ಅದಕ್ಕೆ ನನಗಿನ್ನು ಮದ್ವೆ ಆಗಿಲ್ಲ: ಮದುವೆ ಬಗ್ಗೆ ನಟ ಪ್ರಭಾಸ್ ಸಂಚಲನ ಹೇಳಿಕೆ ಈಗ ವೈರಲ್!!

Entertainment Featured-Articles News

ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್ ನಂತಹ ಸಿನಿಮಾಗಳಲ್ಲಿ ನಟಿಸಿದ ನಂತರ ನಟ ಪ್ರಭಾಸ್ ಪೂರ್ಣ ಪ್ರಮಾಣದ ಪ್ರೇಮ ಕಥಾ ಸಿನಿಮಾಗಳಲ್ಲಿ ನಾಯಕನಾದರು. ಈಗ ಅವರು ನಟಿಸಿರುವ ಬಹು ನಿರೀಕ್ಷಿತ ಹಾಗೂ ವಿಭಿನ್ನ ಪ್ರೇಮ ಕಥೆಯೊಂದಿಗೆ ತೆರೆಗೆ ಬರಲು ಸಜ್ಜಾಗಿದೆ ಸಿನಿಮಾ ರಾಧೇ ಶ್ಯಾಮ್. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮಾರ್ಚ್ 11 ರಂದು ತೆರೆಯ ಮೇಲೆ ಬರಲಿದ್ದು, ಅಭಿಮಾನಿಗಳಂತೂ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬಿಡುಗಡೆ ಆಗಲಿರುವ ತಮ್ಮ ಈ ಹೊಸ ಸಿನಿಮಾದ ಪ್ರಮೋಷನ್ ಕಾರ್ಯಗಳಲ್ಲಿ ಚಿತ್ರತಂಡ ಸಕತ್ ಬ್ಯುಸಿಯಾಗಿದೆ. ಪ್ರಭಾಸ್ ಕೂಡಾ ತಮ್ಮ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಸಿನಿಮಾ ಪ್ರಮೋಷನ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿಯೇ ರಾಧೇ ಶ್ಯಾಮ್ ಸಿನಿಮಾದ ಟ್ರೈಲರ್ ರಿಲೀಸ್ ಲಾಂಚ್ ಕಾರ್ಯಕ್ರಮವು ಮುಂಬೈ ನಗರದಲ್ಲಿ ಬಹಳ ಅದ್ದೂರಿಯಾಗಿ ವ್ಯವಸ್ಥೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನಟ ಪ್ರಭಾಸ್, ನಟಿ ಪೂಜಾ ಹೆಗ್ಡೆ ಹಾಗೂ ಚಿತ್ರತಂಡವು ಬಹಳ ಸಂತೋಷದಿಂದ ಭಾಗಿಯಾಗಿತ್ತು. ತೆಲುಗು ಸಿನಿ ರಂಗದ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಆಗಿರುವ ನಟ ಪ್ರಭಾಸ್ ಈ ಕಾರ್ಯಕ್ರಮದಲ್ಲಿ ತಮ್ಮ ಮದುವೆಯ ವಿಚಾರವಾಗಿ ಮಾಡಿರುವ ಕಾಮೆಂಟ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ. ಹಾಗಾದರೆ ಪ್ರಭಾಸ್ ಅಂತದ್ದೇನು ಹೇಳಿದರು ಬನ್ನಿ ತಿಳಿಯೋಣ.

ರಾಧೇ ಶ್ಯಾಮ್ ಸಿನಿಮಾದಲ್ಲಿ ಪ್ರಭಾಸ್ ಆದಿತ್ಯ ಎನ್ನುವ ಹಸ್ತ ಸಾಮುದ್ರಿಕ ಶಾಸ್ತ್ರಜ್ಞ ನಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ರಿಲೀಸ್ ವೇಳೆಯಲ್ಲಿ ಮಾತನಾಡಿದ ಪೂಜಾ ಹೆಗ್ಡೆ, ಪ್ರೇಮ ವಿಷಯದಲ್ಲಿ ಆದಿತ್ಯ ನುಡಿದ ಭವಿಷ್ಯವಾಣಿ ತಪ್ಪು ಎಂದು ಹೇಳಿದರು. ಅದನ್ನೇ ಮುಖ್ಯ ಅಂಶವನ್ನಾಗಿ ಇರಿಸಿಕೊಂಡ ರಿಪೋರ್ಟರ್ ಒಬ್ಬರು ಪ್ರಭಾಸ್ ಅವರನ್ನು, ನಿಮ್ಮ ರಿಯಲ್ ಲೈಫ್ ನಲ್ಲೂ ಪ್ರೇಮ ವಿಷಯದಲ್ಲಿ ನಿಮ್ಮ ಭವಿಷ್ಯವಾಣಿ ಲೆಕ್ಕ ತಪ್ಪಿತಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.

ಈ ಪ್ರಶ್ನೆಗೆ ಉತ್ತರ ನೀಡಿದ ಪ್ರಭಾಸ್ ಅವರು, ಪ್ರೇಮ ವಿಷಯದಲ್ಲಿ ನಾನು ಅಂದುಕೊಂಡಿದ್ದು ಅನೇಕ ಸಾರಿ ತಪ್ಪಾಗಿದೆ,‌ ಅದಕ್ಕಾಗಿಯೇ ನನಗೆ ಇನ್ನೂ ಮದುವೆ ಆಗಿಲ್ಲ ಎಂದು ಹೇಳಿದ್ದಾರೆ. ಇನ್ನು ಟ್ರೈಲರ್ ರಿಲೀಸ್ ಭಾಗವಾಗಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ತಮ್ಮ ಜಾತಕಗಳನ್ನು ಒಬ್ಬ ಹಸ್ತ ಸಾಮುದ್ರಿಕ ಶಾಸ್ತ್ರಜ್ಞ ರ ಬಳಿ ತೋರಿಸುತ್ತಿರುವ ಫೋಟೋಗಳು ಸಹಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ.

Leave a Reply

Your email address will not be published.