ಅಂದು ಆಫ್ಘಾನಿಸ್ತಾನದ ಸಚಿವರು, ಇಂದು ಜರ್ಮಿನಿಯ ರಸ್ತೆಗಳಲ್ಲಿ ಪಿಜ್ಜಾ ಡಿಲೆವರಿ ಬಾಯ್

0 0

ಆಫ್ಘಾನಿಸ್ತಾನವನ್ನು ತಾಲಿಬಾನ್ ಉ ಗ್ರ ರು ತಮ್ಮ ವಶಕ್ಕೆ ಪಡೆದುಕೊಂಡು, ಅಟ್ಟಹಾಸವನ್ನು ನಡೆಸುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಮಾಚಾರ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆಫ್ಘಾನಿಸ್ತಾನದ ಪರಿಸ್ಥಿತಿಯನ್ನು ಕಂಡು ಜಗತ್ತಿನ ಬಹುತೇಕ ರಾಷ್ಟ್ರಗಳು ಅಲ್ಲಿನ ಜನರ ದುಸ್ಥಿತಿಯನ್ನು ಕಂಡು ಮರುಕ ಪಡುತ್ತಿದ್ದಾರೆ. ಇನ್ನು ಆಫ್ಘಾನಿಸ್ತಾನ ತಾಲಿಬಾನ್ ಉ ಗ್ರ ರ ವಶವಾದ ನಂತರ ಭೀ ತಿ ಗೆ ಒಳಗಾದ ಅಸಂಖ್ಯಾತ ಮಂದಿ ಆಫ್ಘಾನಿಸ್ತಾನದ ಪ್ರಜೆಗಳು ದೇಶವನ್ನು ತೊರೆದು ಸುರಕ್ಷಿತ ಸ್ಥಳಗಳ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆಯೇ ಈ ಹಿಂದೆ ಆಫ್ಘಾನಿಸ್ತಾನದಲ್ಲಿ ಸಚಿವರಾಗಿದ್ದ ವ್ಯಕ್ತಿಯೊಬ್ಬರು ಇದೀಗ ಜರ್ಮನಿಯ ಬೀದಿಗಳಲ್ಲಿ ಪಿಜ್ಜಾ ಡಿಲೆವರಿ ಮಾಡುತ್ತಿದ್ದಾರೆ ಎನ್ನುವ ವರದಿಯೊಂದು ಬಂದಿದೆ.

ಆಫ್ಘಾನಿಸ್ತಾನದಲ್ಲಿ ಎಲ್ಲರಿಗಿಂತ ಮೊದಲೇ ದೇಶವನ್ನು ಬಿಟ್ಟು ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ 2018ರಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವರಾಗಿದ್ದ ಸೈಯದ್ ಅಹಮದ್ ಶಾ ಸಾಧತ್ ಅವರೇ ಈಗ ಜರ್ಮನಿಯ ರಸ್ತೆಗಳಲ್ಲಿ ಪಿಜ್ಜಾ ಡಿಲೆವರಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗಿದ್ದು, ಸೈಯದ್ ಅಹ್ಮದ್ ಶಾ ಸಾದತ್ ಅವರು ಜರ್ಮನಿಯ ಬೀದಿಗಳಲ್ಲಿ ಪಿಜ್ಜಾ ಡಿಲೆವರಿ ಮಾಡಲು ಸೈಕಲ್ ಏರಿ ಹೊರಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ.

ಸೈಯದ್ ಅಹ್ಮದ್ ಶಾ ಸಾದತ್ ಅವರು 2018 ರಿಂದ ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವರಾಗಿದ್ದರು. 2020 ರಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅದೇ ವರ್ಷ ಡಿಸೆಂಬರ್ ನಲ್ಲಿ ಅವರು ಜರ್ಮನಿಗೆ ಆಗಮಿಸಿದ್ದರು ಎಂದು ಸ್ಕೈನ್ಯೂಸ್ ಅರೇಬಿಯಾ ವರದಿ ಮಾಡಿದೆ. ಜರ್ಮನಿಯ ಬೀದಿಯಲ್ಲಿ ಪಿಜ್ಜಾ ಡಿಲೆವರಿ ಮಾಡಲು ಸೈಕಲ್ ನಲ್ಲಿ ಹೋಗುವಾಗ ಅವರನ್ನು ನೋಡಿ ಅವರ ಫೋಟೋವನ್ನು ತೆಗೆದಿರುವುದಾಗಿ ಜರ್ಮನ್ ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಆಫ್ಘಾನಿಸ್ತಾನ ತಾಲಿಬಾನ್ ಉ ಗ್ರ ರ ವಶವಾದಮೇಲೆ ಸೈಯದ್ ಅಹಮದ್ ಶಾ ಸಾದತ್ ಅವರ ಫೋಟೋಗಳು ಬಹಳಷ್ಟು ವೈರಲ್ ಆಗುತ್ತಿದೆ.

Leave A Reply

Your email address will not be published.