ಸಂಕಲ್ಪ, ಚಾತುರ್ಯ ಮತ್ತು ಸಹನೆ ಇದ್ದಲ್ಲಿ ವಿಜಯ ನಿಮ್ಮದೇ! ಮೀನು ಹಿಡಿವ ಬಾಲಕನ ಪ್ರತಿಭೆಗೆ ಆನಂದ್ ಮಹೀಂದ್ರಾ ಮೆಚ್ಚುಗೆ

Written by Soma Shekar

Published on:

---Join Our Channel---

ದೇಶದ ಪ್ರಮುಖ ಉದ್ಯಮಿ, ಮಹೀಂದ್ರಾ ಸಂಸ್ಥೆಯ ಚೇರ್ಮನ್ ಆಗಿರುವ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಾರಾದರೂ ತಮ್ಮ ಬುದ್ಧಿವಂತಿಕೆ ಹಾಗೂ ಪ್ರತಿಭೆಯನ್ನು ಪ್ರದರ್ಶನ ಮಾಡುವುದನ್ನು ಕಂಡಾಗ ಆನಂದ್ ಮಹೀಂದ್ರಾ ಅವರು ಮನಃಪೂರ್ವಕವಾಗಿ ಅದಕ್ಕೆ ತಮ್ಮ ಮೆಚ್ಚುಗೆಯನ್ನು ನೀಡುತ್ತಾರೆ. ಅಲ್ಲದೇ ತಮಗೆ ಇಷ್ಟವಾದ, ತಾವು ಮೆಚ್ಚಿದ ವೀಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ ಹಾಗೂ ಕೆಲವು ಪ್ರತಿಭಾವಂತರಿಗೆ ನೆರವನ್ನು ನೀಡಲು ಮುಂದಾಗುತ್ತಾರೆ.

ಆನಂದ್ ಮಹೀಂದ್ರಾ ಅವರ ಈ ಗುಣದಿಂದಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಅಭಿಮಾನಿಸುವವರು ಮತ್ತು ಹಿಂಬಾಲಿಸುವವರ ಸಂಖ್ಯೆ ಸಹಾ ದೊಡ್ಡದಾಗಿಯೇ ಇದೆ. ಪ್ರಸ್ತುತ ಆನಂದ್ ಮಹೀಂದ್ರಾ ಅವರು ಬಾಲಕನೊಬ್ಬನ. ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಅವರು ಟ್ವೀಟ್ ಮಾಡಿರುವ ಒಂದು ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಾ ಸಾಗಿದ್ದು, ನೆಟ್ಟಿಗರ ಗಮನವನ್ನು ಸೆಳೆದು ಅವರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಆನಂದ್ ಮಹೀಂದ್ರಾ ಅವರು ಒಂದು ವೀಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಹುಡುಗನೊಬ್ಬನು ಮೀನು ಹಿಡಿಯುತ್ತಿದ್ದಾನೆ. ಆ ಹುಡುಗ ಮೀನನ್ನು ಹಿಡಿಯಲು ಬಳಸಿರುವ ವಿಧಾನವನ್ನು ನೋಡಿ, ಆನಂದ್ ಮಹೀಂದ್ರಾ ಅವರು ಅದರಲ್ಲೇ ಒಂದು ಯಶಸ್ಸಿನ ರಹಸ್ಯವಿದೆ ಎನ್ನುವ ಟ್ವೀಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ವೀಡಿಯೋ ಶೇರ್ ಮಾಡಿ, ದಿನೇ ದಿನೇ ಸಂಕೀರ್ಣವಾಗುತ್ತಿರುವ ಜಗತ್ತಿನಲ್ಲಿ, ಈ ದೃಶ್ಯವನ್ನು ನೋಡಲು ಬಹಳ ವಿಚಿತ್ರವಾಗಿ, ಪ್ರಶಾಂತತೆಯಿಂದ ಕೂಡಿದೆ ಎಂದಿದ್ದಾರೆ.

ಅಷ್ಟೇ ಅಲ್ಲ, ಈ ವೀಡಿಯೋ ನೋಡಿ ನಾವು ಅರ್ಥ ಮಾಡಿಕೊಳ್ಳಬೇಕಾದ ನೀತಿ ಏನೆಂದರೆ, ಸಂಕಲ್ಪ, ಚಾತುರ್ಯ, ಸಹನೆ ಈ ಮೂರು ಸೇರಿದರೆ ಸಿಗುವುದೇ ವಿಜಯ ಎಂದು ಆನಂದ್ ಮಹೀಂದ್ರಾ ಅವರು ಹೇಳಿದ್ದಾರೆ.‌ ಈ ವೀಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಒಂದು ನೀರಿರುವ ಜಾಗಕ್ಕೆ ಬಂದು, ಅಲ್ಲಿ ತನ್ನ ಬಳಿ ಇರುವ ನೀರು ಸೇದುವ ಯಂತ್ರದಂತಹ ಸಣ್ಣ ಪರಿಕರವನ್ನು ದಡದಲ್ಲಿ ತೇವ ಇರುವ ಮಣ್ಣಿನಲ್ಲಿ ಗಟ್ಟಿಯಾಗಿ ನಿಲ್ಲಿಸುತ್ತಾನೆ. ಅನಂತರ ಮೂರು ಗಾಳಕ್ಕೆ ಹಿಟ್ಟಿನ ಅಂಟಿನ ಮುದ್ದೆಯನ್ನು ಅಂಟಿಸಿ, ನೀರೋಳಗೆ ಎಸೆಯುತ್ತಾನೆ.

ಕೆರೆಯ ದಂಡೆಯಲ್ಲಿ ಒಂದು ಚಾಪೆಯನ್ನು ಹಾಕಿಕೊಂಡು ಆ ಹುಡುಗ ಗಾಳಕ್ಕಾಗಿ ಮೀನು ಬೀಳಲು ಕಾಯುತ್ತಾ ಕೂರುತ್ತಾನೆ. ಸ್ವಲ್ಪ ಹೊತ್ತಿನ ನಂತರ ನೀರಲ್ಲಿ ಚಲನೆ ಕಾಣಿಸುತ್ತದೆ. ಚಕ್ರಕ್ಕೆ ಹಾಕಿದ ದಾರ ನೀರೊಳಗೆ ಹೋಗಲು ಆರಂಭಿಸುತ್ತದೆ‌. ಬಾಲಕನಿಗೆ ಮೀನುಗಳು ಗಾಳಕ್ಕೆ ಸಿಲುಕಿರುವುದು ತಿಳಿಯುತ್ತದೆ. ಆತ ಆ ದಾರವನ್ನು ಎಳೆದುಕೊಂಡಾಗ ಎರಡು ಮೀನುಗಳು ಸಹಾ ಹೊರಗೆ ಬರುತ್ತವೆ. ಬಾಲಕ ಎರಡು ಮೀನುಗಳನ್ನು ತಾನು ತಂದಿದ್ದ ಚೀಲದೊಳಕ್ಕೆ ಹಾಕಿಕೊಳ್ಳುತ್ತಾನೆ. ಈ ವೀಡಿಯೋವನ್ನು ಈಗಾಗಲೇ 11 ಲಕ್ಷ ಜನರು ನೋಡಿದ್ದು, 80 ಸಾವಿರ ಜನ ಲೈಕ್ ನೀಡಿದ್ದಾರೆ.

Leave a Comment