ಸ್ಟಾರ್ ನಟನ ಸಿನಿಮಾ ನಿರ್ದೇಶನದಿಂದ ನಯನತಾರ ಪತಿಗೆ ಗೇಟ್ ಪಾಸ್! ತಮಿಳು ಸಿನಿಮಾ ರಂಗದಲ್ಲಿ ಸಂಚಲನ

0
1794

ಒಂದು ಸಿನಿಮಾ(cinema) ಯಶಸ್ಸು ಕೇವಲ ನಾಯಕ ನಟನ ಜನಪ್ರಿಯತೆಯ ಮೇಲೆ ಮಾತ್ರವೇ ನಿಂತಿರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಪ್ರೇಕ್ಷಕರು ಸಿನಿಮಾ ನಿರ್ದೇಶಕರ ಕಡೆಗೂ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಮೊದಲೆಲ್ಲಾ ಸಿನಿಮಾದ ನಾಯಕರನ್ನು ಕೊಂಡಾಡುತ್ತಿದ್ದವರೇ ಈಗ ನಿರ್ದೇಶಕರನ್ನು(cinema Director) ನೋಡಿ ಸಿನಿಮಾ ನೋಡಲು ಹೋಗುವ ಕಾಲ ಬಂದಿದೆ. ಆದ್ದರಿಂದಲೇ ಇಂದು ಒಂದು ಸಿನಿಮಾದ ಯಶಸ್ಸು ಆ ಸಿನಿಮಾದ ನಾಯಕ ನಟ ಮತ್ತು ನಿರ್ದೇಶಕನ ನಡುವಿನ ಉತ್ತಮವಾದ ಸಂವಹನದಿಂದ ಮಾತ್ರವೇ ಸಾಧ್ಯ ಎನ್ನುವುದು ಸತ್ಯ. ನಾಯಕ ಮತ್ತು ನಿರ್ದೇಶಕನ ನಡುವೆ ಉತ್ತಮ ಮಾತುಕತೆ ಇದ್ದಾಗ ಸಿನಿಮಾ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುವುದಕ್ಕೆ ಸಾಧ್ಯವಾಗುತ್ತದೆ.

ತಮಿಳು ಚಿತ್ರರಂಗದಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ದೊಡ್ಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಿರ್ದೇಶಕನಾಗಿದ್ದಾರೆ. ಕಳೆದ ವರ್ಷ ಸ್ಟಾರ್ ನಟಿ ನಯನತಾರಾ(Nayanathara) ಜೊತೆಗೆ ವೈವಾಹಿತ ಜೀವನಕ್ಕೆ ಅಡೆ ಇಟ್ಟಿರುವ ವಿಘ್ನೇಶ್ ಶಿವನ್(Vignesh Shivan) ಹೊಸದೊಂದು ಸಿನಿಮಾ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದರು. ಪ್ರಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಲೈಕ ಪ್ರೊಡಕ್ಷನ್(Lyca Production) ಬ್ಯಾನರ್ ನ ಅಡಿಯಲ್ಲಿ ತಮಿಳಿನ ಹಿರಿಯ ಸ್ಟಾರ್ ನಟ ಅಜಿತ್ (Ajith) ನಾಯಕನಾಗಿರುವ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶನ ಮಾಡಬೇಕಾಗಿತ್ತು.

ಆದರೆ ಈಗ ವಿಘ್ನೇಶ್ ಶಿವನ್ ತಮ್ಮ ಈ ಹೊಸ ಸಿನಿಮಾದ ಪ್ರಾಜೆಕ್ಟ್ ನಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಅಚ್ಚರಿ ಮೂಡಿಸಿದೆ. ಹೌದು, ಚಿತ್ರದ ನಾಯಕ ನಟ ಅಜಿತ್(Ajith) ಮತ್ತು ನಿರ್ದೇಶಕ ವಿಜ್ಞೇಶ್ ಶಿವನ್ (Vignesh Shivan) ಅವರ ನಡುವೆ ಕ್ರಿಯೇಟಿವ್ ಡಿಫರೆನ್ಸ್ ಅಥವಾ ಸೃಜನಶೀಲ ವಿಚಾರಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಇಬ್ಬರ ಆಲೋಚನೆಗಳು ಒಂದಕ್ಕೊಂದು ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ಕಾರಣಕ್ಕೆ ವಿಘ್ನೇಶ್ ಶಿವನ್ ಅಜಿತ್ ಸಿನಿಮಾ ನಿರ್ದೇಶನದಿಂದ ಹೊರ ಬಂದಿದ್ದಾರೆ. ಲೈಕಾ ಪ್ರೊಡಕ್ಷನ್ ಮತ್ತು ನಟ ಅಜಿತ್ ಅವರು ವಿಘ್ನೇಶ್ ಶಿವನ್ ಸ್ಥಾನಕ್ಕೆ ನಿರ್ದೇಶಕನ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here