ಅಕ್ಕ ಕರಿಷ್ಮಾ ಕಪೂರ್‌ ಮಗಳ ಕೆಟ್ಟ ಚಟದ ಬಗ್ಗೆ ನಟಿ ಕರೀನಾ ಕಪೂರ್ ಕಳವಳ ಮತ್ತು ಕಾಳಜಿ!! ಯಾವುದು ಆ ಕೆಟ್ಟ ಚಟ?

0 1

ಬಾಲಿವುಡ್ ನಟಿ ಕರೀನಾ ಕಪೂರ್ ಅಕ್ಕ ನಟಿ ಕರಿಷ್ಮಾ ಕಪೂರ್‌ ಸಹಾ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ಎಂದು ತಿಳಿದೇ ಇದೆ. ಕರಿಷ್ಮಾ ಕಪೂರ್ ಅವರನ್ನು ಬಿಟೌನ್ ನಲ್ಲಿ ಲೋಲೋ ಎಂದೇ ಕರೆಯಲಾಗುತ್ತದೆ. ಇದೀಗ ಕರೀನಾ ಕಪೂರ್ ಅವರ ಅಕ್ಕನ ಮಗಳು ಸಮೈರಾ ಕಪೂರ್ ಗೆ ಸಂಬಂಧಿಸಿದ ಒಂದು ವಿಷಯ ವೈರಲ್ ಆಗುತ್ತಿದೆ, ಅಲ್ಲದೇ ಸಮೈರಾಳ ಚಿಕ್ಕಮ್ಮನಾಗಿರುವ ನಟಿ ಕರೀನಾ ಅಕ್ಕನ ಮಗಳ ಒಂದು ಕೆಟ್ಟ‌ ಚಾಳಿಯ ಕುರಿತಾಗಿ ಕಳವಳವನ್ನು ಸಹಾ ವ್ಯಕ್ತಪಡಿಸಿದ್ದು, ತಮ್ಮ ಅಕ್ಕನಿಗೆ ಈ ವಿಚಾರವಾಗಿ ಸಲಹೆ ನೀಡಿದ್ದಾರಂತೆ.

ನಟಿ ಕರೀನಾ ಕಪೂರ್ ಎಷ್ಟೇ ಬ್ಯುಸಿಯಾಗಿದ್ದರೂ ಸಹಾ ತಮ್ಮ‌ ಕುಟುಂಬದ ಕಡೆಗೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ಮನೆ, ಗಂಡ, ಮಕ್ಕಳು ಎಂದು ವಿಶೇಷ ಆಸಕ್ತಿ ವಹಿಸುವ ಕರೀನಾ ಒಬ್ಬ ಒಳ್ಳೆ ಪತ್ನಿ ಹಾಗೂ ತಾಯಿ ಮಾತ್ರವೇ ಅಲ್ಲದೇ ಒಳ್ಳೆಯ ಚಿಕ್ಕಮ್ಮ ಕೂಡಾ ಎನಿಸಿಕೊಂಡಿದ್ದಾರೆ. ಅಕ್ಕನ ಮಗಳ ಬಗ್ಗೆಯೂ ಸಹಾ ಕರೀನಾ ವಿಶೇಷ ಕಾಳಜಿ ವಹಿಸುವ ಜೊತೆಗೆ ವಾತ್ಸಲ್ಯವನ್ನು ಸಹಾ ಹೊಂದಿದ್ದಾರೆ. ಅಕ್ಕನ ಮಗಳನ್ನು ತುಂಬಾ ಪ್ರೀತಿಸುತ್ತಾರೆ ಕರೀನಾ.

ಸಮೈರಾಳನ್ನು ಬಹಳ ಇಷ್ಟಪಡುವ ಕರೀನಾಗೆ ಸಮೈರಾಳ ಒಂದು ಅಭ್ಯಾಸ ಮಾತ್ರ ಇಷ್ಟವಾಗುವುದಿಲ್ಲ ಹಾಗೂ ಸಮೈರಾ ಅದರ ಕಡೆಗೆ ಗಮನ ನೀಡಬೇಕೆನ್ನುವುದು ಕರೀನಾ ಅವರ ವಿಚಾರವಾಗಿದೆ. ಅಕ್ಕನ ಜೊತೆ ಮಾತನಾಡುವಾಗಲೂ ಕರೀನಾ ಮಗಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ಹಲವು ಬಾರಿ ಸಲಹೆಗಳನ್ನು ಸಹಾ ನೀಡುತ್ತಾರೆ ಎನ್ನಲಾಗಿದೆ. ಕರೀನಾ ಅಕ್ಕನ ಮಗಳ ಅಭ್ಯಾಸದ ಕುರಿತಾಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದರು.

ನಟಿ ಕರೀನಾ ಕಪೂರ್ ಹೇಳುವಂತೆ ಅವರ ಅಕ್ಕನ ಮಗಳು ಸಮೈರಾ ಗೆ ಇರುವ ಕೆಟ್ಟ ಚಟ ಏನೆಂದರೆ ಮೊಬೈಲ್ ಗೆ ಅಡಿಕ್ಟ್ ಆಗಿರುವುದು. ಸಮೈರಾ ಇಡೀ ದಿನ ಮೊಬೈಲ್ ನಲ್ಲೇ ಮುಳುಗಿ ಹೋಗಿರುತ್ತಾಳೆ ಎನ್ನುತ್ತಾರೆ ಕರೀನಾ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಕಳೆಯುವ ಸಮೈರಾ ಅದರ ಬಳಕೆಯನ್ನು ಕಡಿಮೆ ಮಾಡಬೇಕು, ಈ ವಿಚಾರ ಅಕ್ಕ‌ನಿಗೂ ಹೇಳಿದ್ದೇನೆ ಎಂದಿದ್ದಾರೆ ಬಾಲಿವುಡ್ ನಟಿ ಕರೀನಾ.

ನೀವು ಇಡೀ ದಿನ ಹೀಗೆ ಸೋಶಿಯಲ್ ಮೀಡಿಯಾಗಳಲ್ಲಿ ಕಳೆದು ಹೋದರೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ. ಅಲ್ಲದೇ ಪುಸ್ತಕ ಓದುವುದಕ್ಕೆ, ಕುಟುಂಬ, ಸ್ನೇಹಿತರಿಗೆ ಸಮಯವನ್ನು ನೀಡಲು ಆಗುವುದಿಲ್ಲ. ಈ ಚಟ ಹಾಗೆ ಮುಂದುವರೆದರೆ ಹೊರಗಿನ ಜಗತ್ತಿನೊಡನೆ ಒಡನಾಟ ಕಷ್ಟವಾಗುತ್ತದೆ ಎಂದು ಅಕ್ಕನ ಮಗಳ ಬಗ್ಗೆ ಕರೀನಾ ಕಳಕಳಿಯನ್ನು ವ್ಯಕ್ತಪಡಿಸುತ್ತಾರೆ.

Leave A Reply

Your email address will not be published.