HomeEntertainmentಅಂದ ಹೆಚ್ಚಿಸಲು ತುಟಿಗಳ ಚಿಕಿತ್ಸೆಗೆಂದು ಲಂಡನ್ ಗೆ ಹೋದ ಟಿಕ್ ಟಾಕ್ ಬೆಡಗಿಗೆ ಹೀಗೆ ಆಗಬಾರದಿತ್ತು!!

ಅಂದ ಹೆಚ್ಚಿಸಲು ತುಟಿಗಳ ಚಿಕಿತ್ಸೆಗೆಂದು ಲಂಡನ್ ಗೆ ಹೋದ ಟಿಕ್ ಟಾಕ್ ಬೆಡಗಿಗೆ ಹೀಗೆ ಆಗಬಾರದಿತ್ತು!!

ಪ್ರತಿಯೊಬ್ಬ ಹೆಣ್ಣು ಕೂಡಾ ತಾನು ಅಂದವಾಗಿ ಕಾಣಬೇಕೆಂದು ಬಳಸುವುದು ಪ್ರಕೃತಿ ಸಹಜ ನಿಯಮವೇ ಆಗಿದೆ. ಆದರೆ ಕೆಲವರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ ಸದಾ ಏನೋ ಒಂದು ಅಳುಕು ಇರುತ್ತದೆ. ಇನ್ನು ಸೆಲೆಬ್ರಿಟಿ ಗಳಾದರೆ ಒಂದು ಹೆಜ್ಜೆ ಮುಂದು. ತಮ್ಮ ಅಂದವನ್ನು ಇನ್ನಷ್ಟು, ಮತ್ತಷ್ಟು ಹೆಚ್ಚಿಸಿಕೊಳ್ಳಬೇಕೆಂದು ಇಂದಿನ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ಒಟ್ಟಾರೆ ಅಂದಕ್ಕೆ ಮಿಗಿಲಾದುದು ಇನ್ನೊಂದಿಲ್ಲ ಎನ್ನುವ ಪರಿಭಾಷೆ ಹೆಚ್ಚಾಗಿದೆ. ಸಿನಿಮಾ ರಂಗದಲ್ಲಿ ಈಗಾಗಲೇ ಅನೇಕ ನಟಿಯರು ಸರ್ಜರಿಗಳ ಮೂಲಕ ಅಂದಕ್ಕೆ ಮೆರುಗು ನೀಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಹೀಗೆ ಅಂದವನ್ನು ಹೆಚ್ಚಿಸಿಕೊಳ್ಳಲು, ಮುಖದಲ್ಲೊಂದು ಹೊಸ ಸುಂದರ ಬದಲಾವಣೆಯನ್ನು ಮೂಡಿಸಲು ಕೆಲವರು ಮಹಿಳೆಯರು ವಿಶೇಷವಾಗಿ ಸೆಲೆಬ್ರಿಟಿಗಳು ಹಾತೊರೆಯುವುದು ಸಹಜ. ಆದರೆ ಕೆಲವೊಮ್ಮೆ ಇಂತಹ ಪ್ರಯತ್ನಗಳು ಉಲ್ಟಾ ಹೊಡೆಯುವುದು ಕೂಡಾ ಉಂಟು. ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದೆ. ಆದರೆ ನೆರೆಯ ರಾಷ್ಟ್ರಗಳಲ್ಲಿ ಅದು ಇನ್ನೂ ಸದ್ದು ಮಾಡುತ್ತಲೇ ಇದೆ. ನೆರೆಯ ಪಾಕಿಸ್ತಾನದಲ್ಲಿ ಹರೀಮ್ ಶಾ ಎನ್ನುವ ಯುವತಿ ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದು ಟಿಕ್ ಟಾಕ್ ಸ್ಟಾರ್ ಎನಿಸಿಕೊಂಡಿದ್ದಾಳೆ.

ಈ ಟಿಕ್ ಟಾಕ್ ಬೆಡಗಿ ಹರೀಮ್ ಶಾ ಇತ್ತೀಚಿಗೆ ತನ್ನ ತುಟಿಗಳ ಆಕಾರವನ್ನು ಬದಲಿಸಬೇಕು, ಅದಕ್ಕೆ ಸುಂದರವಾದ ಹೊಸ ಶೇಪ್ ಕೊಡಿಸಬೇಕು ಎನ್ನುವ ಕಾರಣಕ್ಕೆ ಅದಕ್ಕೆ ಅಗತ್ಯ ಇದ್ದ‌ ದೊಡ್ಡ ಮೊತ್ತದ ಹಣ ಹಾಗೂ ಅನ್ಯ ವ್ಯವಸ್ಥೆಗಳನ್ನು ಮಾಡಿಕೊಂಡು, ಲಂಡನ್ ಗೆ ತುಟಿಗಳ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಂದಿದ್ದಳು. ಆಕೆಯ ಲಿಪ್ ಫಿಲ್ಲರ್ ಟ್ರೀಟ್ಮೆಂಟ್ ಸಹಾ ಆರಂಭವಾಗಿತ್ತು. ಆದರೆ ಈ ಮಧ್ಯೆ ಪಾಕಿಸ್ತಾನ ಸರ್ಕಾರ ತೆಗೆದುಕೊಂಡ ನಿರ್ಣಯದಿಂದ ಆಕೆಗೆ ಟ್ರೀಟ್ಮೆಂಟ್ ಅರ್ಧಕ್ಕೆ ನಿಲ್ಲಿಸಬೇಕಾಗಿದ್ದು, ಆಕೆ ಉಬ್ಬಿದ ಅರ್ಧ ತುಟಿಯಲ್ಲೇ ವೀಡಿಯೋ ಮಾಡಿದ್ದು, ಅದು ವೈರಲ್ ಆಗಿದೆ.

ತಾನು ಲಿಪ್ ಫಿಲ್ಲಿಂಗ್ ಟ್ರೀಟ್ಮೆಂಟ್ ಗಾಗಿ ಬಂದಾಗ ಚಿಕಿತ್ಸೆ ನಡೆಯುವಾಗ, ಪಾಕಿಸ್ತಾನ ಫೆಡರಲ್ ಇನ್ವೆಸ್ಟಿಗೇಷನ್ ಏಜನ್ಸಿಯಿಂದ (FIA ) ಕರೆ ಬಂತು, ನನ್ನ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿರುವುದಾಗಿ ತಿಳಿಸಿದರು. ಇನ್ನು ಲಿಪ್ ಫಿಲ್ಲಿಂಗ್ ಟ್ರೀಟ್ಮೆಂಟ್ ಬಹಳ ದುಬಾರಿ, ಆದರೆ ಎಫ್ ಐ ಎ ನನ್ನ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದರಿಂದ ಟ್ರೀಟ್ಮೆಂಟ್ ಅರ್ಧದಲ್ಲೇ ನಿಲ್ಲಿಸಬೇಕಾಗಿದೆ ಎಂದು ಹರೀಮಾ ಶಾ ಹೇಳಿದ್ದಾರೆ. ಪಾಕಿಸ್ತಾನದ FIA ಈಕೆ ದೊಡ್ಡ ಮೊತ್ತದ ಹಣದೊಂದಿಗೆ ಲಂಡನ್ ಗೆ ಹೋದ ವಿಚಾರದಲ್ಲಿ ಅ ಕ್ರ ಮ ಹಣ ಸಾಗಾಣಿಕೆಯ ಪ್ರಕರಣ ದಾಖಲು ಮಾಡಿದೆ ಎನ್ನಲಾಗಿದೆ.

https://www.instagram.com/p/CZS8clBBwtu/?utm_medium=copy_link

ಈ ವಿಚಾರವಾಗಿ ಹರೀಮಾ ಬೇಸರ ವ್ಯಕ್ತಪಡಿಸಿ ನಾನು ಇದೇ ಮೊದಲ ಬಾರಿಗೆ ದೊಡ್ಡ ಮೊತ್ತದ ಹಣದೊಂದಿಗೆ ಲಂಡನ್ ಗೆ ಹೋಗಿದ್ದು, ಪಾಕಿಸ್ತಾನದ ಕಾನೂನುಗಳು ಬಡವರಿಗೆ ಮಾತ್ರ ಅನ್ವಯ ಎಚ್ಚರವಾಗಿರಿ ಎಂದು ಪರೋಕ್ಷವಾಗಿ ಸರ್ಕಾರವನ್ನು ಟೀಕೆ ಮಾಡಿದ್ದಾರೆ. FIA ಪ್ರಕಾರ ಪಾಕ್ ಗೆ ವಿದೇಶೀ ಕರೆನ್ಸಿ ಎಷ್ಟಾದರೂ ತರಬಹುದು. ಆದರೆ ಇಲ್ಲಿನವರು ವಿದೇಶಕ್ಕೆ ಹೋಗುವುದಾದರೆ ತಮ್ಮ ಕರೆನ್ಸಿಯನ್ನು $10,000 ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗುವುದು ಎನ್ನಲಾಗಿದೆ.

- Advertisment -