ಅಖಿಲಾಂಡೇಶ್ವರಿಗೆ ಠಕ್ಕರ್ ಕೊಟ್ಟ ಪಾರು: ಪಾರುವಿನ ಗತ್ತು, ಗಮ್ಮತ್ತಿಗೆ ಅಖಿಲಾಂಡೇಶ್ವರಿಯೇ ಶಾಕ್!!!

Entertainment Featured-Articles News

ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದು ಪಾರು, ಜನ ಮನವನ್ನು ಗೆದ್ದಿರುವ ಪಾರು ಸೀರಿಯಲ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ರೋಚಕವಾಗಿ ಸಾಗುತ್ತಿದೆ. ಪ್ರೇಕ್ಷಕರನ್ನು ತನ್ನ ಕಡೆ ಸೆಳೆಯುತ್ತಿದೆ. ಮುಂದೆ ಏನಾಗಲಿದೆ? ಎನ್ನುವ ಕುತೂಹಲವನ್ನು ಮೂಡಿಸುತ್ತದೆ. ಅರಸನ ಕೋಟೆಯ ಹಿರಿ ಸೊಸೆಯಾಗಿ, ಅಖಿಲಾಂಡೇಶ್ವರಿಯ ಇಚ್ಛೆಗೆ ವಿ ರು ದ್ಧವಾಗಿ ಪಾರು ಆದಿಯ ಪತ್ನಿಯಾಗಿದ್ದಾಳೆ. ಆದರೆ ಇದನ್ನು ಅರಗಿಸಿಕೊಳ್ಳುವುದು ಅಖಿಲಾಂಡೇಶ್ವರಿಗೆ ಸಾಧ್ಯವಾಗಿಲ್ಲ. ಅಖಿಲಾಂಡೇಶ್ವರಿಯ ಸಿಟ್ಟು ಕಡಿಮೆಯಾಗಿಲ್ಲ. ಪಾರು ಮೋಸ ಮಾಡಿದಳು ಎನ್ನುವ ಬೇಸರ ಕಡಿಮೆಯಾಗಿಲ್ಲ.

ಅಮ್ಮ ಅಖಿಲಾಂಡೇಶ್ವರಿ ಎಷ್ಟೇ ಕೋಪ ಮಾಡಿಕೊಂಡರೂ ತನ್ನ ನಿಯತ್ತನ್ನು ಮಾತ್ರ ಪಾರು ಮರೆತಿಲ್ಲ. ಅಖಿಲಾಂಡೇಶ್ವರಿಯನ್ನು ದೇವರೆಂದೇ ಆರಾಧಿಸುವ ಪಾರುಗೆ ಈಗ ತಾನು ಅಖಿಲಾಂಡೇಶ್ವರಿಯ ಅರಸನ ಕೋಟೆಗೆ ತಕ್ಕ ಸೊಸೆ ಎಂದು ಸಾಬೀತು ಮಾಡಿಕೊಳ್ಳುವ ಸವಾಲು ಎದುರಾಗಿದೆ. ಅದರ ಭಾಗವಾಗಿಯೇ ಪಾರು ಗೆ ಅಖಿಲಾಂಡೇಶ್ವರಿಯು ಕೆಲವೊಂದು ಪರೀಕ್ಷೆಗಳನ್ನು ಒಡ್ಡುತ್ತಿದ್ದು, ಇದು ಪ್ರೇಕ್ಷಕರ ಗಮನವನ್ನು ಸೆಳೆದಿದೆ.

ಅಖಿಲಾಂಡೇಶ್ವರಿಯು ಪರಿಸ್ಥಿತಿಗಳ ಬೆಳೆವಣಿಗೆಯಲ್ಲಿ ತಾನು ಪಾರುವಿನ ಹಾಗೆ ಮನೆ ಕೆಲಸಗಳನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದು, ಪಾರುವಿಗೆ ಅರಸನ ಕೋಟೆಯ ಜವಾಬ್ದಾರಿ ನೀಡಿ ಒಂದು ತಿಂಗಳ ಕಾಲಾವಕಾಶವನ್ನು ಕೊಟ್ಟು, ಈ ಸಮಯದಲ್ಲಿ ತಾನು ಸಮರ್ಥವಾಗಿ ಮನೆಯನ್ನು ನಿಭಾಯಿಸಿ ತೋರಿಸುವ ಸವಾಲನ್ನು ಹಾಕಿದ್ದು, ಇದು ಪಾರು ಗೆ ಸಿಕ್ಕಿರುವ ಮಹತ್ವದ ಅವಕಾಶವಾಗಿದೆ. ಈ ಸವಾಲಿನಲ್ಲಿ ಗೆದ್ದರೆ ಅಖಿಲಾಂಡೇಶ್ವರಿ ಪಾರುವನ್ನು ಅರಸನ ಕೋಟೆಗೆ ತಕ್ಕ ಸೊಸೆ ಎಂದು ಒಪ್ಪುವುದು ಖಚಿತ‌.

ಪಾರು ತಾನು ಅಖಿಲಾಂಡೇಶ್ವರಿಯ ಹಾಗೆ ಮನೆ ನಿಭಾಯಿಸಬಲ್ಲೇ ಎನ್ನುವುದನ್ನು ಸಾಬೀತು ಮಾಡಲು ಈಗಾಗಲೇ ಪ್ರಯತ್ನವನ್ನು ಆರಂಭಿಸಿದ್ದು ಅದರ ಭಾಗವಾಗಿಯೇ ತಾನು ಕೂಡಾ ಅಖಿಲಾಂಡೇಶ್ವರಿಯ ಹಾಗೆ ಬಟ್ಟೆ, ಒಡವೆಗಳನ್ನು ಧರಿಸಿದ್ದು, ಅದೇ ಗತ್ತು ಗಮ್ಮಿತ್ತಿನಿಂದ ಬರುತ್ತಿದ್ದಾಳೆ. ಪಾರುವಿನ ಹೊಸ ಗೆಟಪ್ ನೋಡಿ ಮನೆ ಮಂದಿ ಎಲ್ಲಾ ಅಚ್ಚರಿ ಪಟ್ಟಿದ್ದಾರೆ. ಖುದ್ದು ಅಖಿಲಾಂಡೇಶ್ವರಿ ಸಹಾ ಅಚ್ಚರಿ ಪಟ್ಟಿರುವುದು ವಾಸ್ತವ.

ಪಾರು ಗತ್ತು ಗಮ್ಮತ್ತು ಕೇವಲ ವಸ್ತ್ರಗಳಿಗೆ ಮಾತ್ರವೇ ಸೀಮಿತವಾಗುವುದೇ ಅಥವಾ ಪಾರು ತಾನು ಅಖಿಲಾಂಡೇಶ್ವರಿಯ ಹಾಗೆ ಅದೇ ಗತ್ತು, ಅದೇ ದರ್ಪ ಹಾಗೂ ಅದೇ ಗಾಂಭೀರ್ಯದಲ್ಲಿ ಸಹಾ ತಾನು ಸಮರ್ಥಳು ಎನ್ನುವುದನ್ನು ಸಾಬೀತು ಮಾಡುವಳೇ ಎನ್ನುವುದನ್ನು ಮಹಾ ಸಂಚಿಕೆಯಲ್ಲಿ ನೋಡಬೇಕಾಗಿದೆ. ಪಾರು ಮಹಾ ಸಂಚಿಕೆಯ ಪ್ರೋಮೋ ಹೊರ ಬಂದಿದ್ದು ವೀಕ್ಷಕರ ಗಮನವನ್ನು ಸೆಳೆಯುತ್ತಿದೆ.

Leave a Reply

Your email address will not be published.