ್ಲಿದ್ದ ಕೇದಾರೇಶ್ವರ ಮಂದಿರಕ್ಕೆ ಶ್ರೀರಾಮನು ತನ್ನ ಪತ್ನಿ ಸೀತಾ ದೇವಿ ಮತ್ತು ಸಹೋದರ ಲಕ್ಷ್ಮಣನ ಜೊತೆಗೆ ಭೇಟಿ ನೀಡಿದ. ಆ ಸಮಯದಲ್ಲಿ ಈ ಪ್ರದೇಶದಲ್ಲಿದ್ದ ಅಸುರ, ರಾಮಭಕ್ತ ದೈತ ನಿಂಬ ನು ರಾಮನ ದರ್ಶನವನ್ನು ಮಾಡಲು ಬಯಸಿದ.
ಈ ಸಂದರ್ಭದಲ್ಲಿ ರಾಮನ ಬಲಗೈ ಬಂಟ ಹನುಮಾನ್ ಮೇಲಿನ ಅಸೂಯೆಯಿಂದ ನಿಂಬ ಹಾಗೂ ಹನುಮಂತನ ನಡುವೆ ಹೋರಾಟ ನಡೆಯುತ್ತದೆ. ಆಗ ಶ್ರೀರಾಮನು ಅದನ್ನು ಗಮನಿಸಿ ಇಬ್ಬರ ನಡುವಿನ ಆ ಹೋರಾಟವನ್ನು ನಿಲ್ಲಿಸಿ, ದೈತ್ಯ ನಿಂಬ ನ ರಾಮ ಭಕ್ತಿಗೆ ಮೆಚ್ಚಿ ಆ ಇಡೀ ಪ್ರದೇಶದ ರಕ್ಷಣೆಯನ್ನು ಮಾಡುವಂತೆ, ಅಲ್ಲಿನ ಜನರಿಂದ ಪೂಜಿಸಲ್ಪಡುವಂತೆ ವರ ನೀಡುತ್ತಾರೆ. ಪ್ರಸ್ತುತ ದೈತ್ಯ ನಂದಾಪುರ ಅಥವಾ ನಮ್ದೂರ್ ಇದೇ ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ನಿಂಬಾಸುರ ಪೂಜೆ ನಡೆಸಲಾಗುತ್ತದೆ.