‘ಅಜ್ಜಿ’ ಎಂದವನಿಗೆ ಮಾತಿನ ಚಾಟಿ ಬೀಸಿ ಕ್ಲಾಸ್ ತೆಗೆದುಕೊಂಡ ಮೂವರು ಬಾಲಿವುಡ್ ಬೆಡಗಿಯರು

Entertainment Featured-Articles Movies News

ಬಾಲಿವುಡ್ ನಿರ್ದೇಶಕ, ‌ನಿರ್ಮಾಪಕ ಕರಣ್ ಜೋಹರ್ ಮೊನ್ನೆಯಷ್ಟೇ ತಮ್ಮ 50 ನೇ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಕರಣ್ ಜೋಹರ್ ಬರ್ತ್ ಡೇ ಪಾರ್ಟಿ ವಿಷಯ ದೊಡ್ಡ ಸುದ್ದಿಯಾಗಿತ್ತು. ಈ ಬಾರಿ ಬಾಲಿವುಡ್ ಮಂದಿಯ ಜೊತೆಗೆ ದಕ್ಷಿಣದ ಸ್ಟಾರ್ ಗಳಿಗೂ ಸಹಾ ಆಹ್ವಾನವನ್ನು ನೀಡಲಾಗಿತ್ತು ಎನ್ನುವುದು ಮತ್ತೊಂದು ವಿಶೇಷವಾಗಿತ್ತು. ‌ಬಾಲಿವುಡ್ ಬೆಡಗಿಯರು ರಂಗು ರಂಗಿನ‌ ವಸ್ತ್ರ ಧರಿಸಿ ಪಾರ್ಟಿಯಲ್ಲಿ ಮಿಂಚಿ, ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾದರು.

ಹೀಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ಅವರ ಸಹೋದರಿ ( ತಂಗಿ ) ಅಮೃತಾ ಅರೋರಾ ಅವರು ಸಹಾ ಕ್ಯಾಮರಾಗೆ ಫೋಸ್ ಕೊಟ್ಟಿದ್ದರು. ಹೌದು, ಪಾರ್ಟಿಯಲ್ಲಿ ಕರೀನಾ ಕಪೂರ್, ಮಲೈಕಾ ಅರೋರ ಮತ್ತು ಅಮೃತ ಅರೋರಾ ಜೊತೆಯಾಗಿ ಪೋಸ್ ನೀಡಿದ್ದರು. ಆ ಫೋಟೋವನ್ನು ಮೂವರು ಸಹಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದರು.

ಅಮೃತಾ ಅರೋರಾ ಅವರು ಹಂಚಿಕೊಂಡ ಫೋಟೋ ಗೆ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು, ಬುಡ್ಡಿ ( ಮುದುಕಿ ) ಎಂದು ಟೀಕಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಗಳ ಸ್ಕ್ರೀನ್ ಶಾಟ್ ತೆಗೆದುಕೊಂಡ ಅಮೃತಾ ಅರೋರಾ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ಬಾಕ್ಸ್ ನಲ್ಲಿ ಟಾಪ್ ನಲ್ಲಿ ಕಂಡರೆ, ಕಾಮೆಂಟ್ ನೋಡಲು ಆರಂಭಿಸಿದಾಗ ಮಾತ್ರವೇ ನಾನು ಕಾಮೆಂಟ್ ಗಳನ್ನು ನೋಡುತ್ತೇನೆ.‌ ಬುಡ್ಡಿ ಎಂದರೆ ಅದು ಅಪಮಾನದ ಶಬ್ದವೇ ??

ನನ್ನ ಪ್ರಕಾರ ಇದು ಕೇವಲ ಒಂದು ಪದ. ಇದರ ಅರ್ಥ ವಯಸ್ಸಾದವರು. ಹೌದು ನಾವು ಹಿರಿಯರು ಮತ್ತು ಬುದ್ಧಿವಂತರು. ಆದರೆ ನೀವು ಹೆಸರಿಲ್ಲದವರೇ? ಮುಖ ಇಲ್ಲದವರೇ? ವಯಸ್ಸು ಇಲ್ಲದವರೇ? ನಿಮ್ಮ ಮನೆಯ ಜನರು ಹೀಗೇಯೇ? ಎಂದು ಪ್ರಶ್ನೆ ಗಳನ್ನು ಮಾಡುವ ಮೂಲಕ ಖಡಕ್ ಉತ್ತರವನ್ನು ನೀಡಿದ್ದಾರೆ. ಇದೇ ವೇಳೆ ಅವರು, ನಾನು ದಪ್ಪಗಾದೆ ಎಂದು ಕೆಲವರು ಹೇಟ್ ಮಾಡಿದರು, ಹೌದು ನಾನು ದಪ್ಪಗಾದೆ. ನನ್ನ ತೂಕ ನನ್ನ ಸಮಸ್ಯೆ.

ಯಾವಾಗ ಎಲ್ಲಾ ಇರುತ್ತೋ ಆಗ ಅದೇ ಎಲ್ಲರಿಗೂ ಸಮಸ್ಯೆ ಆಗುತ್ತೆ. ಸೋಶಿಯಲ್ ಮೀಡಿಯಾ ಇರೋದ್ರಿಂದ ನನಗೆ ಮೆಚ್ಚುಗೆ ಬರುವುದು, ಅವಮಾನ ಕೂಡಾ ಆಗುವುದು ಎಂದು ಹೇಳಿದ್ದಾರೆ. ತಂಗಿಯ ಪೋಸ್ಟ್ ಗೆ ಅಕ್ಕ ಮಲೈಕಾ ಪ್ರತಿಕ್ರಿಯೆ ನೀಡಿ, ನೀನು ಹೇಗಿದ್ದೇಯೋ ಹಾಗೆ ಚೆನ್ನಾಗಿದ್ದೀಯಾ. ಬೇರೆಯವರ ಬಾಡಿ ಶೇಮಿಂಗ್ ಮಾಡೋದು ಸರಿಯಲ್ಲ ಎಂದರೆ, ನಟಿ ಕರೀನಾ, ಮೈ ಲವ್ಲಿ ಅಮ್ಮೂ ಎಂದು ಪ್ರತಿಕ್ರಿಯೆ ನೀಡಿ ಅಮೃತಾ ಪರ ಬ್ಯಾಟಿಂಗ್ ಮಾಡಿದ್ದಾರೆ, ಟೀಕಿಸಿದವನಿಗೆ ಚಾಟಿ ಬೀಸಿದ್ದಾರೆ.

Leave a Reply

Your email address will not be published.