ಅಣ್ಣನ‌ ಸಾವಿನಿಂದ ಮನನೊಂದು ಭಾವುಕ ಸಾಲುಗಳನ್ನು ಬರೆದುಕೊಂಡ‌ ನಟ ಮಹೇಶ್ ಬಾಬು

Written by Soma Shekar

Published on:

---Join Our Channel---

ಯಾರೇ ಒಬ್ಬ ತಂದೆಯಾದರೂ ಸರಿ ತನ್ನ ಕಣ್ಮುಂದೆಯೇ ತನ್ನ ಮಗನ ಸಾವು ಆದಾಗ ಮಾನಸಿಕವಾಗಿ ಅದು ಬಹಳ ನೋ ವನ್ನು ಉಂಟು ಮಾಡುತ್ತದೆ. ಅದೇ‌ ನೋವು ಅಣ್ಣನನ್ನು ಕಳೆದುಕೊಂಡ‌ ತಮ್ಮನಲ್ಲೂ ಇರುತ್ತದೆ. ಈಗ ಇಂತಹುದೇ ಒಂದು ಪರಿಸ್ಥಿತಿಯಲ್ಲಿದ್ದಾರೆ ತೆಲುಗು ಚಿತ್ರರಂಗದ ದಿಗ್ಗಜ ನಟ ಸೂಪರ್ ಸ್ಟಾರ್ ಕೃಷ್ಣ ಹಾಗೂ ಅವರ ಕಿರಿಯ ಮಗ ನಟ ಮಹೇಶ್ ಬಾಬು ಅವರು. ಹೌದು ನಟ ಮಹೇಶ್ ಬಾಬು ಅವರ ಅಣ್ಣ ರಮೇಶ್ ಬಾಬು ಆರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದು, ತೆಲುಗು ಸಿನಿ ರಂಗದಲ್ಲಿ ಶೋಕದ ವಾತಾವರಣ ತುಂಬಿದೆ.

ಟಾಲಿವುಡ್ ನಲ್ಲಿ ನಟ ನಟ ಕೃಷ್ಣ ಅವರ ಮಗ, ಮಹೇಶ್ ಬಾಬು ಅವರ ಅಣ್ಣ ರಮೇಶ್ ಬಾಬು ಅವರು ಸಹಾ ಕೆಲವು ಸಿನಿಮಾ ಗಳಲ್ಲಿ ನಟಿಸಿ, ತನ್ನದೇ ಆದ ಹೆಸರನ್ನು ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದ ಯಶಸ್ಸು, ಸ್ಟಾರ್ ಡಂ ಅವರನ್ನು ಒಲಿಯಲಿಲ್ಲ. ದಶಕಗಳ ಕಾಲದಿಂದ ಅವರು ಸಿನಿಮಾಗಳಿಂದ ದೂರವೇ ಉಳಿದಿದ್ದರು. 56 ವರ್ಷ ವಯಸ್ಸಿನ ರಮೇಶ್ ಬಾಬು ಅವರು ಪಿತ್ತಕೋಶ ಸಂಬಂಧ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ನಿನ್ನೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಣ್ಣನ ಅಗಲಿಕೆಯಿಂದ ನೊಂದ ಮಹೇಶ್ ಬಾಬು ಅವರು ತಮ್ಮ‌ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಣ್ಣನ ಮೇಲಿನ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಅಣ್ಣನ ಒಂದು ಸುಂದರವಾದ ಫೋಟೋ ಶೇರ್ ಮಾಡಿಕೊಂಡು, ಕೆಲವು ಭಾವುಕ ಸಾಲುಗಳನ್ನು ಬರೆದುಕೊಂಡು, ತಮ್ಮ ಅಗಲಿದ ಅಣ್ಣನಿಗೆ ನುಡಿ ನಮನಗಳನ್ನು ಸಲ್ಲಿಸಿದ್ದಾರೆ.

ಮಹೇಶ್ ಬಾಬು ಅವರು ತಮ್ಮ ಪೋಸ್ಟ್ ನಲ್ಲಿ, ನೀನು ನನಗೆ ಸ್ಫೂರ್ತಿಯಾಗಿದ್ದೆ, ನೀನು ನನ್ನ ಶಕ್ತಿಯಾಗಿದ್ದೆ,, ನೀನು ನನ್ನ ಧೈರ್ಯ, ನೀನೇ ನನ್ನ ಸರ್ವಸ್ವ, ನೀನಿಲ್ಲದಿದ್ದರೆ, ನಾನು ಇಂದು ಇರುವ ಅರ್ಧದಷ್ಟು ಮನುಷ್ಯನಾಗುತ್ತಿರಲಿಲ್ಲ. ನೀನು ನನಗಾಗಿ ಮಾಡಿದ ಎಲ್ಲದಕ್ಕೂ ಧನ್ಯವಾದಗಳು. ಈಗ ವಿಶ್ರಾಂತಿ..‌ವಿಶ್ರಾಂತಿ … ಈ ಜೀವನದಲ್ಲಿ ಮತ್ತು ನನಗೆ ಇನ್ನೊಂದು ಜನ್ಮ ಇದ್ದರೆ, ನೀವು ಯಾವಾಗಲೂ ನನ್ನ ‘ಅಣ್ಣಯ್ಯ’ ಎಂದೆಂದಿಗೂ ಮತ್ತು ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ‌ ಎಂದು ಬರೆದುಕೊಂಡಿದ್ದಾರೆ.

Leave a Comment