ಅದೃಷ್ಟ ಅಂದ್ರೆ ಇದು! ಸೀತಾ ಪಾತ್ರ ಮಾಡಿದ ನಟಿ ಮೃಣಾಲಿನಿಗೆ ದಕ್ಕಿದ ದೊಡ್ಡ ಅವಕಾಶ! ಅಭಿಮಾನಿಗಳು ಖುಷ್

Entertainment Featured-Articles Movies News

ಹನು ರಾಘವಪೂಡಿ ನಿರ್ದೇಶನದಲ್ಲಿ, ಮಲೆಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಮೃಣಾಲಿನಿ ಠಾಕೂರ್ ನಾಯಕಿಯಾಗಿ, ದಕ್ಷಿಣದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಸೀತಾರಾಮಂ ಬಿಡುಗಡೆ ನಂತರ ಸಾಕಷ್ಟು ಸದ್ದು ಸುದ್ದಿ ಮಾಡಿದೆ. ಸಿನಿಮಾವನ್ನು ಪ್ರೇಕ್ಷಕರು ಮನಸ್ಸಿನಿಂದ ಒಪ್ಪಿ, ಸಿನಿಮಾವನ್ನು ವಿಜಯಪಥದಲ್ಲಿ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ದುಲ್ಕರ್ ಸಲ್ಮಾನ್ ಪಾತ್ರಕ್ಕೆ ಜನರ ಮೆಚ್ಚುಗೆ ಹರಿದು ಬಂದಿದ್ದು, ಇದೇ ವೇಳೆ ನಾಯಕಿ ಸೀತಾ ಪಾತ್ರದಲ್ಲಿ ಮಿಂಚಿರುವ ನಟಿ ಮೃಣಾಲಿನಿಗಂತೂ ಪ್ರೇಕ್ಷಕರ ವಿಶೇಷವಾದ ಪ್ರೀತಿ ದಕ್ಕಿದೆ. ಸೀತಾ ಪಾತ್ರವು ಅನೇಕರ ಮನಸ್ಸನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಒಂದು ಸುದ್ದಿಯ ಪ್ರಕಾರ ಈ ಸಿನಿಮಾದಲ್ಲಿ ಸೀತಾ ಪಾತ್ರಕ್ಕೆ ಮೃಣಾಲಿನಿ ಮೊದಲ ಆಯ್ಕೆಯಾಗಿರಲಿಲ್ಲ. ಬದಲಿಗೆ ತೆಲುಗಿನ ಸ್ಟಾರ್ ನಟಿಯೊಬ್ಬರು ಈ ಪಾತ್ರವನ್ನು ನಿಭಾಯಿಸಬೇಕಿತ್ತು. ಆದರೆ ಆ ನಟಿಯು ಸೀತಾ ಪಾತ್ರವನ್ನು ತಿರಸ್ಕರಿಸಿದ ಕಾರಣ, ಆ ಪಾತ್ರವು ಮೃಣಾಲಿನಿ ಅವರ ಪಾಲಿಗೆ ಬಂದಿತು. ಆದರೆ ಸಿನಿಮಾ ಬಿಡುಗಡೆ ನಂತರ ಸೀತಾ ಪಾತ್ರಕ್ಕೆ ದಕ್ಕಿರುವ ಮೆಚ್ಚುಗೆಗಳನ್ನು ನೋಡಿದ ನಂತರ ಬಹುಶಃ ಈ ಪಾತ್ರ ತಿರಸ್ಕರಿಸಿದ ಆ ಸ್ಟಾರ್ ನಟಿ ಸಹಾ ಬೇಸರ ಪಟ್ಟಿದ್ದರೂ ಅದರಲ್ಲಿ ಅಚ್ಚರಿಯಾಗುವ ವಿಷಯವೇನಿಲ್ಲ. ಇದೇ ವೇಳೆ ಸಿನಿಮಾ ನೋಡಿದ ಮಂದಿ ಮೃಣಾಲಿನಿ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದಾರೆ ಎನ್ನುತ್ತಿದ್ದಾರೆ.

ಹೀಗೆ ಸೀತಾ ರಾಮಂ ಸಿನಿಮಾದ ತನ್ನ ಸೀತಾ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿರುವ ನಟಿ ಮೃಣಾಲಿನಿಗೆ ಇದೀಗ ಮತ್ತೊಂದು ಭರ್ಜರಿ ಅವಕಾಶ ಒದಗಿ ಬಂದಿದ್ದು, ನಟಿಯ ಅದೃಷ್ಟವನ್ನು ಬದಲಾಯಿಸಿದೆ ಸೀತಾ ಪಾತ್ರ. ಹೌದು, ಮೃಣಾಲಿನಿಗೆ ಇದೀಗ ತೆಲುಗಿನ ಯುವ ಸ್ಟಾರ್ ನಟನ ಜೊತೆಗೆ ನಾಯಕಿಯಾಗಿ ತೆರೆಯನ್ನು ಹಂಚಿಕೊಳ್ಳುವ ಅವಕಾಶ ಒದಗಿ ಬಂದಿದೆ. ಹಾಗಾದರೆ ಯಾರು ಆ ಸ್ಟಾರ್ ನಟ ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ. ಬಹುಶಃ ಈ ಸುದ್ದಿ ನಿಮಗೂ ಸಹಾ ಅಚ್ಚರಿಯನ್ನು ಮೂಡಿಸಿದರೆ ಅದು ಖಂಡಿತ ಅತಿಶಯೋಕ್ತಿಯಲ್ಲ.

ಮೃಣಾಲಿನಿ ಠಾಕೂರ್ ಗೆ ತೆಲುಗಿನ ಸ್ಟಾರ್ ಯುವ ನಟ ಜೂನಿಯರ್‌ ಎನ್ ಟಿ ಆರ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶವೊಂದು ಅರಸಿ ಬಂದಿದೆ ಎನ್ನಲಾಗಿದ್ದು, ನಟಿ ಕೂಡಾ ಈ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈ ಸುದ್ದಿಯ ಅಧಿಕೃತ ಘೋಷಣೆ ಸಹಾ ಶೀಘ್ರದಲ್ಲೇ ಆಗಲಿದೆಯೆಂದು ಹೇಳಲಾಗಿದ್ದು, ಈ ಸಿನಿಮಾ ಮೂಲಕ ಟಾಲಿವುಡ್ ನಲ್ಲಿ ಮೃಣಾಲಿನಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.