ಅದೃಷ್ಟ ಬದಲಿಸಬಲ್ಲುದು ಸಣ್ಣ ಏಲಕ್ಕಿ: ಕೇವಲ ಈ ಸರಳ ವಿಧಾನಗಳನ್ನು ಅನುಸರಿಸಬೇಕಷ್ಟೇ!

Entertainment Featured-Articles News ಜೋತಿಷ್ಯ

ನಮ್ಮ ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನು ಕೇವಲ ಅಡುಗೆ ಮಾಡುವುದಕ್ಕೆ ಮಾತ್ರವೇ ಬಳಸಲಾಗುವುದಿಲ್ಲ. ಬದಲಾಗಿ ತಂತ್ರ, ಮಂತ್ರ ಹಾಗೂ ಜ್ಯೋತಿಷ್ಯ ಉಪಾಯಗಳಿಗಾಗಿಯೂ ಅವುಗಳನ್ನು ಬಳಸಲಾಗುತ್ತದೆ. ಇಂತಹುದೇ ಒಂದು ಸಣ್ಣ ವಸ್ತು ನಮ್ಮ ಅಡುಗೆ ಮನೆಯಲ್ಲಿ ಇರುವ ಏಲಕ್ಕಿ ಸಹಾ ಆಗಿದೆ. ಏಲಕ್ಕಿ ಪರಿಮಳವು ಪ್ರತಿಯೊಬ್ಬರ ಮನಸ್ಸನ್ನೂ ಸಹಾ ಗೆಲ್ಲುತ್ತದೆ. ಸ್ವಾದಿಷ್ಟ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಏಲಕ್ಕಿಯು ನಿಮ್ಮ ಅದೃಷ್ಟವನ್ನು ಸಹಾ ಬದಲಿಸಬಲ್ಲುದು ಎಂದರೆ ನೀವು ನಂಬುವಿರಾ? ಹೌದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಏಲಕ್ಕಿಗೆ ವಿಶೇಷವಾದ ಮಹತ್ವವಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಕೆಲವು ವಿಧಾನಗಳ ಅನುಸಾರವಾಗಿ ಏಲಕ್ಕಿಯನ್ನು ಬಳಸುವ ಮೂಲಕ ಜೀವನದಲ್ಲಿ ಎದುರಾಗಿರುವ ಹಾಗೂ ಅನುಭವಿಸುತ್ತಿರುವ ಸಂಕಷ್ಟಗಳನ್ನು ನಾವು ದೂರ ಮಾಡಿಕೊಳ್ಳಬಹುದಾಗಿದೆ‌. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಲಕ್ಕಿಯನ್ನು ಹೇಗೆ ಬಳಸಿಕೊಂಡು ಸಮಸ್ಯೆಗಳಿಂದ ಮುಕ್ತಿ ಪಡೆದು, ನಮ್ಮ ಭಾಗ್ಯವನ್ನು ಬದಲಿಸಿಕೊಳ್ಳಬಹುದು ಎನ್ನುವುದನ್ನು ನಾವಿಂದು ತಿಳಿಯೋಣ ಬನ್ನಿ.

ಧನಪ್ರಾಪ್ತಿಗಾಗಿ ಹೀಗೆ ಮಾಡಿ : ಒಂದು ವೇಳೆ ನೀವು ಆರ್ಥಿಕ ಸಂಕಷ್ಟ ವನ್ನು ಎದುರಿಸುತ್ತಿದ್ದರೇ, ನಿಮ್ಮ ಬಳಿ ಹಣವೇನೋ ಬರುತ್ತದೇ ಆದರೆ ಬಂದ ವೇಗದಲ್ಲೇ ಅದು ಖಾಲಿಯಾಗುತ್ತಾ, ಯಾವುದೇ ಉಳಿತಾಯ ಅಥವಾ ಅದರ ಸದುಪಯೋಗ ಆಗುತ್ತಿಲ್ಲ ಎನಿಸಿದಾಗ, ನೀವು ಹಣವನ್ನು ಇಡುವ ಜಾಗದಲ್ಲಿ ಐದು ಹಸಿರು ಏಲಕ್ಕಿಯನ್ನು ಇಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೀಗೆ ಇಡುವುದರಿಂದ ನಿಮ್ಮ ಆದಾಯವು ಹೆಚ್ಚಾಗತೊಡಗುತ್ತದೆ.

ದಾರಿದ್ರ್ಯವನ್ನು ದೂರ ಮಾಡುವುದಕ್ಕೆ ಹೀಗೆ ಮಾಡಿ :
ನಿಮ್ಮ ದಾರಿದ್ರ್ಯ ವನ್ನು ದೂರ ಮಾಡಬೇಕಾದರೆ ಯಾರಾದರೂ ಬಡವನಿಗೆ ಅಥವಾ ಮಂಗಳ ಮುಖಿಗೆ ಒಂದು ನಾಣ್ಯವನ್ನು ನೀಡಿ ಹಾಗೂ ಅದರ ಜೊತೆಗೆ ಒಂದು ಹಸಿರು ಏಲಕ್ಕಿಯನ್ನು ತಿನ್ನಲು ನೀಡಿ‌. ಹೀಗೆ ನಿಯಮಿತವಾಗಿ ಮಾಡುತ್ತಾ ಬಂದರೆ ದಾರಿದ್ರ್ಯ ವು ದೂರವಾಗಿ, ಶ್ರೀ ಮಹಾಲಕ್ಷ್ಮೀಯ ಕೃಪೆಯು ಸಿಗುತ್ತದೆ.

ಕೆಲಸದಲ್ಲಿ ಪ್ರಮೋಷನ್ ಗಾಗಿ ಹೀಗೆ ಮಾಡಿ : ಒಂದು ವೇಳೆ ನೀವು ನಿಮ್ಮ ವೃತ್ತಿಯಲ್ಲಿ ಬಡ್ತಿ ಪಡೆಯಲು ಬಯಸುತ್ತಿದ್ದರೆ ಏಲಕ್ಕಿಯನ್ನು ಹಸಿರು ಬಟ್ಟೆಯಲ್ಲಿ ಸುತ್ತಿ, ನಿಮ್ಮ ತಲೆದಿಂಬಿನ ಕೆಳಗೆ ಇಡಿ. ಮುಂಜಾನೆ ಎದ್ದ ಮೇಲೆ ಆ ಏಲಕ್ಕಿಯನ್ನು ಯಾರಿಗಾದರೂ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಮನೋಕಾಮನೆಯು ಈಡೇರುತ್ತದೆ ಎಂದು ಹೇಳಲಾಗುತ್ತದೆ.

ಶೀಘ್ರ ವಿವಾಹಕ್ಕೆ : ಬಹಳಷ್ಟು ಪ್ರಯತ್ನಗಳ ನಂತರವೂ ಮದುವೆಯು ಆಗುತ್ತಿಲ್ಲವೆಂದಾಗ, ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಗುರುವಾರದಂದು ಎರಡು ಹಸಿರು ಏಲಕ್ಕಿಯೊಂದಿಗೆ ಐದು ಬಗೆಯ ಸಿಹಿ ತಿನಿಸನ್ನು ಗುರು ಮಂದಿರದಲ್ಲಿ ಸಮರ್ಪಿಸಿದರೆ ಶೀಘ್ರವಾಗಿ ಒಳ್ಳೆಯ ಸಂಬಂಧವು ದೊರೆತು ವಿವಾಹ ಕಾರ್ಯವು ನಿರ್ವಿಘ್ನವಾಗಿ ನಡೆಯುವುದು ಎಂದು ಹೇಳಲಾಗುತ್ತದೆ.

Leave a Reply

Your email address will not be published.