ಅಗಲಿದ ಅಭಿಮಾನಿಯ ಆಪ್ಯಾಯತೆ ಸ್ಮರಿಸಿ, ಭಾವುಕರಾಗಿ ಕೆಲವು ಸಾಲುಗಳನ್ನು ಬರೆದ ಶಂಕರ್ ಅಶ್ವಥ್ ಅವರು

Entertainment Featured-Articles News
36 Views

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಂಕರ್ ಅಶ್ವಥ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟನಾಗಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸಹಾ ಸ್ಪರ್ಧಿಯಾಗಿ ಬಿಗ್ ಹೌಸ್ ಪ್ರವೇಶ ಮಾಡಿದ್ದ ಶಂಕರ್ ಅಶ್ವಥ್ ಅವರು ಶೋ ನ ಮುಖೇನ ಮತ್ತಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದು ಕಡೆ ಸಿನಿಮಾ, ಆದರೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಅರಸಿ ಬರದೇ ಇದ್ದಾಗ ಕ್ಯಾಬ್ ಚಾಲಕನಾಗಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡು ಜೀವನದ ಬಂಡಿಯನ್ನು ನಡೆಸುತ್ತಿರುವ ಅವರನ್ನು ಅಭಿಮಾನಿಸುವ ಮಂದಿಗೂ ಕಡಿಮೆ ಏನಿಲ್ಲ‌.

ಶಂಕರ್ ಅಶ್ವಥ್ ಅವರು ಹತ್ತು, ಹಲವು ವಿಚಾರಗಳನ್ನು ಹಾಗೂ ಅನುಭವಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಳ್ಳುತ್ತಾರೆ. ಆಗಾಗ ಅವರ ತಂದೆ, ಕನ್ನಡ ನಾಡು ಹಾಗೂ ಚಿತ್ರರಂಗ ಎಂದೂ ಮರೆಯಲಾಗದ ಶ್ರೇಷ್ಠ ಕಲಾರತ್ನ ಹಿರಿಯ ನಟ ದಿವಂಗತ ಸಿ.ಅಶ್ವಥ್ ಅವರನ್ನು ಸ್ಮರಿಸಿ, ಅವರ ಬಗ್ಗೆ ಕೂಡಾ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಶಂಕರ್ ಅಶ್ವಥ್ ಅವರು.‌ ಜೀವನದ ಸಿಹಿ ಕಹಿ ಘಟನೆಗಳಿಗೆ ಪದಗಳ ರೂಪ ನೀಡಿ ಜನರ ಮುಂದೆ ಇಡುತ್ತಾರೆ.‌

ಇದೀಗ ಅವರು ತಮ್ಮ ಅಭಿಮಾನಿಯೊಬ್ಬರ ಸ್ಮರಣೆಯನ್ನು ಮಾಡಿಕೊಂಡು, ಫೋಟೋ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡು ಭಾವುಕರಾಗಿದ್ದಾರೆ. ಹೌದು ಶಂಕರ್ ಅಶ್ವಥ್ ಅವರು ಹನುಮಂತಪ್ಪ ಎನ್ನುವ ಕ್ಯಾಬ್ ಚಾಲಕನ ಬಗ್ಗೆ ಬರೆದುಕೊಂಡು, ಆತ ನೀಡಿದ ಆತಿಥ್ಯ, ತೋರಿದ ಆಪ್ಯಾಯತೆ ನೆನಪಿಸಿಕೊಂಡು, ಆತ ಇಹಲೋಕ ತ್ಯಜಿಸಿದ ವಿಚಾರ ತಿಳಿದು ಬಹಳ ನೋವಾಯ್ತು ಎಂದು ಬರೆದುಕೊಂಡಿದ್ದಾರೆ.

ಶಂಕರ್ ಅಶ್ವಥ್ ಅವರು ತಮ್ಮ ಪೋಸ್ಟ್ ನಲ್ಲಿ,
ಮರೆಯಲಾಗದ ಅಭಿಮಾನಿ ಹನುಮಂತಪ್ಪ.!!
ನನ್ನ ಎಡಪಕ್ಕದಲ್ಲಿ ಬಿಳಿ ಶರಟು ಹಾಕಿಕೊಂಡು ಮಗುವಿನ ಜೊತೆ ಇರುವ ಈತ ಹನುಮಂತಪ್ಪ ಕ್ಯಾಬ್ ಚಾಲಕ. ನಾವು ಕೊರೊನಾ ಬರುವ ಮುನ್ನ ಗುಲ್ಬರ್ಗಕ್ಕೆ ಹೋದಾಗ ನಮಗೆ ಕಾರಿನ ಸೇವೆಯನ್ನು ಒದಗಿಸುವುದಲ್ಲದೇ ಬಹಳ ಅಭಿಮಾನದಿಂದ ಕಾಳಜಿ ವಹಿಸಿದನಲ್ಲದೆ, ತನ್ನ ಹಳ್ಳಿಯ ಮನೆಗೆ ಕರೆದುಕೊಂಡು ಹೋಗಿ, ತಾನೇ ಆರ್ಥಿಕವಾಗಿ ಸುಭೀಕ್ಷ ನಲ್ಲದಿದ್ದರೂ ನನಗೆ ಅತಿಥ್ಯವನ್ನು ಮಾಡಿದ.

ಮಹಾನ್ ವ್ಯಕ್ತಿ ಇಂದು ಆತನೊಡನೆ ಮಾತನಾಡಲು ಫೋನ್ ಮಾಡಿದಾಗ ಆತನ ಮಡದಿ ತನ್ನ ಗಂಡ ಕಳೆದ ಜೂನ್ ತಿಂಗಳಲ್ಲಿ ಅ ಪ ಘಾತಕ್ಕೆ ಸಿಲುಕಿ ಸ್ಥಳದಲ್ಲೇ ಮೃ ತ ಪಟ್ಟರು ಎಂದಾಗ ಹೃದಯದ ಯಾವುದೋ ಒಂದು ಮೂಲೆಯಲ್ಲಿ ನನಗಾದ ನೋವು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕೆಲವರನ್ನು ಜೀವನದಲ್ಲಿ ಮರೆಯಲು ಆಗುವುದಿಲ್ಲ ಕಾರಣ ಅವರ ಹೃದಯಸ್ಪರ್ಶಿ ಸೆಳೆತ ಎಂದು ಬರೆದುಕೊಂಡು ಭಾವುಕರಾಗಿದ್ದಾರೆ.

Leave a Reply

Your email address will not be published. Required fields are marked *