ಅಂತೂ ಆ ಘಳಿಗೆ ಬಂತು!! ತೆಲುಗು ಸಿನಿಮಾ ನಾಯಕಿಯಾಗಿ ನಿವೇದಿತಾ ಗೌಡ ಸಿನಿಮಾ ಎಂಟ್ರಿ

Entertainment Featured-Articles Movies News

ಬಿಗ್ ಬಾಸ್ ಮೂಲಕ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟು, ಅಲ್ಲಿ ತನ್ನದೇ ಆದ ಸ್ಟೈಲ್ ನಿಂದ ಸದ್ದು ಮಾಡಿದ್ದ ನಿವೇದಿತಾ ಗೌಡ ಅವರು ಇತ್ತೀಚಿಗೆ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಗೆದ್ದು, ಸೌಂದರ್ಯ ಕಿರೀಟವನ್ನು ಧರಿಸಿದ ನಂತರ ಮತ್ತೊಮ್ಮೆ ಸಾಕಷ್ಟು ಸುದ್ದಿಯಾಗಿದ್ದಾರೆ. ನಿವೇದಿತಾ ಗೌಡ ಅವರು ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಜನರ ಆಯ್ಕೆ ವಿಭಾಗದಲ್ಲಿ ಗೆದ್ದು ಸುಂದರಿಯ ಕಿರೀಟ ಧರಿಸಿ ಬೀಗಿದ್ದಾರೆ. ಅವರ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿರುವುದು ಇದರಿಂದ ತಿಳಿಯುತ್ತದೆ. ನಿವೇದಿತಾ ಗೌಡ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲವಾದರೂ ಒಬ್ಬ ನಟಿಯಷ್ಟೇ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಬೆಳ್ಳಿತೆರೆಗೆ ಇನ್ನೂ ಎಂಟ್ರಿ ನೀಡದೇ ಇದ್ದರೂ ಸಹಾ ಕಿರುತೆರೆಯಲ್ಲಿ ನಿವೇದಿತಾ ಗೌಡ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವರು ಒಂದಷ್ಟು ಜಾಹೀರಾತುಗಳು ಮತ್ತು ಕಿರುತೆರೆಯ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲೇ ಪರಿಚಯವಾಗಿ ಸ್ನೇಹಿತನಾದ ಚಂದನ್ ಶೆಟ್ಟಿ ಅವರ ಜೊತೆಗೆ ನಿವೇದಿತಾ ಅವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಮದುವೆಯ ನಂತರ ಅವರು ಮಿಸೆಸ್ ಇಂಡಿಯಾ ಕಿರೀಟ ಗೆದ್ದಿರುವುದು ಅವರ ಅಭಿಮಾನಿಗಳಿಗೆ ಸಹಾ ಸಾಕಷ್ಟು ಖುಷಿಯನ್ನು ನೀಡಿದೆ.

ಸೌಂದರ್ಯ ಕಿರೀಟಗಳನ್ನು ಗೆದ್ದ ನಂತರ ಅಂದಗಾತಿಯರು ಸಿನಿಮಾ ರಂಗಕ್ಕೆ ಎಂಟ್ರಿ ನೀಡುವುದು ಅಥವಾ ಅವರಿಗೆ ಸಿನಿಮಾ ರಂಗದಿಂದ ಹೊಸ ಹೊಸ ಅವಕಾಶಗಳು ಅರಸಿ ಬರುವುದು ಮೊದಲಿನಿಂದಲೂ ಇರುವ ಸಂಪ್ರದಾಯವೇ ಆಗಿದೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಿವೇದಿತಾ ಗೌಡ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಇದೀಗ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ನಂತರ ನಿವೇದಿತಾ ಅವರಿಗೆ ಸಿನಿಮಾ ರಂಗದಿಂದ ಹೊಸ ಅವಕಾಶಗಳು ಅರಸಿ ಬರುತ್ತಿವೆ ಎನ್ನಲಾಗಿದೆ.

ಹೌದು ನಿವೇದಿತಾ ಗೌಡ ಅವರಿಗೆ ಕನ್ನಡ ಮಾತ್ತವೇ ಅಲ್ಲದೇ ತೆಲುಗು, ತಮಿಳು ಭಾಷೆಗಳ ಸಿನಿಮಾಗಳಿಂದಲೂ ಸಹಾ ಅವಕಾಶಗಳು ಬರುತ್ತಿದ್ದು, ನಿವೇದಿತಾ ಅವರು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಹಳ ಚೆನ್ನಾಗಿರುವ ಕಥೆಗಳನ್ನು ಕೇಳಿ ಖುಷಿಯಾಗಿದ್ದು, ಒಂದು ಉತ್ತಮವಾದ ಕಥೆಗೆ ಹಸಿರು ನಿಶಾನೆ ತೋರುವ ಸಾಧ್ಯತೆಗಳು ಇದೆ ಎನ್ನಲಾಗಿದ್ದು, ಟಾಲಿವುಡ್ ಸಿನಿಮಾದ ಮೂಲಕ ನಿವೇದಿತಾ ಅವರು ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗಿದೆ. ಈ ವಿಷಯ ಕೇಳಿ ಅವರ ಅಭಿಮಾನಿಗಳು ಸಹಾ ಖುಷಿಯಾಗಿದ್ದಾರೆ.

Leave a Reply

Your email address will not be published.