ಅಂದಗಾತಿ ಮತಗಟ್ಟೆ ಅಧಿಕಾರಿ ಮತ್ತೊಮ್ಮೆ ವೈರಲ್: ವರ್ಷಗಳ ನಂತರ ಹೊಸ ಲುಕ್ ನಲ್ಲಿ ಸಂಚಲನ ಸೃಷ್ಟಿ!!

Entertainment Featured-Articles News

ಚುನಾವಣೆಗಳು ನಿರ್ದಿಷ್ಟ ಅವಧಿಯಲ್ಲಿ ನಡೆಯುತ್ತಲೇ ಇರುತ್ತವೆ‌. ಈ ವೇಳೆ ಮತಗಟ್ಟೆ ಅಧಿಕಾರಿಗಳ ಕಾರ್ಯಗಳು ಬಹಳ ಪ್ರಮುಖವಾದುದು. ಆದರೆ ಹೀಗೆ ಮತ ಗಟ್ಟೆ ಅಧಿಕಾರಿಯಾಗಿ ಬಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದರು ಚುನಾವಣೆ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ. ಹೌದು ರೀನಾ ದ್ವೀವೇದಿ ಅವರು ಮೊದಲ ಬಾರಿಗೆ ದೊಡ್ಡ ಸದ್ದು ಮಾಡಿದ್ದು 2017 ರಲ್ಲಿ ಉತ್ತರ ಪ್ರದೇಶದ ಚುನಾವಣೆಯ ಸಮಯದಲ್ಲಿ. ಆಗ ರೀನಾ ದ್ವಿವೇದಿ ಅವರು ಇಂಟರ್ನೆಟ್ ಸೆನ್ಸೇಷನ್ ಆಗಿ ಎಲ್ಲೆಲ್ಲೂ ಅವರ ಫೋಟೋಗಳು ಹರಿದಾಡಿದ್ದವು ಹಾಗೂ ಸಹಜವಾಗಿಯೇ ಯಾರೀಕೆ ಎಂದು ಅನೇಕರು ಅತ್ತ ಗಮನ ನೀಡಿದ್ದರು.

ಅನಂತರ 2019 ರಲ್ಲಿ ಸುಂದರವಾದ ಹಳದಿ ಸೀರೆಯನ್ನು ಧರಿಸಿ ಉತ್ತರ ಪ್ರದೇಶದ ಮತಗಟ್ಟೆ ಪ್ರದೇಶದಲ್ಲಿ ರೀನಾ ದ್ವಿವೇದಿ ಅವರು ಕಾಣಿಸಿಕೊಂಡಾಗ ಜನರ ತಲೆ ಅವರ ಕಡೆಗೆ ತಿರುಗಿತ್ತು. ಮತ್ತೊಮ್ಮೆ ರೀನಾ ದ್ವಿವೇದಿ ಅವರ ಸುಂದರವಾದ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಡಿಸಿದವು. ಹೀಗೆ ಮತಗಟ್ಟೆ ಅಧಿಕಾರಿಯಾಗಿ ಬಂದ ಮಹಿಳೆಯೊಬ್ಬರು ಇಷ್ಟು ದೊಡ್ಡ ಸದ್ದು, ಸುದ್ದಿ ಮಾಡಿದ್ದು ಅದೇ ಮೊದಲ ಬಾರಿ ಎನ್ನುವುದಾಗಿತ್ತು. ಒಬ್ಬ ಸೆಲೆಬ್ರಿಟಿ ಮಟ್ಟಕ್ಕೆ ರೀನಾ ಜನಪ್ರಿಯತೆ ಪಡೆದುಕೊಂಡರು.

ಈಗ 2022 ರ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯ ವೇಳೆಯಲ್ಲಿ ರೀನಾ ದ್ವಿವೇದಿ ಮತ್ತೊಮ್ಮೆ ಒಂದು ಅದ್ಭುತ ಎನಿಸುವ ಲುಕ್ ನೊಂದಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಮತ ಗಟ್ಟೆಯ ಸ್ಥಳದಿಂದ ಈಗ ಮತ್ತೊಮ್ಮೆ ರೀನಾ ಅವರ ಅಂದವಾದ ಹೊಸ ಲುಕ್ ನ ಫೋಟೋಗಳು ವೈರಲ್ ಆಗುತ್ತಿದೆ. ನಾಲ್ಕನೇ ಹಂತದ ಚುನಾವಣೆಗೆ ಸಜ್ಜಾಗುತ್ತಿರುವ ವೇಳೆಯಲ್ಲಿ ರೀನಾ ದ್ವಿವೇದಿ ಅವರ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಮತ್ತೊಮ್ಮೆ ವೈರಲ್ ಆಗಿದೆ.

ಕಳೆದ ಬಾರಿ ಹಳದಿ ಬಣ್ಣದ ಸೀರೆಯನ್ನುಂಟು ಸಾಂಪ್ರದಾಯಿಕ ಲುಕ್ ನೊಂದಿಗೆ ಅಂದವಾದ ಒಂದು ತಂಗಾಳಿಯಂತೆ ಕಾಣಿಸಿಕೊಂಡಿದ್ದ ರೀನಾ ಈ ಬಾರಿ ಸ್ವಲ್ಪ ಬದಲಾಗಿದ್ದಾರೆ. ಈ ಬಾರಿ ತಮ್ಮ ಹೊಸ ಲುಕ್ ನೊಂದಿಗೆ ರೀನಾ ದ್ವಿವೇದಿ ಮತ್ತೊಮ್ಮೆ ಇಂಟರ್ನೆಟ್ ಸೆನ್ಸೇಷನ್ ಆಗಿ ಮಾರ್ಪಟ್ಟಿದ್ದಾರೆ. ಕಳೆದ ಬಾರಿಯ ಲುಕ್ ಗೆ‌‌ ಸಂಪೂರ್ಣ ವಿಭಿನ್ನ ಲುಕ್ ನಿಂದ ಕಾಣಿಸಿಕೊಂಡಿರುವ ರೀನಾ, ಸ್ಲೀವ್ ಲೆಸ್ ಬ್ಲಾಕ್ ಟಾಪ್, ಜೀಜ್ ಹೈ ವೇಸ್ಟ್ ಪ್ಯಾಂಟ್ ಧರಿಸಿ, ಗುಲಾಬಿ, ಕೆಂಪು ಬಣ್ಣದ ಬ್ಯಾಗ್ ಹಿಡಿದು ಕಾಣಿಸಿಕೊಂಡಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ರೀನಾ ಅವರು ಈ ಬಾರಿ ಗರಿಷ್ಠ ಮತದಾನದ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಹೊಸ ಲುಕ್ ನ ಬಗ್ಗೆ ಮಾತನಾಡಿರುವ ಅವರು ನಾನು ಹೊಸ ಫ್ಯಾಷನ್ ಟ್ರೆಂಡ್ ಗಳನ್ನು ಫಾಲೋ ಮಾಡುತ್ತಾನೆ. ನಾನು ಕೂಡಾ ಅಪ್ಡೇಟ್ ಆಗಲು ಬಯಸುತ್ತೇನೆ. ಅದಕ್ಕೆ ನನ್ನ ಲುಕ್ ಕೂಡಾ ಬದಲಾಗಿದೆ ಎಂದು ರೀನಾ ದ್ವಿವೇದಿ ಅವರು ಹೇಳಿದ್ದಾರೆ.

Leave a Reply

Your email address will not be published.