ಅಕ್ಕನನ್ನು ಆ ಪರಿಸ್ಥಿತಿಯಲ್ಲಿ ಬಿಟ್ಟು ಬಿಗ್ ಬಾಸ್ ಗೆ ಹೋಗಿದ್ದೇಕೆ? ಮೊದಲ ಬಾರಿಗೆ ಉತ್ತರ ಕೊಟ್ಟ ಶಮಿತಾ ಶೆಟ್ಟಿ

0 3

ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿ, ತನ್ನದೇ ಆದ ಸ್ಥಾನವನ್ನು ಪಡೆದು ದೊಡ್ಡ ಹೆಸರನ್ನು ಮಾಡಿರುವ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂತಹ ಸ್ಟಾರ್ ಡಂ ಇದ್ದ ನಟಿ ಹಾಗೂ ಅವರ ಕುಟುಂಬದ ಬಗ್ಗೆ ಕಳೆದ ವರ್ಷ ಮಾದ್ಯಮಗಳಲ್ಲಿ ಬಹಳ ದೊಡ್ಡ ಸುದ್ದಿಯಾಯಿತು, ಸಾರ್ವಜನಿಕವಾಗಿ ಅವರ ಕುಟುಂಬದ ಬಗ್ಗೆ ಚರ್ಚೆಗಳು ನಡೆದವು, ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದ್ದು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ. ಏಕೆಂದರೆ ಅವರ ಮೇಲೆ ಅ ಶ್ಲೀ ಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆಯ ಆ ರೋ ಪ ಕೇಳಿ ಬಂದಿತ್ತು.

ಈ ಪ್ರಕರಣ ದೊಡ್ಡ ಸುದ್ದಿಯಾಗಿ ರಾಜ್ ಕುಂದ್ರಾ ಸ್ವಲ್ಪ ದಿನಗಳ ಮಟ್ಟಿಗೆ ನ್ಯಾಯಾಂಗ ಬಂ ಧ ನಕ್ಕೆ ಒಳಗಾದರು. ಆ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಮಾದ್ಯಮಗಳು, ಸಿನಿಮಾ ಹಾಗೂ ಟಿವಿ ಶೋ ಗಳಿಂದ ಸಹಾ ದೂರವಾದರು. ಎಲ್ಲೂ ಯಾವುದೇ ಸಂದರ್ಶನ ನೀಡಲಿಲ್ಲ. ಅದು ಅವರಿಗೆ ಒಂದು ರೀತಿಯಲ್ಲಿ ಪರೀಕ್ಷೆಯ ದಿನಗಳು, ಕಠಿಣವಾದ ದಿನಗಳು ಅಥವಾ ಒಂದರ್ಥದಲ್ಲಿ ಸವಾಲಿನ ದಿನಗಳಾಗಿ ಪರಿಣಮಿಸಿತ್ತು. ಶಿಲ್ಪಾ ಹೀಗೆ ಸಂಕಷ್ಟದಲ್ಲಿ ಇರುವಾಗಲೇ ಅವರ ತಂಗಿ ಶಮಿತಾ ಬಿಗ್ ಬಾಸ್ ಓಟಿಟಿ ಸರಣಿಯ ಮೊದಲ ಆವೃತ್ತಿಗೆ ಒಪ್ಪಿಗೆ ನೀಡಿದರು.

ಅಕ್ಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವಾಗ ಅಕ್ಕನ ಜೊತೆಗೆ ನಿಲ್ಲದೇ, ಆಕೆಯ ಕಷ್ಟದಲ್ಲಿ ಭಾಗಿಯಾಗದೇ ಶಮಿತಾ ಶೆಟ್ಟಿ ಬಿಗ್ ಬಾಸ್ ಒಪ್ಪಿಕೊಂಡು ಶೋ ಗೆ ಎಂಟ್ರಿ ನೀಡಿದ್ದು, ಓಟಿಟಿ ಮುಗಿದ ಕೂಡಲೇ ಮತ್ತೆ ಟಿವಿ ಯ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೇ ಈ ವಿಚಾರವಾಗಿ ಶಮಿತಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಬಿಗ್ ಬಾಸ್ 15 ಮುಗಿದ ಮೇಲೆ ಸಂದರ್ಶನಗಳನ್ನು ನೀಡುತ್ತಿರುವ ಶಮಿತಾ ತಾನು ಅಕ್ಕನ ಜೊತೆಗಿರದೇ ಬಿಗ್ ಬಾಸ್ ಗೆ ಒಪ್ಪಿದ್ದು ಏಕೆ ಎನ್ನುವುದನ್ನು ವಿವರಿಸಿದ್ದಾರೆ.‌

ಶಮಿತಾ ಮಾತನಾಡುತ್ತಾ, “ಆ ಸಂದರ್ಭದಲ್ಲಿ ನಾನು ಅಕ್ಕನ ಜೊತೆಗೆ ಇರಲಿಲ್ಲ ಎನ್ನುವ ಬೇಸರ ಖಂಡಿತ ಇದೆ. ಬಿಗ್ ಬಾಸ್ ಓಟಿಟಿಯಲ್ಲಿ ಇರುವಾಗ ನನಗೆ ಬಹಳ ಚಿಂತೆ ಕಾಡಿತ್ತು. ನಾನು ಆಕೆಯ ಜೊತೆಗೆ ಇರ ಬೇಕಿತ್ತು. ನನ್ನ ಮತ್ತು ಶಿಲ್ಪಾ ನಡುವೆ ಉತ್ತಮ ಬಾಂಧವ್ಯ ಇದೆ. ನಮಗೆ ಕಷ್ಟಗಳು ಎದುರಾದಾಗಲೆಲ್ಲಾ ನಾವು ಇನ್ನಷ್ಟು ಸ್ಟ್ರಾಂಗ್ ಆಗಿದ್ದೇವೆ. ಅಕ್ಕನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ” ಎಂದು ಶಮಿತಾ ಹೇಳಿದ್ದು, ಅನಂತರ ತನ್ನ ನಿರ್ಣಯದ ಹಿಂದಿನ ಕಾರಣವನ್ನು ಸಹಾ ವಿವರಿಸಿದ್ದಾರೆ.

ಶಮಿತಾ ಅವರು, “ಟ್ರೋಲ್ ಮಾಡಿದ್ದು ಬಹಳ ಅನ್ಯಾಯ, ಬಾವನ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಹಾಗಾಗಿ ಬಿಗ್ ಬಾಸ್ ಗೆ ಹೋಗುವುದು ಸರಿ ಎನಿಸಿತ್ತು. ಕೋವಿಡ್ ಸಮಯದಲ್ಲಿ ಅನೇಕರು ಕೆಲಸವಿಲ್ಲದೇ ಕುಳಿತಿದ್ದರು. ಆಗ ನನಗೆ ಸಿಕ್ಕ ಕೆಲಸವನ್ನು ತಿರಸ್ಕಾರ ಮಾಡಲು ನನಗೆ ಇಷ್ಟ ಇರಲಿಲ್ಲ. ಅಲ್ಲದೇ ನಾನು ಹಣವನ್ನು ಸಂಪಾದನೆ ಮಾಡಲೇಬೇಕಿತ್ತು” ಎಂದು ಶಮಿತಾ ಶೆಟ್ಟಿ ತಾವು ಬಿಗ್ ಬಾಸ್ ಗೆ ಹೋಗುವ ನಿರ್ಧಾರ ಮಾಡಿದ್ದರ ಕಾರಣವನ್ನು ವಿವರಿಸಿದ್ದಾರೆ.

Leave A Reply

Your email address will not be published.