ಅಂದು ಧೋನಿಗೆ ನೆರವು ನೀಡಿದ್ದ ರೆಬೆಲ್ ಸ್ಟಾರ್: ಘಟನೆ ಸ್ಮರಿಸುತ್ತಾ ಸುಮಲತ ಅವರು ಹಂಚಿಕೊಂಡ ವಿಷಯ ಇದು

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಹಿರಿಯ ನಟ ರೆಬಲ್ ಸ್ಟಾರ್ ಖ್ಯಾತಿಯ ಅಂಬರೀಶ್ ಅವರನ್ನು ಕಲಿಯುಗ ಕರ್ಣ ಎಂದು ಸಹಾ ಜನ ಕರೆದು ಅಭಿಮಾನಿಸುತ್ತಾರೆ.‌ ನಟ ಅಂಬರೀಶ್ ಅವರು ಸಿನಿಮಾ ತಾರೆಯಾಗಿ ಹಾಗೂ ರಾಜಕೀಯ ನಾಯಕನಾಗಿಯೂ ತಮ್ಮ ಮನೆ ಬಾಗಿಲಿಗೆ ಬಂದ ಅದೆಷ್ಟು ಜನರಿಗೆ ಸಹಾಯವನ್ನು ನೀಡಿದ್ದಾರೆ. ಆದರೆ ಅವರು ನೀಡಿರುವ ಸಹಾಯ ಗಳ ಬಗ್ಗೆ ಎಲ್ಲೂ ಕೂಡಾ ಅಷ್ಟೊಂದು ಸುದ್ದಿಯಾಗಿಲ್ಲ. ಕಾರಣ ಅಂಬರೀಶ್ ಅವರಿಗೆ ಅದು ಇಷ್ಟವಾಗುತ್ತಿರಿಲ್ಲ.‌ ಆದರೆ ಅಂಬರೀಶ್ ಅವರು ನಿಧನರಾದಾಗ ಅವರು ಮಾಡಿರುವ ಉತ್ತಮವಾದ ಕೆಲಸಗಳು ಹಾಗೂ ಮಾನವೀಯ ಕಾರ್ಯಗಳ ಕುರಿತಾಗಿ ಒಂದಷ್ಟು ವಿಷಯಗಳು ಸುದ್ದಿ ಆಗುವ ಮೂಲಕ ಜನರ ಮುಂದಕ್ಕೆ ಬಂದಿದ್ದವು. ಆ ಸಂದರ್ಭದಲ್ಲಿ ಅಂಬರೀಶ್ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಹಾಯವನ್ನು ನೀಡಿದ್ದಾರೆ ಎನ್ನುವ ವಿಷಯವೊಂದು ಹೊರಬಂದಿತ್ತು.

ಹೌದು, 2004 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಆಡಲು ಬಂದಂತಹ ಸಮಯದಲ್ಲಿ, ಆ ಪಂದ್ಯಾವಳಿಯನ್ನು ವೀಕ್ಷಣೆ ಮಾಡಿದ್ದ ಅಂಬರೀಶ್ ಅವರಿಗೆ ಧೋನಿ ಅವರ ಆಟದ ಶೈಲಿ ಬಹಳ ಇಷ್ಟವಾಗಿತ್ತಂತೆ. ಆನಂತರ ಅವರ ಧೋನಿ ಅವರು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಎನ್ನುವುದನ್ನು ಅರಿತುಕೊಂಡು, ಅಂಬರೀಶ್ ಅವರು ಒಂದಷ್ಟು ಹಣದ ಸಹಾಯವನ್ನು ನೀಡಿದ್ದರಂತೆ. ಈ ವಿಷಯ ಆಗ ಎಲ್ಲೂ ಕೂಡ ವರದಿಯಾಗಿರಲಿಲ್ಲ, ಆದರೆ ದಿನ ಕಳೆದಂತೆ ಅಂಬರೀಶ್ ಅವರು ಧೋನಿಗೆ ನೆರವನ್ನು ನೀಡಿದ್ದಂತಹ ಈ ಒಂದು ವಿಚಾರ ಹೊರಬಂದಾಗ ಜನ ಅಂಬರೀಶ್ ಅವರ ಬಗ್ಗೆ ಇನ್ನಷ್ಟು ಅಭಿಮಾನ ಪಟ್ಟಿದ್ದರು.

ಅಂಬರೀಶ್ ಅವರು ಧೋನಿ ಅವರಿಗೆ ಸಹಾಯವನ್ನು ನೀಡಿದ ವಿಚಾರದ ಕುರಿತಾಗಿ ಇದೀಗ ಸುಮಲತಾ ಅಂಬರೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ, “ಅವರ ಅನೇಕ ಮಾನವೀಯ ಕಾರ್ಯಗಳು ಅಷ್ಟಾಗಿ ತಿಳಿದಿಲ್ಲ, ಏಕೆಂದರೆ ಅವುಗಳನ್ನು ಪ್ರಚಾರ ಮಾಡುವಲ್ಲಿ ಅವರು ಎಂದಿಗೂ ನಂಬಿಕೆ ಇರಲಿಲ್ಲ. ಹಾಗಾಗಿ ಅನಿರೀಕ್ಷಿತವಾಗಿ ಈ ರೀತಿಯ ಮಾಹಿತಿಯನ್ನು ನಾನು ನೋಡಿದಾಗ ಅದು ಆಶ್ಚರ್ಯಕರವಾಗಿದೆ. ಒಂದು ಕಡೆ ಇದರಲ್ಲಿ ಆಶ್ಚರ್ಯವಿಲ್ಲ ಎನಿಸುತ್ತದೆ ಏಕೆಂದರೆ ಅವರ ಈ ಗುಣದಿಂದಲ ಅವರನ್ನು ಪ್ರೀತಿಸುವ ಜನರಿಂದ ದಾನ ಕರ್ಣ ಎಂದು ಪ್ರೀತಿಯಿಂದ ಕರೆಯಲ್ಪಟ್ಟಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು ಸಹಾ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆಯಲ್ಲಿ ಅಂಬರೀಶ್ ಅವರು ನೀಡಿದ ನೆರವನ್ನು ಸ್ಮರಿಸಿದ್ದರು. ಆಗ ಅವರು ಅಂಬರೀಶ್ ಅವರು 50,000 ರೂಪಾಯಿಗಳ ಚೆಕ್ಕನ್ನು ನೀಡಿದ್ದರು ಎಂದು ಹೇಳಿದ್ದರು. ಕೆಲವು ಕಡೆಗಳಲ್ಲಿ ಅಂಬರೀಶ್ ಅವರು ನೀಡಿದ ಹಣದ ಮೊತ್ತದ ವಿಚಾರವಾಗಿ ಬೇರೆ ಬೇರೆ ಅಭಿಪ್ರಾಯಗಳು ಇದೆ. ಕೆಲವು ಕಡೆ ಅವರು ಎರಡು ಲಕ್ಷ ರೂ ನೀಡಿದ್ದರೆನ್ನಲಾಗಿದೆ. ಮೊತ್ತ ಎಷ್ಟೇ ಆದರೂ ಸಹಾ ಅಂಬರೀಶ್ ಅವರು ಅಂದು ಧೋನಿ ಅವರಿಗೆ ನೆರವನ್ನು ನೀಡಿದ ಮಾತು ಮಾತ್ರ ಸತ್ಯವಾಗಿದೆ.

Leave a Comment