ಸೋಮವಾರ ಹೀಗೆ ಪೂಜೆ ಮಾಡಿದರೆ ಸರ್ವ ಇಷ್ಟಾರ್ಥಗಳು ನೆರವೇರಿ ಶಿವನ ಕೃಪಾ ಕಟಾಕ್ಷವು ಒಲಿಯುತ್ತದೆ

Written by Soma Shekar

Published on:

---Join Our Channel---

ಹಿಂದೂ ಧರ್ಮದಲ್ಲಿ, ಸೋಮವಾರದ ದಿನವನ್ನು ಲಯಕಾರನಾದ ಭಗವಾನ್ ಶಿವನ ಪೂಜೆಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಶಿವನು ಒಲಿದರೆ, ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವ ದೇವನಾಗಿದ್ದು, ಆದ್ದರಿಂದಲೇ ಆತನನ್ನು ಬೋಳಾ ಶಂಕರನೆಂದು ಸಹಾ ಕರೆಯಲಾಗುತ್ತದೆ. ಮಹಾ ಶಿವನು ತುಂಬಾ ಸರಳ ಮತ್ತು ನಿಷ್ಕಪಟನಾದ ದೇವನಾಗಿದ್ದು, ಇದೇ ಕಾರಣದಿಂದಾಗಿಯೇ ಮಹಾಶಿವನನ್ನು ಭೋಲೇನಾಥ್ ಎಂದು ಸಹಾ ಭಕ್ತರು ಆರಾಧನೆ ಮಾಡುತ್ತಾರೆ.

ಮಹಾ ಶಿವನ ಆರಾಧನೆಯು ಧಾರ್ಮಿಕವಾಗಿ ಮಾತ್ರವೇ ಅಲ್ಲದೇ ಜ್ಯೋತಿಷ್ಯದ ದೃಷ್ಟಿಯಿಂದಲೂ ಬಹಳ ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. ಸೋಮವಾರದ ದಿನ ಶಿವ ನಾಮಸ್ಮರಣೆ, ಮಂತ್ರಗಳನ್ನು ಪಠಣೆ ಮಾತ್ರದಿಂದಲೇ ಜೀವನಕದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಸೋಮವಾರದಂದು ಮಹಾದೇವನನ್ನು ಪ್ರಾಮಾಣಿಕವಾದ ಹೃದಯದಿಂದ ಪೂಜಿಸಿ,‌ಆರಾಧನೆ ಮಾಡಿದರೆ ಮಹಾದೇವನ ಆಶೀರ್ವಾದ ಖಂಡಿತ ಸಿಗುತ್ತದೆ.

ಶಿವನ ಕೃಪಾಕಟಾಕ್ಷ ಅಂತಹ ವ್ಯಕ್ತಿಯ ಮೇಲೆ ಬೀಳುತ್ತದೆ ಮತ್ತು ಅವನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಆದ್ದರಿಂದಲೇ ಸೋಮವಾರದ ದಿನ ಶಿವನ ಆರಾಧನೆಯನ್ನು ತಪ್ಪದೇ ಮಾಡಿ. ಸೋಮವಾರದಂದು ಶಿವನ ಆರಾಧನೆ ಮಾಡುವಾಗ ನಾವು ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳು ಮತ್ತು ಪರಿಹಾರಗಳ ಬಗ್ಗೆ ನಾವು ಇಂದು ವಿವರವಾಗಿ ತಿಳಿಯೋಣ ಬನ್ನಿ.

ಮಹಾದೇವನ ಆರಾಧನೆಯು ನಮವೆ ಭಯದಿಂದ ಮುಕ್ತಿ ನೀಡುತ್ತದೆ. ನೀವು ಯಾವಾಗಲೂ ಯಾರನ್ನು ನಿಮ್ಮ ಶ ತೃ ಗಳೆಂದು ತಿಳಿದಿರುವಿರೋ ಅವರು ಅಥವಾ ಅಪರಿಚಿತ ಶತ್ರುಗಳ ಭ ಯವನ್ನು ಹೊಂದಿದ್ದರೆ ಅಂತಹ ಭಯವನ್ನು ತೊಡೆದುಹಾಕಲು, ಪ್ರತಿದಿನ ರುದ್ರಾಕ್ಷ ಮಾಲೆಯೊಂದಿಗೆ ಮಹಾ ಮೃತ್ಯುಂಜಯ ಮಂತ್ರವನ್ನು ಜಪ ಮಾಡಿ. ನಿಮ್ಮಲ್ಲೆ ಭಯ ಅದರಿಂದ ದೂರವಾಗುತ್ತದೆ.‌

ಶಿವಲಿಂಗದ ಆರಾಧನೆಯಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಕಠಿಣ ಪರಿಶ್ರಮ ಮತ್ತು ಹಲವು ಪ್ರಯತ್ನಗಳ ನಂತರವೂ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗದಿದ್ದರೆ, ಆರ್ಥಿಕ ತೊಂದರೆಗಳು ಕಾಡುತ್ತಲೇ ಇದ್ದರೆ ಸೋಮವಾರದ ದಿನ ನೀವು ವಿಶೇಷವಾಗಿ ಸ್ಫಟಿಕದಿಂದ ಮಾಡಿದ ಶಿವಲಿಂಗವನ್ನು ಪೂಜಿಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಶಿವನ ಆರಾಧನೆಯಿಂದ ಮನೆ ಕಟ್ಟುವ ಕನಸು ಈಡೇರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ನೀವು ನಿಮ್ಮ ಕನಸಿನ ಮನೆಯೊಂದನ್ನು ಮಾಡಲು ಸಾಧ್ಯವಾಗದಿದ್ದರೆ, ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು, ಆ ಬಯಕೆಯನ್ನು ಪೂರೈಸಲು ಸೋಮವಾರದ ದಿನ ಶಿವಲಿಂಗಕ್ಕೆ ಜೇನುತುಪ್ಪದಿಂದ ಅಭಿಷೇಕವನ್ನು ಮಾಡಿ.

ಗಂಗಾಜಲವಿರುವ ಶಿವಲಿಂಗದ ಅಭಿಷೇಕ. ಮಹಾದೇವನ ಆರಾಧನೆ ಬಹಳ ಸರಳವಾದುದು. ಕೇವಲ ಜಲವನ್ನು ಸಮರ್ಪಿಸಿದರೂ ಶಿವನು ಪ್ರಸನ್ನನಾಗುವನು ಹಾಗೂ ನೀವು ಬಯಸಿದ ವರವನ್ನು ನೀಡುವನು. ಆದ್ದರಿಂದಲೇ ಶಿವನ ಆಶೀರ್ವಾದವನ್ನು ಪಡೆಯಲು ಸೋಮವಾರದ ದಿನ ಆ ಮಹಾಶಿವನಿಗೆ ಅಥವಾ ಶಿವಲಿಂಗಕ್ಕೆ ಗಂಗಾಜಲದಿಂದ ಭಕ್ತಿಯಿಂದ ಅಭಿಷೇಕವನ್ನು ಮಾಡಿ.

ಬಯಸಿದ ಜೀವನ ಸಂಗಾತಿಯನ್ನು ಪಡೆಯಲು ಅಥವಾ ನಿಮ್ಮ ದಾಂಪತ್ಯದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಲಿದ್ದರೆ, ನಿಮ್ಮ ಆಸೆಯನ್ನು ಪೂರೈಸಿಕೊಳ್ಳಲು ಸೋಮವಾರದ ದಿನ ಶಿವಲಿಂಗದ ಮೇಲೆ ಕೇಸರಿ ಹಾಲಿನ ಅಭಿಷೇಕವನ್ನು ಮಾಡುತ್ತಾ ಶಿವ ಪಂಚಾಕ್ಷರಿ ಮಂತ್ರ ‘ಓಂ ನಮಃ ಶಿವಾಯ’ ಎಂದು ಜಪಿಸಿ.

ಮಹಾದೇವನ ಈ ಮಂತ್ರವು ಇಷ್ಟಾರ್ಥಗಳನ್ನು ಪೂರೈಸುತ್ತದೆ. ದೇವರ ಪೂಜೆಯನ್ನು ಮಾಡುವಾಗ ನಾವು ಪಠಿಸುವ ಮಂತ್ರಗಳಲ್ಲಿ ಸಾಕಷ್ಟು ಶಕ್ತಿ ಇರುತ್ತದೆ. ಆದ್ದರಿಂದಲೇ ಜೀವನಕ್ಕೆ ಸಂಬಂಧಿಸಿದ ಗುರಿಯನ್ನು ಸಾಧಿಸಲು ಅಥವಾ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಈ ಕೆಳಗೆ ನೀಡಲಾದ ಮಂತ್ರವನ್ನು ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಪಠಿಸಿ.

“ಓಂ ದೇವಾಧಿದೇವ ದೇವೇಶ
ಸರ್ವಪ್ರಾಣಭೂತಮ್.
ಪ್ರಾಣಿನಾಮಪಿ ನಾಥಸ್ತ್ವಂ ಮೃತುಂಜಯ ನಮೋಸ್ತುತೇ..”

Leave a Comment