ಅಂದು ಜನರ ಟೀಕೆಗೆ ಗುರಿಯಾದ ನಟಿಗೆ ಈಗ ಹರಿದು ಬರುತ್ತಿದೆ ಅಪಾರ ಮೆಚ್ಚುಗೆ: ಜನರ ಅಭಿಪ್ರಾಯ ಬದಲಾಗಿದ್ದು ಹೇಗೆ??

Entertainment Featured-Articles News

ಬಿಗ್ ಬಾಸ್ ವಿನ್ನರ್, ಜನಪ್ರಿಯ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ ಮುಗಿದ ಕೂಡಲೇ ಹಿಂದಿ ಕಿರುತೆರೆಯ ಬಹು ಜನಪ್ರಿಯ ಧಾರಾವಾಹಿ ನಾಗಿನ್ ( ನಾಗಿಣಿ ) ನ ಆರನೇ ಸೀಸನ್ ನ ನಾಯಕಿಯಾಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿದೆ. ನಿರ್ಮಾಪಕಿ ಏಕ್ತಾ ಕಪೂರ್ ಅವರ ನಿರ್ಮಾಣದ ನಾಗಿನ್ ಸೀರಿಯಲ್ ಗಳ ಪ್ರತಿ ಸೀಸನ್ ಸಹಾ ನಾಗಿಣಿ ಪಾತ್ರಧಾರಿ ನಟಿಯ ಮೂಲಕವೇ ದೊಡ್ಡ ಸದ್ದನ್ನು ಮಾಡುತ್ತದೆ. ಆದರೆ ಈ ಬಾರಿ ಧಾರಾವಾಹಿಯ ನಾಯಕಿ ಹಾಗೂ ಕಥೆಯ ಮುಖ್ಯ ಅಂಶದ ಕುರಿತಾಗಿ ದೊಡ್ಡ ಟ್ರೋಲ್ ಆಗಿದ್ದು ಉಂಟು.

ನಾಗಿನ್ 6 ತೀವ್ರ ಸೋಲು ಅನುಭವಿಸಲಿದೆ, ಸೀರಿಯಲ್ ಹಿಂದೆಂದೂ ಯಾವ ನಾಗಿನ್ ಸಿರೀಸ್ ಕೂಡಾ ಕಾಣದ ವಿಫಲತೆಗೆ ಗುರಿಯಾಗಲಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವಾಗಿದ್ದು ಸೀರಿಯಲ್ ನಲ್ಲಿ ಸಾಂಕ್ರಾಮಿಕ ರೋಗ ಹರಡುವ ಶಕ್ತಿಗಳ ಮೇಲೆ ನಾಗಿಣಿ ಹೋರಾಡಿ ದೇಶ ಕಾಯುವಳು ಎನ್ನುವ ಪ್ರೋಮೋ ಹಾಗೂ ಗುಂಡು ಮುಖದ ನಟಿ ತೇಜಸ್ವಿ ಪ್ರಕಾಶ್ ನಾಗಿಣಿ ಆಗಿ ಬರಲಿದ್ದಾರೆ ಎನ್ನುವ ಸುದ್ದಿ. ಈ ಎರಡೂ ಕೂಡಾ ಟ್ರೋಲ್ ಗೆ ಆಹಾರವಾಗಿತ್ತು. ಕೊರೊನಾ ವಿರುದ್ಧ ನಾಗಿಣಿ ಹೋರಾಟ ಅನ್ನೋದೇ ಹಾಸ್ಯ ಎಂದಿದ್ದರು ಜನ.

ಆದರೆ ಈಗ ಎಲ್ಲ ಊಹೆಗಳು ಸುಳ್ಳಾಗಿವೆ. ವಾರಾಂತ್ಯದಲ್ಲಿ ಪ್ರಸಾರವಾಗುವ ನಾಗಿನ್ 6 ಈಗ ಬಹಳ ಉತ್ತಮವಾದ ಟಿ ಆರ್ ಪಿ ದೊರೆತಿದೆ. ಟಾಪ್ ನಲ್ಲಿದ್ದ ಎರಡು ಸೀರಿಯಲ್ ಗಳನ್ನು ನಾಗಿನ್ ಹಿಂದೆ ಹಾಕಿ ಮುಂದೆ ಬಂದಿದೆ. ನಿರ್ಮಾಪಕಿ ಏಕ್ತಾ ಕಪೂರ್ ಅವರು ತಮ್ಮ ಹಿಂದಿನ ನಾಗಿನ್ ಸಿರೀಸ್ ಗಳಿಗಿಂತ ಉತ್ತಮವಾದ ಟಿ ಆರ್ ಪಿ ಹೊಸ ಸಿರೀಸ್ ಗೆ ದಕ್ಕಿದೆ ಎನ್ನುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಬಾರಿ ನಾಗಿನ್ ನ ಹೊಸ ಸೀಸನ್ ಗೆ 130 ಕೋಟಿ ರೂ.ಗಳ ಬಜೆಟ್ ನೊಂದಿಗೆ ಅದ್ದೂರಿಯಾಗಿ ಮೂಡಿ ಬಂದಿದೆ.

ಸೀರಿಯಲ್ ಉತ್ತಮ ಪ್ರತಿಕ್ರಿಯೆ ಪಡೆದ ಹಿನ್ನೆಲೆಯಲ್ಲ ನಿರ್ಮಾಪಕಿ ಏಕ್ತಾ ಕಪೂರ್, ವೀಕೆಂಡ್ ಶೋ ಗಳಿಗೆ ಆರಂಭದಲ್ಲಿಯೇ ಟಿ ಆರ್ ಪಿ ಬರೋದಿಲ್ಲ, ಅದರಲ್ಲೂ ವೈರಸ್ ಅ ಟ್ಯಾ ಕ್ ಕಥೆ ಹೊಂದಿರುವ ನಂಬಲಾಗದಂತಹ ಕಥೆ ಇದ್ದರೂ ಸಹಾ ಜನರು ಇಷ್ಟ ಪಟ್ಟು ನೋಡುತ್ತಿರುವುದು ಖುಚಿಯಾಗಿದೆ ಎಂದಿದ್ದಾರೆ. ನಾಗಿನ್ 6 ನೋಡಿದ ಪ್ರೇಕ್ಷಕರು ಸಹಾ ತಮಗೆ ಬಹುದೊಡ್ಡ ಯಶಸ್ಸು ಪಡೆದ ನಾಗಿನ್ 1 ನ ನೆನಪಾಗಿದೆ ಎಂದು ಹೇಳುತ್ತಿರುವುದು ಸಹಾ ಸಂತೋಷ ನೀಡಿದೆ ಎಂದಿದ್ದಾರೆ ಏಕ್ತಾ.

ಇನ್ನು ಪ್ರೊಮೋ ಬಂದಾಗ ತೇಜಸ್ವಿ ಪ್ರಕಾಶ್ ಅವರನ್ನು ನಾಗಿನ್ ಅವತಾರದಲ್ಲಿ ನೋಡಿದ ಜನರು ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಮಾಡಿದ್ದರು. ನಾಗಿನ್ ಪಾತ್ರಕ್ಕೆ ಈ ಬಾರಿ ನಟಿಯ ಆಯ್ಕೆಯೂ ಸರಿಯಿಲ್ಲ,‌ ಈ ಬಾರಿ ನಾಗಿಣಿ ಪ್ರೀತಿಗಾಗಿ ಅಲ್ಲ, ದೇಶಕ್ಕಾಗಿ ಹೋರಾಡುತ್ತಾಳೆ ಅನ್ನೋ ಟ್ಯಾಗ್ ಲೈನ್ ಹಾಸ್ಯಾಸ್ಪದ ಎಂದಿದ್ದರು. ಆದರೆ ಈಗ ಸೀರಿಯಲ್ ಆರಂಭವಾಗಿ ಎರಡು ವಾರಗಳು ಮುಗಿಯುವ ವೇಳೆಗೆ ಜನರ ಅಭಿಪ್ರಾಯ ಬದಲಾಗಿದೆ. ಉತ್ತಮ ಮೆಚ್ಚುಗೆಗಳು ಹರಿದು ಬರುತ್ತಿವೆ.

ಪ್ರೇಕ್ಷಕರು ತಮಗೆ ತೇಜಸ್ವಿ ಪ್ರಕಾಶ್ ಅವರ ನಟನೆ ಹಿಡಿಸಿದೆ, ಅವರನ್ನು ನೋಡುತ್ತಿದ್ದರೆ ಮೊದಲ‌ ಸೀಸನ್ ನಲ್ಲಿ ನಾಗಿಣಿಯಾಗಿ ಸಂಚಲನ‌ ಸೃಷ್ಡಿಸಿದ್ದ ನಟಿ ಮೌನಿ ರಾಯ್ ನೆನಪಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ್ದಾರೆ. ಒಟ್ಟಾರೆ ನಟಿ ತೇಜಸ್ವಿ ಪ್ರಕಾಶ್ ಜನರ ನೆಗೆಟಿವ್ ಕಾಮೆಂಟ್ ಗಳನ್ನು ಪಾಸಿಟಿವ್ ಆಗಿ ಬದಲಾಯಿಸುವಲ್ಲಿ ಯಶಸ್ಸು ಪಡೆದಿದ್ದಾರೆ. ಮುಂದೆ ನಾಗಿನ್ ಹೀಗೆ ಮುಂದುವರೆಯಲಿದೆಯಾ? ಕಾದು ನೋಡಬೇಕಾಗಿದೆ.

Leave a Reply

Your email address will not be published.