ಅಕ್ಕ ಆಯ್ತು ಈಗ ತಂಗಿ: ತನ್ನ ತಂಗಿಯ ಫೋಟೋ ಶೇರ್ ಮಾಡಿ ಉರ್ಫಿ ಕೇಳಿದ ಪ್ರಶ್ನೆಗೆ ನೆಟ್ಟಿಗರು ಕಕ್ಕಾಬಿಕ್ಕಿ!

Written by Soma Shekar

Published on:

---Join Our Channel---

ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವವರಿಗೆ ಉರ್ಫಿ ಜಾವೇದ್ ಹೆಸರು ಖಂಡಿತ ಅಪರಿಚಿತ ಏನಲ್ಲ. ಕಳೆದ ವರ್ಷ ಹಿಂದಿಯಲ್ಲಿ ಆರಂಭವಾದ ಬಿಗ್ ಬಾಸ್ ಓಟಿಟಿಯ ಮೊದಲನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆಗೆ ಹೋಗಿ ಬಂದ ಮೇಲೆ ಉರ್ಫಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅಂದರೆ ಉರ್ಫಿಗೆ ಯಾವುದೋ ಹೊಸ ಸಿನಿಮಾ, ಟಿವಿ ಅಥವಾ ರಿಯಾಲಿಟಿ ಶೋ ನಲ್ಲಿ ಆಫರ್ ಸಿಕ್ಕಿ ಉರ್ಫಿ ಸುದ್ದಿಯಾಗಿಲ್ಲ. ಬದಲಾಗಿ ಉರ್ಫಿ ಸುದ್ದಿ ಹಾಗೂ ಸದ್ದನ್ನು ಮಾಡುತ್ತಿರವುದು ತಾನು ಧರಿಸುವ ಹಾಟ್, ಬೋಲ್ಡ್ ಮತ್ತು ವಿಚಿತ್ರ ವಿನ್ಯಾಸದ ಡ್ರೆಸ್ ಗಳಿಂದಾಗಿ‌. ಉರ್ಫಿಯ ಚಿತ್ರ ವಿಚಿತ್ರ ವಿನ್ಯಾಸಗಳ ಉಡುಪು, ಅದಕ್ಕೆ ಬಳಸುವ ವಸ್ತುಗಳನ್ನು ನೋಡಿ ನೆಟ್ಟಿಗರು ಶಾಕ್ ಆಗುತ್ತಲೇ ಇದ್ದಾರೆ.

ಇದೀಗ ಉರ್ಫಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಸಹೋದರಿ ಡಾಲಿ ಜಾವೇದ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಫೋಟೋಗೆ ಪೋಸ್ ನೀಡಿರುವ ತಂಗಿಯ ಫೋಟೋ ಶೇರ್ ಮಾಡಿ, ಇವಳು ನನ್ನ ತಂಗಿ, ಇವಳು ನೋಡೋದಿಕ್ಕೆ ಹಾಟ್ ಅಥವಾ ವೆರಿ ಹಾಟ್? ನೀವೇ ಹೇಳಿ ಎಂದು ಉರ್ಫಿ ನೆಟ್ಟಿಗರನ್ನೇ ಪ್ರಶ್ನೆ ಮಾಡಿದ್ದಾರೆ. ತಂಗಿಯ ಫೋಟೋ ಶೇರ್ ಮಾಡಿಕೊಂಡು, ಅದಕ್ಕೆ ತಮ್ಮ ತಂಗಿಯ ಪ್ರೊಫೈಲ್ ಅನ್ನು ಟ್ಯಾಗ್ ಮಾಡಿದ್ದಾರೆ ಉರ್ಫಿ. ಈ ನಟಿಯ ಸಹೋದರಿಯ ಫೋಟೋ ಭರ್ಜರಿ ವೈರಲ್ ಆಗುತ್ತಿದೆ.

ಉರ್ಫಿ ಜಾವೇದ್ ಸಹೋದರಿ ಡಾಲಿ ಜಾವೇದ್ ಕೂಡಾ ತಮ್ಮ ಅಕ್ಕನಂತೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದಾರೆ. ಇನ್ಸ್ಟಾಗ್ರಾಂ ಗೆ ಎಂಟ್ರಿ ನೀಡಿದ ಅಲ್ಪ ಅವಧಿಯಲ್ಲೇ ಡಾಲಿಗೆ 94 ಸಾವಿರಕ್ಕೂ ಅಧಿಕ ಫಾಲೋಯರ್ಸ್ ಗಳು ಇದ್ದಾರೆ. ಅಕ್ಕನ ರೀತಿಯಲ್ಲೇ ಡಾಲಿ ಕೂಡಾ ತಮ್ಮ ಹಾಟ್ ಫೋಟೋಗಳು ಮತ್ತು ವೀಡಿಯೋಗಳನ್ನು ಶೇರ್ ಮಾಡಿಕೊಂಡು ನೆಟ್ಟಿಗರಿಗೆ ಖುಷಿಯನ್ನು ನೀಡುತ್ತಾರೆ. ಡಾಲಿ ಜಾವೇದ್ ಶೇರ್ ಮಾಡುವ ಫೋಟೋಗಳು ಸಹಾ ಭರ್ಜರಿಯಾಗಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ಅಕ್ಕನಿಗೆ ತಂಗಿ ಟಕ್ಕರ್ ನೀಡುತ್ತಿದ್ದಾರೆ.

Leave a Comment