ಅಕ್ಷಯ್ ಕುಮಾರ್ ಗೆ ಇರುವ ಕಾಳಜಿ ಉಳಿದಿಬ್ಬರು ಪದ್ಮಶ್ರೀ ಪುರಸ್ಕೃತರಿಗೆ ಇಲ್ಲವೇ?? ನೆಟ್ಟಿಗರು ಗರಂ

0 5

ಪಾನ್ ಮಸಾಲಾದಂತಹ ಜಾಹೀರಾತುಗಳಲ್ಲಿ ಸ್ಟಾರ್ ನಟರು ಕಾಣಿಸಿಕೊಂಡರೆ ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿ ನೆಟ್ಟಿಗರು ಇದರ ಬಗ್ಗೆ ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರಹಾಕುತ್ತಾರೆ. ಹಣಕ್ಕಾಗಿ ಸ್ಟಾರ್ ಗಳು ಎನಿಸಿಕೊಂಡವರು ಜನರನ್ನು ಇಂತಹ ಜಾಹೀರಾತುಗಳ ಮೂಲಕ ತಪ್ಪು ದಾರಿಗೆ ಹೋಗುವಂತೆ ಮಾಡುತ್ತಿದ್ದಾರೆ ಎನ್ನುವ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಇನ್ನು ಇತ್ತೀಚಿಗೆ ಪದ್ಮಶ್ರೀ ಪುರಸ್ಕೃತರಾದಂತಹ ಮೂರು ಜನ ಸ್ಟಾರ್ ನಟರು ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಜಾಹೀರಾತು ನೋಡಿದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ, ನೆಟ್ಟಿಗರು ಅಸಮಾಧಾನವನ್ನು ಸಹಾ ಹಿರ ಹಾಕಿದ್ದಾರೆ. ಸಾಕಷ್ಟು ಜನರು ಬಾಲಿವುಡ್ ನಟರು ಹಣಕ್ಕಾಗಿ ಯುವಜನರನ್ನು ತಪ್ಪು ದಾರಿಗೆ ನಡೆಸಿದ್ದಾರೆ ಎಂದು ದೂಷಿಸಿದರು. ಇದೇ ವೇಳೆ ದಕ್ಷಿಣದ ಸ್ಟಾರ್ ನಟ ಅಲ್ಲು ಅರ್ಜುನ್ ಅವರು ತಂಬಾಕು ಉತ್ಪನ್ನವೊಂದರ ಜಾಹೀರಾತು ವಿಚಾರದಲ್ಲಿ ಎಷ್ಟೇ ಹಣ ಕೊಟ್ಟರೂ ಅಭಿಮಾನಿಗಳ ಒಳಿತಿಗಾಗಿ ತಾನು ಇಂತಹ ಜಾಹೀರಾತು ಮಾಡುವುದಿಲ್ಲ ಎಂದರು.

ಅಲ್ಲು ಅರ್ಜುನ್ ವಿಷಯ ವೈರಲ್ ಆದ ಕೂಡಲೇ ನೆಟ್ಟಿಗರು ಬಾಲಿವುಡ್ ನಟರಿಗೂ ದಕ್ಷಿಣದ ನಟರಿಗೂ ಇರುವ ವ್ಯತ್ಯಾಸ ನೋಡಿ ಎಂದು ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮೂವರು ಬಾಲಿವುಡ್ ಸ್ಟಾರ್ ಗಳನ್ನು ಭರ್ಜರಿ ಟ್ರೋಲ್ ಮಾಡಿದರು. ಅದರಲ್ಲೂ ನಟ ಅಕ್ಷಯ್ ಕುಮಾರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನ ಈ ಮೂರು ಜನ ಸ್ಟಾರ್ ನಟರ ಬಗ್ಗೆ ಟೀಕೆಗಳು ಕೇಳಿ ಬಂದ ಮೇಲೆ ಅಕ್ಷಯ್ ಕುಮಾರ್ ಅವರು ಹೊಸ ಘೋಷಣೆ ಮಾಡಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಹಾಗೂ ಜನರ ಕ್ಷಮಾಪಣೆ ಕೋರಿದ ನಟ ಅಕ್ಷಯ್ ಕುಮಾರ್ ತಾನು ಭವಿಷ್ಯದಲ್ಲಿ ಇಂತಹ ಜಾಹೀರಾತು ಮಾಡುವುದಿಲ್ಲ. ಅಲ್ಲದೇ ಈ ಜಾಹೀರಾತಿನಿಂದ ಬಂದಿರುವ ಹಣವನ್ನು ಸಹಾ ಯಾವುದಾದರೂ ಒಂದು ಉತ್ತಮ ಕೆಲಸಕ್ಕೆ ಬಳಸುವುದಾಗಿ ಹೇಳುವ ಮೂಲಕ, ತಾನು ಮಾಡಿದ ತಪ್ಪನ್ನು ಎಲ್ಲರೂ ಕ್ಷಮಿಸಿಬೇಕೆಂದು ಮನವಿಯನ್ನು ಮಾಡಿಕೊಂಡರು. ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಯಿತು.

ಆದರೆ, ಇದಾದ ನಂತರ ನೆಟ್ಟಿಗರು ಮತ್ತೆ ಪ್ರಶ್ನೆ ಮಾಡಿದ್ದು, ಅಕ್ಷಯ್ ಕುಮಾರ್ ಅವರು ತೋರಿಸಿದ ಕಾಳಜಿ ಉಳಿದ ಇಬ್ಭರು ನಟರಿಗೆ ಏಕಿಲ್ಲ ??ಎಂದು. ನಟ ಅಜಯ್ ದೇವಗನ್ ಅಥವಾ ಶಾರೂಖ್ ಖಾನ್ಬೀ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ಏಕೆ ನೀಡಿಲ್ಲ, ಅವರು ಕೂಡಾ ಅಕ್ಷಯ್ ಕುಮಾರ್ ಅವರಂತೆ ಏಕೆ ನಿರ್ಧಾರ ಮಾಡಿಲ್ಲ, ಅವರಿಗೆ ಜನರ ಬಗ್ಗೆ ಕಾಳಜಿಯಿಲ್ಲವೇ? ಹಣವೇ ಮುಖ್ಯವಾಯಿತೇ? ಎಂದು ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಆ ನಟರು ಏನು ಉತ್ತರ ನೀಡುವರೋ ಸದ್ಯಕ್ಕಂತೂ ಗೊತ್ತಿಲ್ಲ.

Leave A Reply

Your email address will not be published.