“ಅಕ್ಷಯ್ ಕುಮಾರ್ ಸಿನಿಮಾ ನೋಡೋರಿಗೆ ನಾಚಿಕೆ ಆಗ್ಬೇಕು” ಸಿನಿಮಾ ವಿ ರು ದ್ಧ ರೈತರ ಘೋಷಣೆ

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ಸದಾ ಒಂದಲ್ಲ ಒಂದು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟ ಎಂದರೆ ಅದು ಅಕ್ಷಯ್ ಕುಮಾರ್ ಅವರು. ಇವರು ವರ್ಷದಲ್ಲಿ ಏನಿಲ್ಲವೆಂದರೂ ಸುಮಾರು ಮೂರು ಸಿನಿಮಾಗಳಲ್ಲಿ ಆದರೂ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ‌. ಆದರೆ ಕಳೆದ ಕೆಲ ಕಾಲದಿಂದಲೂ ಕೊರೊನಾ ಎನ್ನುವ ಆತಂಕ ಇರುವುದರಿಂದ ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೂ ಸಹ ಬ್ರೇಕ್ ಬಿದ್ದಿದೆ. ಇದೀಗ ಬಹಳ ದಿನಗಳ ನಂತರ ನಟ ಅಕ್ಷಯ್ ಕುಮಾರ್ ಅವರು ನಟಿಸಿರುವ ಬೆಲ್ ಬಾಟಮ್ ಸಿನಿಮಾ ತೆರೆಕಂಡಿದೆ. ಸಿನಿಮಾ ಬಿಡುಗಡೆಯ ನಂತರ ಪ್ರೇಕ್ಷಕರು ಹಾಗೂ ಚಿತ್ರ ವಿಮರ್ಶಕರಿಂದ ಸಿನಿಮಾದ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಸಿನಿಮಾ ಕೂಡಾ ಸಾಧಾರಣ ಮಟ್ಟದ ಗಳಿಕೆಯೊಂದಿಗೆ ಮುಂದೆ ಸಾಗುತ್ತಿದೆ.

ಕೊರೊನಾ ಲಾಕ್ ಡೌನ್ ಸಡಿಲಿಕೆ ಆದ ಮೇಲೆ ಸಿನಿಮಾ ಥಿಯೇಟರ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ‌. 50% ಆಸನಗಳ ಭರ್ತಿಗೆ ಅನುಮತಿಯನ್ನು ನೀಡಲಾಗಿದೆ. ಆದಾಗ್ಯೂ ಕೊರೊನಾ ಆತಂಕದಿಂದ ಜನರು ಚಿತ್ರಮಂದಿರಗಳ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ನಟ ಅಕ್ಷಯ್ ಕುಮಾರ್ ಅವರ ಬೆಲ್ ಬಾಟಂ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಪಂಜಾಬಿನಲ್ಲಿ ರೈತರು ಸಿನಿಮಾದ ವಿರುದ್ಧ ಪ್ರ ತಿ ಭಟನೆಯನ್ನು ಮಾಡಲು ಮುಂದಾಗಿದ್ದಾರೆ. ಅಕ್ಷಯ್ ಕುಮಾರ್ ಕುರಿತಾಗಿ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ‌. ಪಂಜಾಬಿನ ಕೆಲವು ಚಿತ್ರಮಂದಿರಗಳಲ್ಲಿ ಬೆಲ್ ಬಾಟಮ್ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ಚಿತ್ರಮಂದಿರಗಳ ಮುಂದೆ ರೈತರು ಪ್ರ ತಿ ಭ ಟ ನೆ ನಡೆಸಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾ ಬಿಡುಗಡೆ ಆದ ನಂತರ ಅಭಿಮಾನಿಗಳಿಗೆ ಮಾತ್ರವೇ ಅಲ್ಲದೇ ಸಿನಿಮಾ ನೋಡಲು ಮುಗಿ ಬೀಳುವ ಜನರಿಗೆ “ಅಕ್ಷಯ್ ಕುಮಾರ್ ಸಿನಿಮಾ ನೋಡಿದವರಿಗೆ ನಾಚಿಕೆಯಾಗಬೇಕು” ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇಷ್ಟಕ್ಕೂ ಪಂಜಾಬಿನ ರೈತರು ಬೆಲ್ ಬಾಟಮ್ ಸಿನಿಮಾ ವಿರುದ್ಧ ಘೋಷಣೆಗಳನ್ನು ಕೂಗಿ ಬ ಹಿ ಷ್ಕಾರ ಹಾಕಲು ಕಾರಣ ಹೇಳುವುದಾದರೆ, ಸಿನಿಮಾದಲ್ಲಿ ಯಾವುದೇ ರೀತಿಯ ಆಕ್ಷೇಪಣಾರ್ಹ ಸನ್ನಿವೇಶಗಳು ಇಲ್ಲ. ಆದರೆ ಈ ಹಿಂದೆ ಹೊಸ ಕೃಷಿ ನೀತಿಯನ್ನು ವಿರೋಧಿಸಿ ಪಂಜಾಬಿನ ರೈತರು ಪ್ರತಿಭಟನೆಯನ್ನು ನಡೆಸಿದ ವಿಷಯ ಎಲ್ಲರಿಗೂ ತಿಳಿದೇ ಇದೆ.

ರಾಷ್ಟ್ರ ವ್ಯಾಪಿ ಈ ರೈತ ಪ್ರ ತಿ ಭಟ ನೆಯ ವಿಷಯ ದೊಡ್ಡ ಸುದ್ದಿಯಾಗಿತ್ತು. ಆಗ ನಟ ಅಕ್ಷಯ್ ಕುಮಾರ್ ಅವರು ರೈತರ ಈ ಪ್ರ ತಿ ಭ ಟನೆಯನ್ನು ‘ಒಂದು ಪ್ರಚಾರ’ ಎಂದು ಕರೆದು ಟೀಕೆ ಮಾಡಿದ್ದರು. ಆದ ಕಾರಣ ಇದೀಗ ಪಂಜಾಬಿನ ರೈತರು ನಟ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ಬಿಡುಗಡೆಯ ನಂತರ ಅಂದು ಅಕ್ಷಯ್ ಕುಮಾರ್ ಅಂದು ಆಡಿದ ಮಾತಿಗೆ ತಮ್ಮ ಕೋಪ ಮತ್ತು ಅಸಮಾಧಾನವನ್ನು ಹೊರ ಹಾಕುತ್ತಾ, ಬೆಲ್ ಬಾಟಂ ಸಿನಿಮಾವನ್ನು ಬಹಿಷ್ಕರಿಸುವಂತೆ ಕರೆಯನ್ನು ನೀಡಿದ್ದಾರೆ.

Leave a Comment