ಅಂದು ಪ್ರಭಾಸ್ ಆ ಒಂದು ಮಾತು ಹೇಳಿ ಅನುಷ್ಕಾ ಶೆಟ್ಟಿ ಮದುವೆ ನಿಲ್ಲಿಸಿದ್ದರಂತೆ!!

Written by Soma Shekar

Published on:

---Join Our Channel---

ದಕ್ಷಿಣ ಸಿನಿರಂಗದಲ್ಲಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಹೆಸರು ಜನಪ್ರಿಯ. ಈ ಜೋಡಿಯು ಜೊತೆಯಾಗಿ ನಟಿಸಿದ ಸಿನಿಮಾಗಳು ಕೂಡಾ ಸೂಪರ್ ಹಿಟ್, ಎಲ್ಲಕ್ಕಿಂತ ಮುಖ್ಯವಾದ ವಿಷಯ ಏನೆಂದರೆ ಅನುಷ್ಕಾ ಮತ್ತು ಪ್ರಭಾಸ್ ನಡುವಿನ ಸ್ನೇಹ ಕೂಡಾ ಬಹಳ ಜನಪ್ರಿಯ. ಇವರ ನಡುವಿನ ಆತ್ಮೀಯತೆಯನ್ನು ಕಂಡಾಗಲೆಲ್ಲಾ ಅವರ ಅಭಿಮಾನಿಗಳು ಖುಷಿ ಪಡುತ್ತಾರೆ. ರಿಯಲ್ ಲೈಫ್ ನಲ್ಲಿ ಕೂಡಾ ಈ ಜೋಡಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಆಶಿಸುತ್ತಾರೆ. ಆದರೆ ಆ ಕನಸು ನನಸಾಗುವುದು ಮಾತ್ರ ಯಾವಾಗ?? ಎನ್ನುವುದು ಮಾತ್ರ ಪ್ರಶ್ನೆಯಾಗಿದೆ.

ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸ್ನೇಹದ ಕುರಿತಾಗಿ ಈಗಾಗಲೇ ಸಾಕಷ್ಟು ಸಲ ಸುದ್ದಿಗಳಾಗಿವೆ‌. ಅಲ್ಲದೇ ಅವರ ನಡುವೆ ಸ್ನೇಹವನ್ನು ಮೀರಿದ ಆತ್ಮೀಯತೆಯೊಂದು ಇದೆ. ಹಲವು ಸಂದರ್ಭಗಳಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳು ಕೂಡಾ ಆಗಿದ್ದವು. ಆದರೆ ಇದಕ್ಕೆಲ್ಲಾ ಅನುಷ್ಕಾ ಆಗಲೀ, ಪ್ರಭಾಸ್ ಆಗಲೀ ತಲೆ ಕೆಡಸಿಕೊಂಡಿದ್ದಿಲ್ಲ. ಅಂತಹ ಸುದ್ದಿಗಳಿಗೆ ಅವರು ಪ್ರತಿಕ್ರಿಯೆ ನೀಡಿ ಇನ್ನಷ್ಟು ಸದ್ದು, ಸುದ್ದಿ ಕೂಡಾ ಆಗಲು ಬಿಟ್ಟಿಲ್ಲ.

ಆದರೆ ಇವೆಲ್ಲವುಗಳ ನಡುವೆ ಕೆಲವು ಸಮಯದ ಹಿಂದೆ ಅನುಷ್ಕಾ ಶೆಟ್ಟಿ ಅವರ ಆತ್ಮೀಯ ನೊಬ್ಬ ಪ್ರಭಾಸ್ ಹೇಗೆ ಅನುಷ್ಕಾ ಅವರ ಮದುವೆಯನ್ನು ನಿಲ್ಲಿಸಿದ್ದರು ಎಂದು ಹೇಳಿದ್ದ ವಿಚಾರ ಮಾತ್ರ ದೊಡ್ಡ ಸುದ್ದಿಯಾಗಿತ್ತು. ಈ ಸುದ್ದಿ ಆಶ್ಚರ್ಯವನ್ನು ಕೂಡಾ ಹುಟ್ಟಿಹಾಕಿತ್ತು. ಪ್ರಭಾಸ್ ಹೇಳಿದ ಒಂದು ಮಾತಿಗೆ ಅನುಷ್ಕಾ ತಮ್ಮ ಮದುವೆಯನ್ನು ಕೂಡಾ ಕ್ಯಾನ್ಸಲ್ ಮಾಡಿಕೊಂಡಿದ್ದರು ಎನ್ನುವುದು ಎಲ್ಲರಿಗೂ ಒಂದು ರೀತಿಯಲ್ಲಿ ನಂಬಲಾರದ ವಿಷಯವೇ ಆಗಿತ್ತಾದರೂ ಅಂದಿನ ಸಂದರ್ಭ ಹೌದು ಎಂದು ನಂಬುವ ಹಾಗೆ ಮಾಡಿತ್ತು.

ಬಾಹುಬಲಿ ಸಿನಿಮಾ ವೇಳೆಯಲ್ಲಿಯೇ ನಟಿ ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಸುದ್ದಿಗಳಾಗಿತ್ತು. ಆಗ ಅನುಷ್ಕಾ ಅವರ ಮದುವೆಯ ಸಿದ್ಧತೆಗಳು ಕೂಡಾ ಜೋರಾಗಿಯೇ ನಡೆಯಲು ಆರಂಭಿಸಿತ್ತು. ಆದರೆ ಅನುಷ್ಕಾ ಮಾಡಿದ್ದ ನಿರ್ಧಾರ ನಟ ಪ್ರಭಾಸ್ ಗೆ ಇಷ್ಟವಾಗಿರಲಿಲ್ಲ. ಆಗ ಪ್ರಭಾಸ್ ಈ ವಿಚಾರವಾಗಿ ಅನುಷ್ಕಾ ಶೆಟ್ಟಿ ಅವರ ಬಳಿ ಮಾತನಾಡಿದ್ದರು ಹಾಗೂ ಅನುಷ್ಕಾ ಮದುವೆ ಆಗುವುದನ್ನು ಮುಂದೂಡುವಂತೆ ಮಾಡಿದ್ದರು ಎನ್ನಲಾಗುತ್ತದೆ. ಇಷ್ಟಕ್ಕೂ ಪ್ರಭಾಸ್ ಏನು ಹೇಳಿದ್ದರು??

ಅನುಷ್ಕಾ ಶೆಟ್ಟಿಗೆ ಪ್ರಭಾಸ್, ಮದುವೆ ವಿಷಯವನ್ನು ಬಿಟ್ಟು ಸಿನಿಮಾಗಳ ಕಡೆಗೆ ಗಮನ ನೀಡುವಂತೆ ಸಲಹೆಯನ್ನು ನೀಡಿದ್ದರಂತೆ. ಆಗ ಪ್ರಭಾಸ್ ಹೇಳಿದ ಮಾತಿಗೆ ಗೌರವವನ್ನು ನೀಡಿದ ನಟಿ ಅನುಷ್ಕಾ ಐದು ವರ್ಷಗಳ ಕಾಲ ಮದುವೆಯನ್ನು ಮುಂದೂಡಿದ್ದರು ಎನ್ನಲಾಗಿದೆ. ಅದಾದ ನಂತರದ ದಿನಗಳಲ್ಲಿ ಇಬ್ಬರೂ ಸಹಾ ಮದುವೆ ಆಗದೇ ಉಳಿದಿರುವುದನ್ನು ನೋಡಿ ಅನೇಕರು ಅವರು ಪ್ರೀತಿಸುತ್ತಿದ್ದಾರೆ, ಬಹುಶಃ ಮದುವೆ ಕೂಡಾ ಆಗಬಹುದು ಎಂದು ಊಹೆ ಮಾಡುತ್ತಾರೆ.

Leave a Comment