ಶಿವನ ಡಮರುಗದಿಂದ ಸಾಮಾನ್ಯದಿಂದ, ಸಂಕೀರ್ಣ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ: ಮನೆಯಲ್ಲಿ ಅದನ್ನು ಎಲ್ಲಿಡಬೇಕು?

Written by Soma Shekar

Published on:

---Join Our Channel---

ದೇವ ದೇವ ಮಹಾದೇವ, ಲಯಕಾರನಾದ ಮಹಾಶಿವನನ್ನು ಸರ್ವಶಕ್ತ, ಸರ್ವಾಂತರ್ಯಾಮಿ, ಕರುಣಾಮಯಿ ದೇವತೆ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಶಿವಪೂಜೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶಿವನ ಆರಾಧನೆ ಖಂಡಿತ ಬಹಳ ಸುಲಭ. ಆ ಪರಮ ಶಿವನಿಗೆ ಒಂದು ಬಿಲ್ವ ಪತ್ರೆ, ಭಸ್ಮದಿಂದ ಪೂಜೆ ಮಾಡಿದರೂ ಅಥವಾ ಎಳನೀರು ನೈವೇದ್ಯ ಮಾಡಿದರೂ ಶಿವನು ತನ್ನ ಭಕ್ತರಿಗೆ ಪ್ರಸನ್ನನಾಗುತ್ತಾನೆ ಎಂದೇ ನಂಬಿಕೆಯಿದ್ದು, ಶಿವರಾಧಾನೆಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗಿದೆ.

ಶಿವ ಪುರಾಣದ ಪ್ರಕಾರ, ಭಗವಂತ ಶಿವನ ಬಳಿ ಇರುವಂತಹ ವಸ್ತುಗಳಿಗೂ ಸಹಾ ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಮಹಾ ಶಿವನು ಅವುಗಳನ್ನು ಧರಿಸಲು ಬೇರೆ ಬೇರೆ ಪೌರಾಣಿಕ ಕಾರಣಗಳೂ ಇವೆ. ಮಹಾದೇವನು ಕೊರಳಲ್ಲಿ ಹಾವು, ಶಿರದಲ್ಲಿ ಚಂದ್ರ, ಕೈಯಲ್ಲಿ ಡಮರು ಮತ್ತು ತ್ರಿಶೂಲವನ್ನು ಧರಿಸಿದ್ದಾನೆ, ಅವುಗಳಿಗೆ ತಮ್ಮದೇ ಆದ ಮಹತ್ವವಿದೆ. ನಾವು ಇಂದು ಶಿವನು ಹಿಡಿದಿರುವ ಡಮರುಗದ ಬಗ್ಗೆ ತಿಳಿಯೋಣ. ಮಹಾಶಿವನು ಈ ಡಮರುಗವನ್ನು ಏಕೆ ಧರಿಸಿದರು, ಅದರ ಉಪಯೋಗಗಳೇನು ತಿಳಿಯೋಣ.

ಶಿವನ ಕೈಯಲ್ಲಿ ಡಮರುಗದ ಮಹತ್ವ : ಧಾರ್ಮಿಕ ಗ್ರಂಥಗಳ ಪ್ರಕಾರ, ಸಂಗೀತದ ದೇವತೆಯಾದ ಸರಸ್ವತಿಯು ಅವತರಿಸಿದಾಗ, ಆಕೆಯ ಧ್ವನಿಯಿಂದ ಹೊರಹೊಮ್ಮುವ ಧ್ವನಿಯಲ್ಲಿ ಸಂಗೀತವಿಲ್ಲದೆಯೇ ಇತ್ತು. ಆ ಸಮಯದಲ್ಲಿ, ಶಿವನು ತನ್ನ ಡಮರುಗವನ್ನು 14 ಬಾರಿ ನುಡಿಸಿದನು ಮತ್ತು ಅವನ ತಾಂಡವ ನೃತ್ಯದಿಂದ ಸಂಗೀತವನ್ನು ರಚಿಸಿದನು. ಅಂದಿನಿಂದ ಮಹಾಶಿವನನ್ನು ಸಂಗೀತದ ಮೂಲ ಎಂದು ಕರೆಯುತ್ತಾರೆ.

ಮನೆಯಲ್ಲಿ ಡಮರುಗವನ್ನು ಎಲ್ಲಿ ಇಡಬೇಕು? ಅದರ ಪ್ರಯೋಜನಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಾನು ದೇವತೆಗಳಿಗೆ ಸಂಬಂಧಿಸಿದ ವಸ್ತುಗಳನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು, ಅದರಿಂದ ಶುಭ ಫಲಗಳು ಸಿಗುತ್ತವೆ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಸರಿಯಾದ ನಿಯಮಗಳೊಂದಿಗೆ ಇರಿಸಬೇಕಷ್ಟೇ. ಹಾಗೆಯೇ ಮನೆಯಲ್ಲಿ ಶಿವನ ಡಮರುಗವನ್ನು ಕೂಡಾ ಪ್ರತಿಷ್ಠಾಪನೆ ಮಾಡಬಹುದು. ಡಮರುಗದೊಂದಿಗೆ ಶಿವನನ್ನು ಸ್ತುತಿಸಿದರೆ, ಮನೆಯಲ್ಲಿ ಯಾವುದೇ ಅಶುಭ ಸಂಭವಿಸುವುದಿಲ್ಲ ಎಂಬ ನಂಬಿಕೆ ಇದೆ.

ಡಮರುಗ ಶಬ್ದವು ನಕಾರಾತ್ಮಕ ಶಕ್ತಿಯನ್ನು ಮನೆಗೆ ಪ್ರವೇಶಿಸಲು ಅನುಮತಿಸುವುದಿಲ್ಲ. ಈ ಕಾರಣದಿಂದಾಗಿ, ಮನೆಯಲ್ಲಿ ಧನಾತ್ಮಕ ಶಕ್ತಿಯು ಹರಡುತ್ತದೆ, ಪ್ರಸ್ತುತ ತುಂಬಿರುವ ನಕಾರಾತ್ಮಕತೆಯು ದೂರವಾಗುತ್ತದೆ. ಕೆಲವೊಂದು ಅನೇಕ ಅದ್ಭುತ ಮಂತ್ರಗಳು ಡಮರುಗದ ನಾದದಿಂದಲೇ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ. ಆದ್ದರಿಂದಲೇ ಇದರ ಶಬ್ದವು ವ್ಯಕ್ತಿಯನ್ನು ಬಲಪಡಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳ ಕೋಣೆಯಲ್ಲಿ ಡಮರುಗವನ್ನು ಇಡುವುದರಿಂದ ಅವರ ಮೇಲೆ ಋಣಾತ್ಮಕ ಪರಿಣಾಮಗಳುಂಟಾಗುವುದಿಲ್ಲ, ಅಲ್ಲದೇ ಅದು ಅವರ ಪ್ರಗತಿಗೆ ನೆರವನ್ನು ನೀಡುತ್ತದೆ. ಡಮರುಗದ ಶಬ್ದವು ಬಹಳ ಶಕ್ತಿಯುತವಾಗಿರುತ್ತದೆ. ಇದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅದು ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ.

ಇಡೀ ಬ್ರಹ್ಮಾಂಡದಲ್ಲಿ ಶಿವನ ತ್ರಿಶೂಲಕ್ಕಿಂತ ಶಕ್ತಿಶಾಲಿ ಯಾವುದೂ ಇಲ್ಲ ಎಂದು ನಂಬಲಾಗಿದೆ. ಶಿವನ ತ್ರಿಶೂಲವನ್ನು ಮನೆಯಲ್ಲಿ ಸ್ಥಾಪಿಸಿದರೆ ದುಷ್ಟ ಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಶಿವ ಆರಾಧನೆಯಲ್ಲಿ ನಂಬಿಕೆಯುಳ್ಳವರು ಡಮರುಗವನ್ನು ಸಹಾ ಮನೆಯಲ್ಲಿ ಸ್ಥಾಪನೆ ಮಾಡುವ ಮೂಲಕ ಶಿವನ ಆರಾಧನೆಯನ್ನು ಮಾಡಬಹುದಾಗಿದೆ. ಇದರಿಂದ ಶುಭ ಫಲಗಳು ದೊರೆಯುತ್ತವೆ ಎಂದು ಹೇಳಲಾಗಿದೆ.

Leave a Comment