ಅಂತಾ ಹಾಡಿನಲ್ಲಿ ನಟಿಸಬೇಕಾಗಿ ಬಂದ್ರೆ ಆ ಸಿನಿಮಾನೇ ಮಾಡೋದಿಲ್ಲ: ನಟಿ ಕಿಯಾರಾ ಅದ್ವಾನಿ ಹೀಗೆ ಹೇಳಿದ್ದೇಕೆ?

Entertainment Featured-Articles Movies News

ಬಾಲಿವುಡ್ ನಲ್ಲಿ ಒಂದರ ನಂತರ ಮತ್ತೊಂದು ಸ್ಟಾರ್ ಗಳ ಸಿನಿಮಾಗಳ ಸೋಲಿನ ನಡುವೆಯೇ ಭೂಲ್ ಭುಲಯ್ಯ 2 ಸಿನಿಮಾದ ಯಶಸ್ಸು ಬಾಲಿವುಡ್ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಆನಿಸ್ ಬಜ್ಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ಕಿಯಾರಾ ಅದ್ವಾನಿ, ಟಬು, ರಾಜ್ ಪೌಲ್ ಯಾದವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಟಿ ಸಿರೀಸ್ ಫಿಲ್ಮ್ಸ್ ಮತ್ತು ಸಿನಿ ಸ್ಟುಡಿಯೋಸ್ 1 ಬ್ಯಾನರ್ ಗಳು ಸಂಯುಕ್ತವಾಗಿ ನಿರ್ಮಾಣ ಮಾಡಿವೆ. ಸಿನಿಮಾ ಬಿಡುಗಡೆ ನಂತರ ದೊಡ್ಡ ಮಟ್ಟದಲ್ಲಿ ಗೆಲುವನ್ನು ಪಡೆದಿದೆ.

ಸಿನಿಮಾ ಪಡೆದ ಗೆಲುವಿನ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಚಿತ್ರತಂಡವು ಹಿಂದಿ ಕಿರುತೆರೆಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ದಿ ಕಪಿಲ್ ಶರ್ಮಾ ಶೋ‌ ನಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ನಟಿ ಕಿಯಾರಾ ಅದ್ವಾನಿ ಅವರು ತಮಗೆ ಇರುವ ಒಂದು ಫೋಬಿಯಾ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಕಿಯಾರಾ ಶೋ ನಲ್ಲಿ ತನಗೆ ಬರ್ಡ್ ಫೋಬಿಯಾ ಅಂದರೆ ಹಕ್ಕಿಗಳನ್ನು ಕಂಡರೆ ಇರುವ ಭಯದ ಬಗ್ಗೆ ಮಾತನಾಡಿದ್ದಾರೆ.

ಕಿಯಾರಾ ಮಾತನಾಡುತ್ತಾ, ನನಗೆ ಬರ್ಡ್ ಫೋಬಿಯಾ ಇದೆ. ನನಗೆ ದೊಡ್ಡ ಹಕ್ಕಿಗಳನ್ನು ನೋಡಿದರೆ ಭಯವಾಗುತ್ತದೆ. ಅದು ಏಕೆ ಹಾಗೆ ಆಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ದೊಡ್ಡ ಪಕ್ಷಿಗಳನ್ನು ಕಂಡಾಗ ಭಯವಾಗುತ್ತದೆ. ನಾನು ಅತ್ತು ಬಿಡುತ್ತೇನೆ. ಸೋನಂ ಕಪೂರ್ ಮಾಡಿರುವ ಮಸಕ್ಕಲಿ ಹಾಡನ್ನು ಎಂದಿಗೂ ಮಾಡೋಕಾಗಲ್ಲ. ಒಂದು ವೇಳೆ ಅಂತಹ ಹಾಡು ಮಾಡಬೇಕಾಗಿ ಬಂದರೆ ನಾನು ಅಂತಹ ಸಿನಿಮಾ ಪ್ರಾಜೆಕ್ಟ್ ನಿಂದಲೇ ಹೊರಗೆ ಬರುತ್ತೇನೆ ಎಂದು ಕಿಯಾರಾ ಹೇಳಿದ್ದಾರೆ.

ಪ್ರಸ್ತುತ ನಟಿ ಕಿಯಾರಾ ಅವರು ತೆಲುಗಿನ ಸ್ಟಾರ್ ನಟ ರಾಮ್ ಚರಣ್ ನಾಯಕನಾಗಿರುವ, ಶಂಕರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಅವರು ಬಾಲಿವುಡ್ ಸಿನಿಮಾ ಜುಗ್ ಜುಗ್ ಜೀಯೋ ದಲ್ಲೂ ನಟಿಸಿದ್ದು, ಈ ಸಿನಿಮಾದಲ್ಲಿ ವರುಣ್ ಧವನ್, ಅನಿಲ್ ಕಪೂರ್, ನೀತೂ ಕಪೂರ್, ಮನೀಶ್ ಪೌಲ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದು, ಸಿನಿಮಾ ಜೂನ್ 24 ರಂದು ತೆರೆಗೆ ಬರಲಿದೆ ಎಂದು ಚಿತ್ರ ತಂಡ ತಿಳಿಸಿದೆ.

Leave a Reply

Your email address will not be published.