ಅಣ್ಣ ಅಮೀರ್ ಖಾನ್ ನನ್ನೊಂದಿಗೆ ನಡೆದುಕೊಂಡ ರೀತಿ ಇಂದಿಗೂ ಭಯ ಹುಟ್ಟಿಸುತ್ತದೆ: ಫೈಸಲ್ ಖಾನ್

Entertainment Featured-Articles News
76 Views

ಬಾಲಿವುಡ್ ಸಿನಿಮಾ ರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎನ್ನುವ ಖ್ಯಾತಿಯನ್ನು ಪಡೆದಿರುವ ನಟ ಅಮೀರ್ ಖಾನ್ ಅವರ ಕಿರಿಯ ಸಹೋದರ, ನಟ ಹಾಗೂ ನಿರ್ದೇಶಕ ಆಗಿರುವಂತಹ ಫೈಸಲ್ ಖಾನ್ ನವ ಭಾರತ್ ಟೈಮ್ಸ್ ಗೆ ನೀಡಿರುವ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲವೊಂದು ಸಂವೇದನಾಶೀಲ ವಿಷಯಗಳನ್ನು ಹಂಚಿಕೊಂಡಿದ್ದು, ತಮ್ಮ ಸಹೋದರ ಅಮೀರ್ ಖಾನ್ ತನ್ನ ಜೊತೆ ಹೇಗೆ ವರ್ತಿಸಿದ್ದರು ಎನ್ನುವ ವಿಷಯಗಳನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದಾರೆ. ಹೇಗೆ ತಮ್ಮ ಸಹೋದರ ತನ್ನಿಂದ ಸಿಗ್ನೇಚರ್ ರೈಟ್ಸ್ ನೀಡುವಂತೆ ಒತ್ತಾಯಿಸಿದ್ದರು, ತಾನು ಅದಕ್ಕೆ ಒಪ್ಪದೇ ಇದ್ದಾಗ ತನ್ನನ್ನು ಹೇಗೆ ಒಬ್ಬ ಮಾನಸಿಕ ಅಸ್ವಸ್ಥ ಎಂದು ಸುಳ್ಳು ಘೋಷಣೆಯನ್ನು ಮಾಡಿ ಮನೆಯಲ್ಲಿ ಬಂಧಿಸಿಟ್ಟಿದ್ದರು ಎನ್ನುವ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಅಮೀರ್ ಖಾನ್ ಅವರ ಕುಟುಂಬದವರು ಫೈಸಲ್ ಖಾನ್ ಅವರನ್ನು ಗೃಹಬಂಧನದಲ್ಲಿರಿಸಿದ ನಂತರ ಇಬ್ಬರು ಸಹೋದರರ ನಡುವೆ ಕಾನೂನು ಹೋರಾಟ ಆರಂಭವಾಯಿತು. ಅಮೀರ್ ಖಾನ್ ಹಾಗೂ ಆತನ ಕುಟುಂಬ ಫೈಸಲ್ ಖಿನ್ನತೆಗೆ ಒಳಗಾಗಿದ್ದಾರೆ ಮಾತ್ರವಲ್ಲದೇ ಅವರು ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂದು, ಅದೇ ಶಂಕೆಯಿಂದ ಫೈಸಲ್ ಖಾನ್ ನನ್ನು ಆತನ ಮನೆಯಲ್ಲೇ ಬಂಧನದಲ್ಲಿರಿಸಿದ್ದರು. ಈ ಹಿಂದೆ ಒಂದು ಸಂದರ್ಶನದಲ್ಲಿ ಫೈಸಲ್ ಖಾನ್ ತಾನು ಖಿನ್ನತೆಗೆ ಒಳಗಾಗಿರುವ ಹಾಗೂ ಮಾನಸಿಕ ರೋಗದಿಂದ ಬಳಲುತ್ತಿರುವ ವಿಷಯವನ್ನು ನಿರಾಕರಿಸಿ, ಆದನ್ನು ಶುದ್ಧ ಸುಳ್ಳು ಎಂದು ಹೇಳಿದ್ದರು.

ನಾನು ಅಮೀರ್ ಖಾನ್ ಅವರನ್ನು ಕ್ಷಮಿಸಬಹುದು ಆದರೆ ಅವರು ನನ್ನೊಂದಿಗೆ ನಡೆದುಕೊಂಡ ರೀತಿಯನ್ನು ನಾನು ಮರೆಯಲು ಸಾಧ್ಯವಿಲ್ಲ, ಇಂದಿಗೂ ಅವರನ್ನು ಅವರು ನನ್ನೊಡನೆ ನಡೆದುಕೊಂಡ ರೀತಿಯನ್ನು ನೆನಪಿಸಿಕೊಂಡರೆ ನನಗೆ ಭಯವಾಗುತ್ತದೆ ಎಂದು ಫೈಸಲ್ ಹೇಳಿಕೊಂಡಿದ್ದಾರೆ. ಅಮೀರ್ ಖಾನ್ ನನ್ನಿಂದ ಸಿಗ್ನೇಚರ್ ಹಕ್ಕುಗಳನ್ನು ಪಡೆಯಲು ಬಯಸಿದ್ದರು. ಆ ವಿಚಾರದಲ್ಲಿ ಕೋರ್ಟ್ ಗೆ ಹೋದಾಗ ನನ್ನ ಪರ ವಕೀಲರು ಸ್ವಲ್ಪ ದಿನ ನಗರದಿಂದ ಹೊರಗೆ ಇರುವಂತೆ ಹೇಳಿದರು. ನಾನು ಅವರ ಮಾತಿನಿಂದಲೇ ಮುಂಬೈ ನಗರದಿಂದ ಹೊರಗೆ ಇದ್ದೆ. ಆದರೆ ಅಮೀರ್ ಖಾನ್ ಪೊಲೀಸರ ಸಹಾಯದಿಂದ ನಾನಿರುವ ಜಾಗವನ್ನು ಪತ್ತೆ ಹಚ್ಚಿದರು, ಅನಂತರ ನನ್ನನ್ನು ಮರಳಿ ಕರೆತರಲಾಯಿತು.

ನಂತರ ಒಂದು ವರ್ಷ ಕಾಲ ಮನೆಯಲ್ಲಿ ಕೂಡಿ ಹಾಕಿ ಅನಾವಶ್ಯಕವಾದ, ತಪ್ಪು ಔಷಧಿಗಳನ್ನು ನನಗೆ ನೀಡಲಾಯಿತು. ನಾನು ಮಾನಸಿಕವಾಗಿ ಅಸ್ವಸ್ಥ ಲನಾಗಿದ್ದೇನೆ ಎಂದು ಹೊರಜಗತ್ತಿನಲ್ಲಿ ಬಿಂಬಿಸಲಾಯಿತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ಪೈಸಲ್. ಅವರು ಅಷ್ಟೆಲ್ಲ ಹಿಂಸೆ ಕೊಡುತ್ತಿದ್ದರೂ, ಒಂದಲ್ಲ ಒಂದು ದಿನ ಅವರೇ ಅರ್ಥಮಾಡಿಕೊಳ್ಳುವರು ಎಂದು ನಾನು ಎಲ್ಲಾ ಸಹಿಸಿಕೊಂಡಿದ್ದೆ ಎಂದು ಫೈಸಲ್ ಹೇಳಿದ್ದಾರೆ.
ಅನಂತರ ಬಲವಂತವಾಗಿ ನನ್ನನ್ನು ಮುಂಬೈನ ಜೆಜೆ ಹಾಸ್ಪಿಟಲ್ಗೆ ದಾಖಲು ಮಾಡಿದರು. ಇಪ್ಪತ್ತು ದಿನಗಳ ಕಾಲ ಮಾನಸಿಕ ಮೌಲ್ಯಮಾಪನಕ್ಕೆ ಒಳಗಾದೆ. ಅನಂತರ ಅಲ್ಲಿನ ವೈದ್ಯರು ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದೇನೆ ಎಂದು ಘೋಷಣೆ ಯನ್ನು ಮಾಡಿದರು, ಅಲ್ಲದೆ ಈಗ ನಾನು ಅಮೀರ್ ಖಾನ್ ಅವರ ಕುಟುಂಬದಿಂದ ದೂರವಾಗಿ ನೆಲೆಸಿದ್ದು ಈಗ ಜೀವನ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.

ಫೈಸಲ್ ಖನ್ ಬಾಲಿವುಡ್ ಗೆ ಅಮೀರ್ ಖಾನ್ ಅವರ ಮೇಲಾ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದರು. ನಂತರವೂ ಸಹ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಜೀವನದಲ್ಲಿ ಎದುರಾದ ಸಮಸ್ಯೆಗಳಿಂದ ಅವರ ಸಿನಿಮಾಗಳಿಂದ ದೂರ ಉಳಿದಿದ್ದರು. ಈಗ ಅವರು ನಟಿಸಿ, ನಿರ್ದೇಶನ ಮಾಡಿರುವ ಎ ಫಿಲಂ ಫ್ಯಾಕ್ಟರಿ ಎನ್ನುವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಫೈಸಲ್ ಬಾಲಿವುಡ್‌ ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *