ಅಂದುಕೊಂಡಿದ್ದೇ ಆಯ್ತಲ್ವ: RRR ಬಿಡುಗಡೆ ಮುಂದೂಡಿದೆ ಭರ್ಜರಿ ಟ್ರೋಲ್ ಆದ ಚಿತ್ರ ತಂಡ

0 1

ಪರಿಸ್ಥಿತಿಗಳು ಸಾಮಾನ್ಯವಾಗಿಯೇ ಇದೆ. ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಯಿತು, ಪ್ರೀ ರಿಲೀಸ್ ಈವೆಂಟ್ ಸಹಾ ಬಹಳ ಭರ್ಜರಿಯಾಗಿ ನಡೆಯಿತು. ಇನ್ನು ಐದಾರು ದಿನಗಳಲ್ಲಿ ಸಿನಿಮಾ ತೆರೆಗೆ ಬರಲಿದೆ, ತೆರೆಯ ಮೇಲೆ ಸಿನಿಮಾ ನೋಡಿ ಖುಷಿ ಪಡೋಣ ಎಂದು ಕೊಂಡಿದ್ದವರಿಗೆಲ್ಲಾ ಒಮ್ಮಿಂದೊಮ್ಮೆಗೆ ಶಾ ಕ್ ನೀಡಿದೆ ಆರ್ ಆರ್ ಆರ್ ಸಿನಿಮಾ ತಂಡ. ಜನವರಿ 7 ರಂದು ತೆರೆಯ ಮೇಲೆ ಅಬ್ಬರಿಸಬೇಕಿದ್ದ ತ್ರಿಬಲ್ ಆರ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿದ್ದು ಈಗ ಅಭಿಮಾನಿಗಳಿಗೆ ದೊಡ್ಡ ಶಾ ಕ್ ಅನ್ನು ನೀಡಿದೆ.

ಓಮಿಕ್ರಾನ್ ಕೇಸುಗಳ ಸಂಖ್ಯೆ ದೇಶದಲ್ಲಿ ಏರುತ್ತಿರುವ ಕಾರಣದಿಂದ, ಈಗಾಗಲೇ ಕೆಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಹೊಸ ನಿಬಂಧನೆಗಳನ್ನು ಅಳವಡಿಸಿದೆ, ಕೊರೊನಾ ಮಾರ್ಗಸೂಚಿ ಯನ್ನು ಜಾರಿಗೊಳಿಸುತ್ತಿವೆ‌. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕುವುದು ಅನಿವಾರ್ಯ ಎಂದು ಭಾವಿಸಿದ ಸಿನಿಮಾ ತಂಡ ತಮ್ಮ ಸಿನಿಮಾವನ್ನು ಮುಂದೂಡಲು ತೀರ್ಮಾನವನ್ನು ಮಾಡಿದೆ ಎನ್ನಲಾಗಿದೆ. ಈ ನಿರ್ಣಯ ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

ಯಾವಾಗ ತಮ್ಮ‌ ಅಭಿಮಾನ ನಟರನ್ನು ತೆರೆಯ ಮೇಲೆ ನೋಡುತ್ತೇವೆ ಎಂದು ಕಾಯುತ್ತಿದ್ದ ಮೆಗಾ ಕುಟುಂಬ ಹಾಗೂ ನಂದಮೂರಿ ಕುಟುಂಬದ ಸ್ಟಾರ್ ಗಳ ಅಭಿಮಾನಿಗಳು ಬೇಸರವನ್ನು ಪಡುವಂತಾಗಿದೆ. ಆದರೆ ಪ್ರಸ್ತುತ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದಾಗ ಇಂತಹುದೊಂದು ನಿರ್ಣಯ ಅನಿವಾರ್ಯ ಕೂಡಾ ಆಗಿದೆ. ಹೀಗೆ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು ಇದೀಗ ಟ್ರೋಲ್ ಗೆ ಗುರಿಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈ ಹಿಂದೆ ರಾಜಮೌಳಿ ನಿರ್ದೇಶನ ಮಾಡಿದ್ದ ಸೈ ಸಿನಿಮಾದಲ್ಲಿ ಒಂದು ಡೈಲಾಗ್ ನಲ್ಲಿ, ನಟ “ಏನಕ್ಕೆ ಅಳ್ತೀಯಾ, ಹೊಸದಾಗಿ ಏನು ನಡೆದಿದೆ, ಅಂದುಕೊಂಡಿದ್ದೇ ಅಲ್ವಾ ಆಗಿದ್ದು” ಎಂದು ಹೇಳುವ ಡೈಲಾಗ್ ನ್ನು ಹೇಳುವ ಮೂಲಕ ಆರ್ ಆರ್ ಆರ್ ಸಿನಿಮಾ ಬಿಡುಗಡೆಯ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಜೂ.ಎನ್ ಟಿ ಆರ್ ಫೋಟೋಗಳನ್ನು ಶೇರ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

Leave A Reply

Your email address will not be published.