ಅಕ್ಕನ ನೆರಳಲ್ಲಿ ಬದುಕೋದು ತುಂಬಾ ಕಷ್ಟ: ಶೋ ನಲ್ಲೇ ಗಳಗಳನೆ ಅತ್ತ ಶಮಿತಾ ಶೆಟ್ಟಿ

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಶಮಿತಾ ಶೆಟ್ಟಿ ಎಷ್ಟು ಜನಪ್ರಿಯತೆ ಪಡೆದುಕೊಂಡರೂ ಸಹಾ ಇಂದಿಗೂ ಅವರನ್ನು ಶಿಲ್ಪಾ ಶೆಟ್ಟಿ ಸಹೋದರಿಯೆಂದೇ ಕರೆಯಲಾಗುತ್ತದೆ. ಶಮಿತಾ ಶೆಟ್ಟಿ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದಂತಹ ಶಾರೂಖ್ ಖಾನ್, ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯ ರೈ ನಂತಹ ದಿಗ್ಗಜ ನಟರ ಸಮ್ಮೇಳನವೇ ಇದ್ದ ಮೊಹಬ್ಬತೇ ಸಿನಿಮಾದ ಮೂಲಕ. ಈ ಸಿನಿಮಾ ನಂತರವೂ ಶಮಿತಾ ನಟಿಸಿದ ಕೆಲವು ಸಿನಿಮಾಗಳು ಹಿಟ್ ಏನೋ ಆದವು. ಆದರೆ ಶಮಿತಾ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ನೆಲೆಯೂರಲು ಮಾತ್ರ ಯಶಸ್ವಿಯಾಗಲಿಲ್ಲ. ನಿಧಾನವಾಗಿ ಶಮಿತಾ ಬಾಲಿವುಡ್ ನಿಂದ ದೂರ ಸರಿದರು. ಅದಾದ ನಂತರ ಒಂದು ಡಾನ್ಸ್ ರಿಯಾಲಿಟಿ ಶೋ, ಬಿಗ್ ಬಾಸ್ ಹೀಗೆ ಕೆಲವು ಶೋ ಗಳಲ್ಲಿ ಕಾಣಿಸಿಕೊಂಡರು. ಆದರೆ ಇದೀಗ ಹಲವು ವರ್ಷಗಳ ನಂತರ ಶಮಿತಾ ತಮ್ಮ ಅಕ್ಕನ‌ ಹೆಸರಿನಿಂದ ಆದ ಲಾಭ, ನಷ್ಟಗಳ ಬಗ್ಗೆ ಸ್ವತಃ ಮಾತನಾಡಿದ್ದಾರೆ.

ಮೊಟ್ಟ ಮೊದಲ ಬಾರಿ ಓಟಿಟಿ ಯಲ್ಲಿ ಈ ಬಾರಿ ಬಿಗ್ ಬಾಸ್ ಪ್ರಾರಂಭವಾಗಿದೆ. ಈ ಹೊಸ ಬಿಗ್ ಬಾಸ್ ಈಗಾಗಲೇ ದೊಡ್ಡ ಸದ್ದು ಮಾಡಿದೆ. ಸೆನ್ಸಾರ್ ಇಲ್ಲದೇ ಬಿಂದಾಸ್ ಆಗಿ ಮೂಡಿ ಬರುತ್ತಿದೆ ಊಟ್ ನಲ್ಲಿ ಬಿಗ್ ಬಾಸ್. ಕರಣ್ ಜೋಹರ್ ನಿರೂಪಣೆ ಮಾಡುವ ಈ ಹೊಸ ಶೈಲಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ನಲ್ಲಿ ಶಮಿತಾ ಶೆಟ್ಟಿ ಕೂಡಾ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶ ಮಾಡಿದ್ದಾರೆ. ವಾರಾಂತ್ಯದ ಎಪಿಸೋಡ್ ನಲ್ಲಿ ಕರಣ್ ಜೋಹರ್ ಶಿಲ್ಪಾ ಅವರ ಆಟದ ಶೈಲಿಯನ್ನು ಹೊಗಳುತ್ತಾ, ನೀವು ಮನಸ್ಸಿನಲ್ಲಿ ಏನಾದರೂ ನೋವನ್ನು ಇಟ್ಟುಕೊಂಡು ಆಟ ಆಡುತ್ತಿರುವಿರಾ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.‌

ಆ ಪ್ರಶ್ನೆ ಕೇಳಿ, ಅದಕ್ಕೆ ಉತ್ತರಿಸುವ ಪ್ರಯತ್ನ ಮಾಡುತ್ತಲೇ ಶಮಿತಾ ಭಾವುಕರಾಗಿದ್ದಾರೆ. ಅವರು ಕಣ್ಣೀರು ಹಾಕಿದ್ದಾರೆ. ಅಕ್ಕನ ನೆರಳಲ್ಲಿ ಬದುಕುವುದು ಬಹಳ ಕಷ್ಟ ಎನ್ನುವ ಮಾತನ್ನು ಹೇಳಿದ್ದಾರೆ ಶಮಿತಾ ಶೆಟ್ಟಿ. ಶಮಿತಾ ಮಾತನಾಡುತ್ತಾ, ನಾನು 20-25 ವರ್ಷಗಳ ಕಾಲ ಬಹಳ ಶ್ರಮ ಪಟ್ಟೆ. ನಾನು ಈಗ ತುಂಬಾ ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಯಾಗಿದ್ದಾನೆ. ಜನರು ನನ್ನನ್ನು ಶಿಲ್ಪಾ ಶೆಟ್ಟಿ ಸಹೋದರಿ ಎಂದು ಗುರುತಿಸುತ್ತಾರೆ. ಶಿಲ್ಪಾ ಸಹೋದರಿ ಆಗಿದ್ದು ನನ್ನ ಪುಣ್ಯ, ರಕ್ಷಣಾತ್ಮಕವಾಗಿ ಅಕ್ಕನ ಹೆಸರು ಕೂಡಾ ಒಳ್ಳೆಯದೇ ಎಂದು ನಾನು ಹೇಳುತ್ತೇನೆ.

ಜನರಿಗೆ ನಾನು ಏನು ಎಂಬುದು ತಿಳಿದಿಲ್ಲ. ನನ್ನ ಸ್ವಂತ ಐಡೆಂಟಿಟಿಯನ್ನು ನಾನು ಪಡೆಯಲು ಬಹಳ ಕಷ್ಟ ಪಟ್ಟೆ, ನಾನು ಏನು ಎನ್ನುವುದನ್ನು ಸಾಬೀತು ಮಾಡಲು ನಾನು ತುಂಬಾ ಕಷ್ಟಪಟ್ಟೆ ಎಂದು ಶಮಿತಾ‌ ಕಣ್ಣೀರು ಹಾಕಿದ್ದಾರೆ. ಇಂತಹ ಸನ್ನಿವೇಶ ಇದೇ ಮೊದಲಲ್ಲ.‌ ವರ್ಷಗಳ ಹಿಂದೆ ಇದೇ ಕರಣ್ ಒಂದು ಡಾನ್ಸ್ ರಿಯಾಲಿಟಿ ಶೋ ನಲ್ಲೂ ಇದೇ ವಿಚಾರ ಕೇಳಿದಾಗ ಆಗಲೂ ಶಮಿತಾ ಭಾವುಕರಾಗಿ ಹೋಗಿದ್ದರು. ಇನ್ನು ಇತ್ತೀಚಿಗೆ ಬಾವ ರಾಜ್ ಕುಂದ್ರಾ ಪ್ರಕರಣದ ನಂತರ ಶಮಿತಾ ಅವರನ್ನು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ.

Leave a Comment