ಅದೆಲ್ಲಾ ಮರೆತು ಬಿಡಿ: ಮತ್ತದೇ ಆ್ಯಟಿಟ್ಯೂಡ್ ನಿಂದ ವಿಜಯ ದೇವರಕೊಂಡ ಹೀಗೆ ಹೇಳಿದ್ದಾದ್ರು ಏಕೆ?

0 1

ಟಾಲಿವುಡ್ ನ ಯುವ ಸ್ಟಾರ್ ನಟ ವಿಜಯ ದೇವರಕೊಂಡ ನಾಯಕನಾಗಿ ಮಿಂಚಿದ್ದ ಸಿನಿಮಾ ಲೈಗರ್ ಪ್ರೇಕ್ಷಕರ ಮೇಲೆ ಮೋಡಿ ಮಾಡುವಲ್ಲಿ ವಿಫಲವಾಗಿದ್ದು ಈಗ ಹಳೆಯ ವಿಷಯವಾಗಿದೆ. ಸಿನಿಮಾ ಬಗ್ಗೆ ಬಂದ ನೆಗೆಟಿವ್ ರಿವ್ಯೂ ಹಾಗೂ ಸಿನಿಮಾ ಕಂಡ ಹೀನಾಯ ಸೋಲು ನಟನ ತಾರಾ ವರ್ಚಸ್ಸಿನ ಮೇಲೆ ಪರಿಣಾಮ ಬೀರಿದೆ. ನಟನ ವೃತ್ತಿ ಜೀವನದಲ್ಲಿ ಇಂತಹ ಒಂದು ಸೋಲು ದೊಡ್ಡ ಹೊ ಡೆ ತ ವನ್ನೇ ನೀಡಿದೆ. ಸಿನಿಮಾ ಸೋಲಿನ ನಂತರ ನಟನ ಬಗ್ಗೆ ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ಟಾಕ್ ಕೇಳಿ ಬಂದಿತ್ತು. ನಟನ ಅಹಂಕಾರವೇ ಸಿನಿಮಾ ಸೋಲಿಗೆ ಕಾರಣ ಎಂದೂ ಟೀಕೆ ಮಾಡಲಾಯಿತು.

ನಟನ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ನಿರ್ದೇಶಕ ಪೂರಿ ಜಗನ್ನಾಥ್ ಮೇಲೆ ಟೀಕೆಗಳ ಮಳೆಯನ್ನೇ ಸುರಿಸಿದ್ದರು. ಇನ್ನು ಲೈಗರ್ ಸಿನಿಮಾ ಮಾಡುವಾಗಲೇ ಇದೇ ಕಾಂಬಿನೇಷನ್ ನಲ್ಲಿ ಅಂದರೆ ನಟ ವಿಜಯ ದೇವರಕೊಂಡ ಮತ್ತು ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಜನಗಣಮನ ಸಿನಿಮಾ ಘೋಷಣೆ ಆಗಿತ್ತು. ಸಿನಿಮಾದ ಆರಂಭ ಮುಂಬೈನಲ್ಲಿ ಆಗಿತ್ತು. ಆದರೆ ಲೈಗರ್ ಸಿನಿಮಾ ಸೋಲಿನ ನಂತರ ಜನಗಣಮನ ಸಿನಿಮಾ ನಿಂತಿದೆ. ಸಿನಿಮಾ ಮತ್ತೆ ಆರಂಭವಾಗುವುದೋ ಇಲ್ಲವೋ ಎನ್ನುವುದು ಸಹಾ ಅಸ್ಪಷ್ಟವಾಗಿದೆ.

ಜನಗಣಮನ ಸಿನಿಮಾದ ಮುಹೂರ್ತ ಕೂಡಾ ನಡೆದಿತ್ತು, ಕೋಟಿ ಕೋಟಿ ಖರ್ಚು ಮಾಡಲಾಗಿತ್ತು. ಆದರೆ ಲೈಗರ್ ಸೋಲು ಜನಗಣಮನ ಸಿನಿಮಾದ ರೂಪರೇಖೆಯನ್ನು ತಲಕೆಳಗನ್ನಾಗಿಸಿದೆ. ಜನಗಣಮನ ಸಿನಿಮಾ ನಿಂತು ಹೋದ ವಿಚಾರವಾಗಿ ನಟನಿಗೆ ಪ್ರಶ್ನೆಯೊಂದು ಎದುರಾಗಿದ್ದು, ನಟ ನೀಡಿದ ಉತ್ತರ ಈಗ ಸದ್ದು ಮಾಡಿದೆ. ಹೌದು, ಸೈಮಾ ಪ್ರಶಸ್ತಿಗಳ ಸಮಾರಂಭಕ್ಕೆ ಬೆಂಗಳೂರಿಗೆ ಬಂದಿದ್ದ ನಟ ವಿಜಯ ದೇವರಕೊಂಡ ಅವರನ್ನು ಜನಗಣಮನ ಸಿನಿಮಾ ಬಗ್ಗೆ ಮಾದ್ಯಮದವರು ಪ್ರಶ್ನೆಯನ್ನು ಕೇಳಿದ್ದು, ನಟ ಇದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ.

ಸೈಮಾ ಸಮಾರಂಭಕ್ಕೆ ಬಂದಿದ್ದ ನಟ ವಿಜಯ ದೇವರಕೊಂಡ ಅವರನ್ನು, “ಜನಗಣಮನ ಸಿನಿಮಾ ಸೆಟ್ಟೇರುವುದಿಲ್ಲವಂತೆ ಹೌದಾ?” ಇದಕ್ಕೆ ಎಂದಿನಂತೆ ತನ್ನದೇ ಸ್ಟೈಲ್ ನಲ್ಲಿ ಉತ್ತರವನ್ನು ನೀಡಿದ ವಿಜಯ ದೇವರಕೊಂಡ, “ಅದನ್ನೆಲ್ಲಾ ಮರೆತು ಬಿಡಿ, ನಾವು ಇಲ್ಲಿಗೆ ಬಂದಿರುವುದು ಸೈಮಾ ಅವಾರ್ಡ್ ಗಾಗಿ, ಈ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದಾರೆ.‌ ನಟ ಜನಗಣಮನ ಸಿನಿಮಾದ ವಿಚಾರದಲ್ಲಿ ಅದನ್ನೆಲ್ಲಾ‌ ಮರೆತು ಬಿಡಿ ಎಂದಿದ್ದು ಅನೇಕರಿಗೆ ಅಚ್ಚರಿಯನ್ನು ಮೂಡಿಸಿದೆ. ಇನ್ನು ಜನಗಣಮನ ಸಿನಿಮಾ ಸದ್ಯಕ್ಕಂತೂ ಇಲ್ಲ ಎನ್ನುವುದು ಈಗಾಗಲೇ ಸುದ್ದಿಗಳಾಗಿದೆ.

Leave A Reply

Your email address will not be published.