ಅಂತ್ಯಕ್ರಿಯೆ ವೇಳೆ ತೊಟ್ಟಿದ್ದ ಡ್ರೆಸ್ ಹರಾಜಿಗಿಟ್ಟ ದೀಪಿಕಾ ಪಡುಕೋಣೆ: ಛೀಮಾರಿ ಹಾಕಿದ ನೆಟ್ಟಿಗರು

Written by Soma Shekar

Published on:

---Join Our Channel---

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಬಟ್ಟೆಗಳನ್ನು ಹರಾಜು ಮಾಡುವುದು,‌ಅದರಿಂದ ಬರುವಂತಹ ಹಣದಿಂದ ಚಾರಿಟಿ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ‌. ಈ ವಿಚಾರದಲ್ಲಿ ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಸಹಾ ಹಿಂದೆ ಬಿದ್ದಿಲ್ಲ. ಏಕೆಂದರೆ ದೀಪಿಕಾ ಪಡುಕೋಣೆ ಸಹಾ ಆಗಾಗ ತಮ್ಮ ಬಟ್ಟೆಗಳನ್ನು ಹರಾಜು ಮಾಡಿ ಬರುವ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಾರೆ. ಆದರೆ ಇದೀಗ ಮತ್ತೊಮ್ಮೆ ತನ್ನ ಈ ಪ್ರಯತ್ನಕ್ಕೆ ಕೈ ಹಾಕಿದ ದೀಪಿಕಾ ಪಡುಕೋಣೆ ಅವರಿಗೆ ನಟ್ಟಿಗರು ಛೀ ಮಾರಿ ಹಾಕುತ್ತಿರುವ ಬೆಳವಣಿಗೆ ಒಂದು ನಡೆದಿದೆ. ಹೌದು ಬಟ್ಟೆ ಹರಾಜು ಹಾಕಿ ಅದರಿಂದ ಸಾಮಾಜಿಕ ಕೆಲಸಗಳನ್ನು ಮಾಡಿದರೆ ಜನ ಏಕೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವ ಪ್ರಶ್ನೆಯು ಮೂಡಿದರೆ ಅದಕ್ಕೆ ಉತ್ತರ ಇಲ್ಲಿದೆ.

ದೀಪಿಕಾ ಪಡುಕೋಣೆ ಈ ಬಾರಿ ಬಟ್ಟೆಗಳನ್ನು ಹರಾಜು ಮಾಡುವಾಗ ಒಂದು ಎಡವಟ್ಟನ್ನು ಮಾಡಿಕೊಂಡಿದ್ದೇ ಜನರ ಸಿಟ್ಟಿಗೆ ಕಾರಣವಾಗಿದೆ. ನಟಿ ದೀಪಿಕಾ ಪಡುಕೋಣೆ ತಮ್ಮ ಡ್ರೆಸ್ ಗಳನ್ನು ದಿ ಲಿವ್ ಲವ್ ಲಾಫ್ ಫೌಂಡೇಶನ್ ಗಾಗಿ ಹರಾಜು ಮಾಡುತ್ತಾರೆ. ಬಂದ ಹಣವನ್ನು ಈ ಫೌಂಡೇಶನ್ ಗೆ ಚಾರಿಟಿ ನೀಡಲು ನಿರ್ಧರಿಸಿದ್ದಾರೆ.‌ ಈ ಕಾರಣದಿಂದಾಗಿ ಅವರು ತಮ್ಮ ಎರಡು ಕುರ್ತಾಗಳನ್ನು ಹರಾಜಿಗೆ ಇಟ್ಟಿದ್ದರು. ಆದರೆ ನಟಿ ಈ ಎರಡು ಕುರ್ತಾಗಳನ್ನು ಎರಡು ದು ರಂ ತ ದ ಸಂದರ್ಭಗಳಲ್ಲಿ ತೊಟ್ಟಿದ್ದರು ಎನ್ನುವುದೇ ಈಗ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ.

ಈ ಎರಡು ಕುರ್ತಾಗಳಲ್ಲಿ ಒಂದನ್ನು ನಟಿ ದೀಪಿಕಾ ಪಡುಕೋಣೆ, ಮನೆಯಲ್ಲಿ ನೇ ಣಿ ಗೆ ಶರಣಾಗಿ ಪ್ರಾಣ ಬಿಟ್ಟಿದ್ದ ನಟಿ ಜಿಯಾ ಖಾನ್ ಅವರ ಅಂತಿಮ ಸಂಸ್ಕಾರದ ವೇಳೆಯಲ್ಲಿ ಗೆದ್ದು ಕೊಂಡಿದ್ದರು. ಇದಾದ ನಂತರ ಇನ್ನೊಂದು ಕುರ್ತಾವನ್ನು ನಟಿ ಪ್ರಿಯಾಂಕ ಚೋಪ್ರಾ ಅವರ ತಂದೆಯ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ತೊಟ್ಟಿದ್ದರು. ಈಗ ಎರಡು ವಿಷಾದದ ಸಂದರ್ಭಗಳಲ್ಲಿ ತಾನು ಧರಿಸಿದ್ದ ಡ್ರೆಸ್ ಅನ್ನು ಹರಾಜಿಗೆ ಇಟ್ಟಿದ್ದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದ್ದು, ನಟಿಯನ್ನು ಟೀಕೆ ಮಾಡುತ್ತಿದ್ದಾರೆ. ಅನೇಕರು ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡಿಕೊಂಡು ಟೀಕೆ ಮಾಡಿದ್ದಾರೆ.

ನೆಟ್ಟಿಗರೊಬ್ಬರು ತಮ್ಮ ಖಾತೆಯಲ್ಲಿ ದೀಪಿಕಾ ಮಾರಾಟಕ್ಕೆ ಇಟ್ಟ ಡ್ರೆಸ್ ಫೋಟೋ ಶೇರ್ ಮಾಡಿಕೊಂಡು,”ನಾನು ತುಂಬಾ ಆ ಘಾ ತ ಕ್ಕೊಳಗಾಗಿದ್ದೇನೆ .. ನನ್ನ ನೆಚ್ಚಿನ ದೀಪಿಕಾ ಪಡುಕೋಣೆ 2013 ರಿಂದ ತನ್ನ ಬಟ್ಟೆಗಳನ್ನು ಹರಾಜು ಹಾಕಿದ್ದಾರೆ. ಅವರು ಅದನ್ನು ವಿವಿಧ ಅಂತ್ಯಕ್ರಿಯೆ ಸಮಾರಂಭಗಳಿಗೆ ಧರಿಸಿದ್ದಳು. ಇದೊಂದು ಹೊಡೆತ! ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳಿಗೆ ಕಾಮೆಂಟ್ ಮಾಡಿದ ಹಲವರು ಸಹಾ ಅಸಮಾಧಾನ ಹೊರ ಹಾಕಿದ್ದಾರೆ.

Leave a Comment