HomeEntertainmentಪಠಾಣ್ ವಿವಾದ: ಮೋದಿ ಹೇಳಿದ್ಮೇಲೆ ಮುಗೀತು ಬಿಡಿ ಅಂತ ಅಕ್ಷಯ್ ಕುಮಾರ್ ಹೇಳಿದ ಮಾತು ವೈರಲ್

ಪಠಾಣ್ ವಿವಾದ: ಮೋದಿ ಹೇಳಿದ್ಮೇಲೆ ಮುಗೀತು ಬಿಡಿ ಅಂತ ಅಕ್ಷಯ್ ಕುಮಾರ್ ಹೇಳಿದ ಮಾತು ವೈರಲ್

Akshay Kumar : ಸಿನಿಮಾ ವಿಚಾರವಾಗಿ ಬಿಜೆಪಿ ನಾಯಕರು ಅನಾವಶ್ಯಕ ವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಮಾತನಾಡುತ್ತಾ, ಹೀಗೆಲ್ಲಾ ಮಾಡುತ್ತಾ ಕೂರಬೇಡಿ ಎಂದು ಕಿವಿ ಮಾತೊಂದನ್ನು ಹೇಳುವ ಮೂಲಕ ಒಂದು ಎಚ್ಚರಿಕೆಯನ್ನು ನೀಡಿದ್ದರು. ನರೇಂದ್ರ ಮೋದಿಯವರು ಹೇಳಿದ ಮಾತು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಅಸಮಾಧಾನವನ್ನು ಸಹಾ ಹೊರ ಹಾಕಿದ್ದರು. ಈಗ ಇದೇ ವಿಚಾರವಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಶಾರೂಖ್(Shahrukh), ದೀಪಿಕಾ(Deepika) ಜೋಡಿಯಾಗಿ ನಟಿಸಿರುವ ಪಠಾಣ್(Pathan) ಸಿನಿಮಾದ ಬೇಷರಂ ರಂಗ್(Besharam Rang) ಹಾಡಿನ ಬಿಡುಗಡೆ ನಂತರ, ಹಾಡಿನಲ್ಲಿ ನಟಿ ದೀಪಿಕಾ ಧರಿಸಿದ್ದ ಕೇಸರಿ ಬಿ ಕಿ ನಿ(Deepika Bikini) ದೊಡ್ಡ ವಿ ವಾ ದಕ್ಕೆ ಕಾರಣವಾಗಿತ್ತು. ಕೇಸರಿ ಬಣ್ಣದ ಬಿ ಕಿ ನಿ ಧರಿಸಿ ಹಿಂದುತ್ವ ವನ್ನು ಟಾರ್ಗೆಟ್ ಮಾಡಲಾಗಿದೆ, ಸಿನಿಮಾದಲ್ಲಿ ಬೇಕಂತಲೇ ಕೇಸರಿ ಇರಿಸಲಾಗಿದೆ, ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದೆಲ್ಲಾ ಮಾತುಗಳು ಕೇಳಿ ಬಂದು ಇದು ಸಹಾ ದೊಡ್ಡ ಮಟ್ಟದಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿತ್ತು. ಇದನ್ನೆಲ್ಲಾ ಗಮನಿಸಿದ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ನಾವಿಲ್ಲ ಅಂದ್ರೆ ಮನರಂಜನೆ ಇಲ್ಲ: ಬಾಯ್ಕಾಟ್ ವಿರುದ್ಧ ಮತ್ತೆ ಗುಡುಗಿದ ಕರೀನಾ ಕಪೂರ್

ಪಠಾಣ್(Pathan) ಸಿನಿಮಾದ ಬೇಷರಂ ರಂಗ್ ಹಾಡಿನ ಬಗ್ಗೆ ಅನಗತ್ಯ ಹೇಳಿಕೆಯನ್ನು ನೀಡುತ್ತಾ, ವಿ ವಾ ದವನ್ನು ಸೃಷ್ಟಿ ಮಾಡಲಾಗುತ್ತಿದೆ. ಇಂತಹ ವಿಷಯಗಳ ಚರ್ಚೆಯ ಕಾರಣದಿಂದಾಗಿ ಮುಖ್ಯ ವಿಷಯಗಳು ಹಿಂದೆ ಬೀಳುತ್ತಿವೆ. ಆ ರೀತಿ ಆಗಬಾರದು ಎನ್ನುವ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರು ಹೇಳುವ ಮೂಲಕ ಆ ವಿಚಾರವನ್ನು ಪಕ್ಕಕ್ಕಿಡುವಂತೆ ಸೂಚನೆಯೊಂದನ್ನು ನೀಡಿದ್ದರು. ಈಗ ಇದಕ್ಕೆ ನಟ ಅಕ್ಷಯ್ ಕುಮಾರ್ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸಕಾರಾತ್ಮಕ ವಿಚಾರವನ್ನು ಸ್ವಾಗತಿಸಬೇಕು, ಅದನ್ನೇ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ದೇಶದ ಬಹುದೊಡ್ಡ ಪ್ರೇರಣಾದಾಯಕ ವ್ಯಕ್ತಿಯಾಗಿದ್ದಾರೆ. ನರೇಂದ್ರ ಮೋದಿಯವರು ಏನಾದರೂ ಹೇಳಿದರೆ ಬದಲಾವಣೆ ಖಂಡಿತ ಆಗುತ್ತದೆ. ಅದು ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಆಗುವುದು. ನಾವು ಸಿನಿಮಾ ಮಾಡುತ್ತೇವೆ, ಸೆನ್ಸಾರ್ ಆಗುತ್ತದೆ. ಆಮೇಲೆ ಯಾರೋ ಏನೋ ಹೇಳಿದರೆ ಅದು ಇನ್ನಷ್ಟು ಕ್ಲಿಷ್ಟ ಆಗುತ್ತದೆ. ಆದರೆ ಈಗ ನರೇಂದ್ರ ಮೋದಿಯವರೇ ಈ ಬಗ್ಗೆ ಮಾತನಾಡಿರುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ ನಟ.

- Advertisment -