ವೀಕೆಂಡ್ ಕರ್ಫ್ಯೂಗೆ ಡೋಂಟ್ ಕೇರ್, ಜನಪ್ರಿಯ ಸೀರಿಯಲ್ ಶೂಟಿಂಗ್: ಪೋಲೀಸರಿಂದ ಫುಲ್ ಕ್ಲಾಸ್

Written by Soma Shekar

Published on:

---Join Our Channel---

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅದರ ನಿಯಂತ್ರಣದ ಉದ್ದೇಶದಿಂದ ರಾಜ್ಯ ಸರ್ಕಾರವು ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಗಳನ್ನು ಜಾರಿಗೊಳಿಸಿದೆ. ಆದರೂ ಕೆಲವೊಂದು ಸಂದರ್ಭಗಳಲ್ಲಿ ಈ ನಿಯಮಗಳನ್ನು ಪ್ರಭಾವ ಶಾಲಿಗಳು ಮೀರಿ ನಡೆಯುತ್ತಿರುವ ಘಟನೆಗಳು ಸಹಾ ನಡೆಯುತ್ತಿವೆ. ಕೋವಿಡ್ ನಿಯಂತ್ರಣಕ್ಕಾಗಿ ಅಳವಡಿಸಲಾಗಿರುವ ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಇದು ಬೇರೆಯವರಿಂದ ಕಲಿಯುವ ಪಾಠವಂತೂ ಖಂಡಿತಾ ಅಲ್ಲ.

ಹೀಗೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದವರಲ್ಲಿ ಇದೀಗ ಮನರಂಜನಾ ಕ್ಷೇತ್ರದಲ್ಲಿನ ಕೆಲವರು ಸಹಾ ಸೇರ್ಪಡೆಯಾಗಿದ್ದಾರೆ. ಹೌದು ಮಾದ್ಯಮಗಳ ವರದಿಯ ಪ್ರಕಾರ ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಇದ್ದರೂ ಸಹಾ ಅದಕ್ಕೆ ಲೆಕ್ಕಿಸದೇ ಜನಪ್ರಿಯ ಧಾರಾವಾಹಿ ಮುದ್ದು ಲಕ್ಷ್ಮಿವಮ ತಂಡವು ಜನರ ಗುಂಪಿನೊಂದಿಗೆ ಧಾರಾವಾಹಿಯ ಚಿತ್ರೀಕರಣವನ್ನು ನಡೆಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪೋಲಿಸರು ಧಾರಾವಾಹಿ ತಂಡಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಧಾರಾವಾಹಿಗಳು ಜನರ ಮನರಂಜನೆಯ ಪ್ರಮುಖ ಮೂಲವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಕಿರುತೆರೆಯಲ್ಲಿ ಧಾರಾವಾಹಿಗಳು ಪಡೆದಿರುವ ಜನಪ್ರಿಯತೆ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಇಂತಹ ಮನರಂಜನೆಯ ಮಾದ್ಯಮಗಳು ಸಹಾ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಜನರಿಗೆ ಮಾದರಿಯಾಗಬೇಕಿದೆ. ಅಲ್ಲದೇ ಜನರಿಗೆ ಕೋವಿಡ್ ನ ಪರಿಸ್ಥಿತಿಯಲ್ಲಿ ಜಾಗೃತಿಯನ್ನು ಮೂಡಿಸುವುದು ಅಗತ್ಯವಿದೆ ಎನ್ನುವುದು ಎಲ್ಲರೂ ಒಪ್ಪಲೇಬೇಕಾದ ವಿಚಾರ ಕೂಡಾ ಹೌದು.

ಆದರೆ ಮುದ್ದು ಲಕ್ಷ್ಮೀ ಸೀರಿಯಲ್ ತಂಡವು ಫಲ್ಗುಣಿ ಗ್ರಾಮದ ಕಾರ್ನರ್ ಕೆಫೆ ಎನ್ನುವಲ್ಲಿ ಧಾರಾವಾಹಿಯ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿತ್ತು ಎನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೋಲಿಸರು ಧಾರಾವಾಹಿ ತಂಡದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು, ಧಾರಾವಾಹಿ ತಂಡದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಚಿತ್ರೀಕರಣಕ್ಕೆ ಬ್ರೇಕ್ ಹಾಕಿಸಿದ್ದು ಮಾತ್ರವೇ ಅಲ್ಲದೇ ದಂಡವನ್ನು ಸಹಾ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment