ಅಂತಹ ವ್ಯಕ್ತಿಯನ್ನು ನಾನಿನ್ನೂ ಭೇಟಿಯಾಗಿಲ್ಲ: ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ ಸಮಂತಾ
ಸಮಂತಾ ಸದ್ಯಕ್ಕೆ ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಕೂಡಾ ಅವರಿಗೆ ಅವಕಾಶಗಳು ಅರಸಿಕೊಂಡು ಬರುತ್ತಿವೆ. ವಿಚ್ಛೇದನದ ನಂತರ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುವ ಸಮಂತಾರನ್ನು ಕಂಡು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ. ಇನ್ನು ಸಮಂತಾ ಅವರು ಸಿನಿಮಾ ಕೆಲಸಗಳ ನಡುವೆ ಬ್ರೇಕ್ ಸಿಕ್ಕಾಗಲೆಲ್ಲಾ ದೇಶ ವಿದೇಶಗಳನ್ನು ಸುತ್ತುತ್ತಾ, ಸ್ನೇಹಿತರ ಜೊತೆಗೆ ಉಲ್ಲಾಸದ ಸಮಯವನ್ನು ಕಳೆಯುತ್ತಿದ್ದಾರೆ.
ವಿಚ್ಛೇದನದ ನಂತರ ಅಕ್ಷರಶಃ ಸಮಂತಾ ಜೀವನ ಬದಲಾಗಿದೆ. ಹೊಸ ವರ್ಷದ ವೇಳೆ ಅವರು ಗೆಳತಿಯರ ಜೊತೆ ಗೋವಾಕ್ಕೆ ಹೋಗಿದ್ದರು. ಇನ್ನು ಈಗ ಸಮಂತಾ ತಮ್ಮ ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಪರಿಚಯಿಸಿದ್ದಾರೆ. ಹೌದು ನಟಿ ಸಮಂತಾ ನಟ ವೆನ್ನೆಲ ಕಿಶೋರ್ ಮತ್ತು ರಾಹುಲ್ ರವೀಂದ್ರ ಜೊತೆಗೆ ಹರಟೆ ಹೊಡೆಯುತ್ತಾ ಕೂತಿರುವ ಫೋಟೋವನ್ನು ಶೇರ್ ಮಾಡಿಕೊಂಡು, “ನೀವಿಲ್ಲದಿದ್ದರೆ ನಾನೇನು ಮಾಡುತ್ತಿದ್ದೆ” ಎಂದು ಬರೆದುಕೊಂಡಿದ್ದಾರೆ.
ಸಮಂತಾ ಶೇರ್ ಮಾಡಿದ ಫೋಟೋ ವೈರಲ್ ಆಗಿದ್ದು, ಇದನ್ನು ನೋಡಿ ಅವರ ಅಭಿಮಾನಿಗಳು ಬಹಳ ಖುಷಿ ಪಟ್ಟು, ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ರಾಹುಲ್ ರವೀಂದ್ರ ಅವರು ನಟಿ ಸಮಂತಾ ಅವರ ಆಪ್ತ ಗೆಳತಿಯ ಪತಿಯಾಗಿದ್ದಾರೆ. ಇನ್ನು ವೆನ್ನೆಲಾ ಕಿಶೋರ್ ಈಗಾಗಲೇ ಜನಪ್ರಿಯತೆ ಪಡೆದಿರುವ ತೆಲುಗು ಸಿನಿಮಾಗಳ ಸ್ಟಾರ್ ಕಮಿಡಿಯನ್ ಆಗಿದ್ದಾರೆ. ಸಮಂತಾ ಹಾಗೂ ವೆನ್ನೆಲ ಕಿಶೋರ್ ನಡುವೆ ಉತ್ತಮ ಸ್ನೇಹ ಸಂಬಂಧವಿದೆ.
ಅಲ್ಲದೇ ಸಮಂತಾ ಮತ್ತೊಂದು ಪೋಸ್ಟ್ ನಲ್ಲಿ ಸುಲಭವಾದ ಗತವನ್ನು ಹೊಂದಿರುವ ಸದೃಢ ವ್ಯಕ್ತಿಯನ್ನು ನಾನು ಇಲ್ಲಿಯವರೆಗೂ ನೋಡಿಲ್ಲ ಮತ್ತು ಭೇಟಿಯಾಗಿಲ್ಲ ಎಂದು ಬರೆದುಕೊಂಡಿದ್ದರು. ಪ್ರಸ್ತುತ ಸಮಂತಾ ಪೋಸ್ಟ್ ಮಾಡಿದ್ದ ಪೋಸ್ಟ್ ಗಳು ಎಲ್ಲರ ಗಮನವನ್ನು ಸೆಳೆದಿದೆ. ಸಮಂತಾ ಸ್ತ್ರೀ ಪ್ರಧಾನ ಕಥೆಗನ್ನುಳ್ಳ ಯಶೋಧಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಇನ್ನೂ ಹೊಸ ಹೊಸ ಪ್ರಾಜೆಕ್ಟ್ ಗಳು ಅವರ ಕೈಯಲ್ಲಿ ಇವೆ.
ಸಮಂತಾ ವೃತ್ತಿ ಜೀವನದ ಬಗ್ಗೆ ಹೆಚ್ಚು ಹೇಳುವುದಾದರೆ ಹೊಸ ವೆಬ್ ಸಿರೀಸ್ ಗಳಿಗೆ ಸಮಂತಾ ಸಿದ್ಧವಾಗುತ್ತಿದ್ದಾರೆ. ಇನ್ನೊಂದೆಡೆ ಜೂನಿಯರ್ ಎನ್ ಟಿ ಆರ್ ಹಾಗೂ ಮಹೇಶ್ ಬಾಬು ಅಭಿನಯದ ಹೊಸ ಸಿನಿಮಾಗಳಿಗೆ ಸಮಂತಾ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಬಾಲಿವುಡ್ ನ ವರುಣ್ ಧವನ್ ಜೊತೆ ಹೊಸ ವೆಬ್ ಸಿರೀಸ್ ನಲ್ಲಿ ಸಮಂತ ನಟಿಸಲಿದ್ದಾರೆ ಎನ್ನಲಾಗಿದೆ.