ಅಚ್ಚರಿ ಮೂಡಿಸಿದ ನವಾಜ್: ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯ ಪಿಸ್ಸೆಗೆ ಪ್ರಪೋಸ್ ಮಾಡಿದ ನವಾಜ್

Entertainment Featured-Articles Movies News

ದಿನ ಕಳೆದಂತೆ ಬಿಗ್ ಬಾಸ್ ಮನೆಯಲ್ಲಿ ರಂಗೇರುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಆರಂಭದ ಎರಡು ದಿನಗಳಿಂದ ಅಷ್ಟಾಗಿ ಮಾತನಾಡದೇ ಇದ್ದ ನವಾಜ್ ಈಗ ತಾನು ಕೂಡಾ ಬಿಗ್ ಬಾಸ್ ಮನೆಯ ಆಟವನ್ನು ಅರಿತುಕೊಂಡ ಹಾಗೆ ಕಂಡಿದ್ದು, ನವಾಜ್ ಆಟವಾಡಲು ಆರಂಭಿಸಿದ್ದಾರೆ. ಸಿನಿಮಾಗಳ ರಿವ್ಯೂ ನೀಡುತ್ತಲೇ ಸಖತ್ ಸದ್ದು ಮಾಡಿದ್ದ ನವಾಜ್ ಗೆ ಬಿಗ್ ಬಾಸ್ ಮನೆಗೆ ಪ್ರವೇಶ ಸಿಕ್ಕಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಸೆಲೆಬ್ರಿಟಿಗಳ ನಡುವೆ ಈ 19 ವರ್ಷದ ಯುವಕ ಎಲ್ಲಿ ಕಳೆದು ಹೋಗುವನೋ ಎನ್ನುವುದು ಸಹಾ ಕೆಲವರ ಅನುಮಾನವಾಗಿತ್ತು. ನವಾಜ್ ಕೂಡಾ ಆರಂಭದಲ್ಲಿ ಅರುಣ್ ಸಾಗರ್ ಅವರ ಬಳಿ ತನಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಹೊಂದಾಣಿಕೆ ಆಗ್ತಿಲ್ಲ ಅಂತ ಹೇಳಿದ್ದುಂಟು.

ಆದರೆ ಈಗ ನವಾಜ್ ಸಹಾ ಮನೆಯ ವಾತಾವರಣದೊಂದಿಗೆ ಹೊಂದಿಕೊಳ್ಳುವ ಹಾಗೆ ಕಾಣುತ್ತಿದೆ. ಸೆಲೆಬ್ರಿಟಿಗಳ ಜೊತೆ ನವಾಜ್ ಬೆರೆಯುತ್ತಿರುವಾಗಲೇ, ಬೈಕ್ ರೇಸರ್ ಐಶ್ವರ್ಯ ಪಿಸೆ ಕಡೆ ನವಾಜ್ ವಿಶೇಷವಾಗಿ ಆಕರ್ಷಿತನಾಗಿರುವುದು ಎಲ್ಲರ ಗಮನಕ್ಕೆ ಬಂದಿದೆ. ಇದನ್ನು ಮನೆಯವರೆಲ್ಲಾ ಸಹಾ ಗಮನಿಸಿದ್ದಾರೆ. ಇಂದು ಬೆಡ್ ರೂಮ್ ನಲ್ಲಿ ಇರುವಾಗ ಮನೆಯ ಮಹಿಳಾ ಸದಸ್ಯರು ಐಶ್ವರ್ಯ ಅವರಿಗೆ ಮೇಕಪ್ ಹಾಕಿ, ನವಾಜ್ ಮುಂದೆ ಹೋಗಿ ಹೇಗಿದ್ದೀನಿ ಎಂದು ಕೇಳೋಕೆ ಹೇಳಿದ್ದಾರೆ. ಐಶ್ವರ್ಯ ಹಾಗೆ ಮಾಡಿದ್ದು, ನವಾಜ್ ಮುಂದೆ ಬಂದು ಹೇಗಿದ್ದೀನಿ ಎಂದಾಗ ಹುಡುಗಿ ತರ ಎಂದಿದ್ದಾರೆ ನವಾಜ್.

ಅನಂತರ ತನ್ನದೇ ಶೈಲಿಯಲ್ಲಿ ನವಾಜ್ ಐಶ್ವರ್ಯ ಪಿಸೆಗೆ ಪ್ರಪೋಜ್ ಮಾಡಿದ್ದಾನೆ. ನವಾಜ್ ಮಾತು ಕೇಳಿ ಐಶ್ವರ್ಯ ನವಾಜ್ ಅನ್ನು ಅಪ್ಪಿಕೊಂಡು, ಹೀಗೆ ಹೇಳಿದ್ರೆ ಹುಡುಗಿ ಖಂಡಿತ ಸಿಗ್ತಾಳೆ ಎಂದಿದ್ದಾರೆ. ಅನಂತರ ಡೈನಿಂಗ್ ಟೇಬಲ್ ಬಳಿ ಸಹಸ ಮತ್ತೊಂದು ಸಲ ನವಾಜ್ ಐಶ್ವರ್ಯ ಅವರಿಗೆ ಪ್ರಾಸ ಪದ ಹೇಳಿ ಪ್ರಪೋಜ್ ಮಾಡಿದ್ದು, ಅರುಣ್ ಸಾಗರ್ ಅವರು ಆಗ ನವಾಜ್ ನ ಅಪ್ಪಿಕೊಂಡಾಗ, ನವಾಜ್ ಅಯ್ಯೋ ಐಶ್ವರ್ಯ ಅವರು ಇನ್ನೊಂದು ಹಗ್ ಕೊಡ್ತಾರೆ ಅನ್ಕೊಂಡ್ರೆ ನೀವು ಕೊಟ್ರಾ ಎಂದಾಗ, ಐಶ್ವರ್ಯ ನಕ್ಕು ನವಾಜ್ ನ ಹಗ್ ಮಾಡಿಕೊಂಡಿದ್ದಾರೆ. ನೀನು ಪ್ರಪೋಸ್ ಮಾಡಿದ ಹುಡುಗಿ ಸಿಕ್ತಾಳೆ ಎಂದಾಗ ನವಾಜ್ ನೀವು ಸಿಗಲ್ವ ಎಂದು ಹೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.

Leave a Reply

Your email address will not be published.