ನಾನು ಕರ್ನಾಟಕದವಳು, ನಾನು ಸೌತ್ ಬೇಬಿ: ಬದಲಾದ ರಶ್ಮಿಕಾ ಮಾತಿನ ವರಸೆ!

Written by Soma Shekar

Published on:

---Join Our Channel---

Rashmika Mandanna: ಇತ್ತೀಚಿಗೆ ನಟಿ ರಶ್ಮಿಕಾ(Rashmika Mandanna) ಮಾತಿನಲ್ಲೊಂದು ಬದಲಾವಣೆ ಕಂಡು ಬರುತ್ತಿದೆ. ನಟಿ ದಕ್ಷಿಣದ ಸಿನಿಮಾಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಜನರಿಗೆ ಹೆಚ್ಚು ಅಚ್ಚರಿಯನ್ನು ಮೂಡಿಸುತ್ತಿರುವ ವಿಚಾರ ಏನೆಂದರೆ ರಶ್ಮಿಕಾ(Rashmika) ತನ್ನ ವೃತ್ತಿ ಜೀವನದ ಆರಂಭದ ಬಗ್ಗೆ ಮತ್ತು ತಾನು ನಡೆದು ಬಂದ ಹಾದಿಯನ್ನು ಸ್ಮರಿಸುತ್ತಾ ಮಾತನಾಡುತ್ತಿರುವುದೇ ಆಗಿದೆ. ಅದರಲ್ಲೂ ರಶ್ಮಿಕಾ ಸಂದರ್ಶನವೊಂದರಲ್ಲಿ ರಿಷಬ್ (Rishab Shetty) ಮತ್ತು ರಕ್ಷಿತ್(Rakshit Shetty) ಅವರನ್ನು ನೆನಪಿಸಿಕೊಂಡು, ಅವರೇ ತನ್ನ ಸಿನಿಮಾ ಜರ್ನಿಗೆ ಕಾರಣ ಎಂದು ಹೇಳಿದ್ದನ್ನು ಕೇಳಿ ಕನ್ನಡಿಗರು ಸಹಾ ಶಾ ಕ್ ಆಗಿದ್ದಾರೆ.

ಖಾಸಗಿ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ(Rashmika), ದಕ್ಷಿಣದ ಸಿನಿಮಾಗಳು ಸ್ಥಳೀಯ ಆಚಾರ, ವಿಚಾರ ಮತ್ತು ಸಂಸ್ಕೃತಿ, ಸಂಪ್ರದಾಯವನ್ನು ಹೈಲೈಟ್ ಮಾಡುವುಧಿಂದ ಅವು ಬಹಳ ಬೇಗ ಜನರಿಗೆ ಕನೆಕ್ಟ್ ಆಗುತ್ತವೆ. ಪುಷ್ಪ(Pushpa), ಕೆಜಿಎಫ್(KGF), ಕಾಂತಾರಗಳಂತಹ(Kanthara) ಸಿನಿಮಾ ಜನರಿಗೆ ಕನೆಕ್ಟ್ ಆಗುತ್ತದೆ. ಕೆಜಿಎಫ್ ನಲ್ಲಿ ತಾಯಿ ಸೆಂಟಿಮೆಂಟ್ ಇದೆ. ಕಾಂತಾರದಲ್ಲಿ ಜನರಿಗೆ ಗೊತ್ತಿಲ್ಲದ ಸಂಸ್ಕೃತಿಯ ಪರಿಚಯವನ್ನು ನೀಡಲಾಗಿದೆ. ಪುಷ್ಪ ಸಿನಿಮಾದಲ್ಲಿ ಸ್ಥಳೀಯ ಭಾಷೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.

ಇದನ್ನೂ ಓದಿ: ಉರ್ಫಿ ಧರಿಸಿದ ಡ್ರೆಸ್ ಬೆಲೆ ಕೇಳಿ ಬೆಚ್ಚಿ ಬಿದ್ದ ನೆಟ್ಟಿಗರು: ಇದು ಫ್ರೆಂಚ್ ಫ್ಯಾಷನ್ ಅಂತೆ, ವೈರಲ್ ಆಯ್ತು ಫೋಟೋ

ಜನರ ಮುಂದೆ ನೀವು ನೀಟಾಗಿ ಸಿದ್ಧಪಡಿಸಿದ ಕಥೆಯನ್ನು ಇಟ್ಟರೆ ಜನರು ಅದನ್ನು ಸಂಭ್ರಮಿಸುತ್ತಾರೆ. ಇದೇ ಭಾಷೆ ಆಗಿರಬೇಕು ಅಂತೇನಿಲ್ಲ. ಕ್ರಿಯೇಟಿವ್ ಆಗಿರುವುದನ್ನು ಜನರು ಇಷ್ಟ ಪಡುತ್ತಾರೆ. ನಮಗೆ ಮೊದಲೇ ಗೊತ್ತಿರುವುದನ್ನು ತೋರಿಸಿದರೆ ನಾವು ಏಕೆ ನೋಡಬೇಕು ಎಂದು ಜನರು ಪ್ರಶ್ನೆ ಮಾಡಲು ಪ್ರಾರಂಭಿಸಿದ್ದಾರೆ ಎಂದಿದ್ದಾರೆ ರಶ್ಮಿಕಾ. ನನ್ನ ಕನ್ನಡ ಸಿನಿಮಾಗಳು(Kannada cinema) ವರ್ಕ್ ಆಗಬೇಕು, ನನ್ನ ತೆಲುಗು ಸಿನಿಮಾಗಳು ವರ್ಕ್ ಆಗಬೇಕು. ನಾನು ಸೌತ್ ಹುಡುಗಿ, ನಾನು ಕೊಡಗಿನವಳು, ನಾನು ಕರ್ನಾಟಕದವಳು.

ನಾನು ಹೈದರಾಬಾದ್ ನಲ್ಲಿ(Hyderabad) ವಾಸಿಸುತ್ತಿರುವೆ. ಕೆಲಸ ಬಂದರೆ ನಾನು ಚೆನ್ನೈಗೆ ಹೋಗುವೆ, ಕೇರಳಕ್ಕೆ ಹೋಗಬೇಕು. ನಾನು ಸೌತ್ ಇಂಡಸ್ಟ್ರಿಯ ಬೇಬಿ ಎನಿಸುತ್ತಿದೆ. ನನ್ನ ತಾಯಿ ಕೂಡಾ ಸದಾ ತಮಾಷೆ ಮಾಡುತ್ತಾ, ನೀನು ನನ್ನ ಮಗಳಲ್ಲ, ಈ ದೇಶದ ಮಗಳು ಎನ್ನುತ್ತಿರುತ್ತಾರೆ. ನನಗೆ ಪ್ರತಿಯೊಂದು ಭಾಷೆಯಲ್ಲಿ ನಟಿಸಬೇಕೆನ್ನುವ ಆಸೆ ಇದೆ. ಜನರು ನನ್ನನ್ನು ನಾಯಕಿಯಾಗಿ ನೋಡಬಾರದು ಬದಲಿಗೆ ಅವರ ಮನೆ ಮಗಳಂತೆ ನೋಡಬೇಕು ಎನ್ನುವ ಮಾತುಗಳನ್ನು ಸಹಾ ರಶ್ಮಿಕಾ (Rashmika) ಹೇಳಿದ್ದಾರೆ.

Leave a Comment