ಮನೆಯಲ್ಲಿಡಿ ಮಾತೆ ಮಹಾಲಕ್ಷ್ಮಿಯ ಶಂಖ: ವಿಧಿ ವಿಧಾನ ಅನುಸರಿಸಿ ಪೂಜಿಸಿ ಹಣದ ಸಮಸ್ಯೆ ದೂರ ಮಾಡಿ!!

Written by Soma Shekar

Published on:

---Join Our Channel---

ಹಿಂದೂ ಧರ್ಮದಲ್ಲಿ ಶಂಖಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ ಶಂಖವನ್ನು ಪೂಜಾ ಸ್ಥಾನದಲ್ಲಿಟ್ಟು ಅದನ್ನು ಪೂಜಿಸುವುದರಿಂದ ಮತ್ತು ಶಂಖನಾದವನ್ನು ಮಾಡುವುದರಿಂದ ಶ ತೃ ನಾಶವಾಗುವುದು ಮಾತ್ರವೇ ಅಲ್ಲದೇ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಸಂಚಾರವಾಗುತ್ತದೆ ಎಂದು ಹೇಳಲಾಗಿದೆ. ಮಾತೆ ಮಹಾಲಕ್ಷ್ಮಿಗೆ ಇಷ್ಟವಾದ ಶಂಖವನ್ನು ಮನೆಯ ಪೂಜಾ ಮಂದಿರದಲ್ಲಿ ಇಟ್ಟು ಆರಾಧನೆ ಮಾಡಿದರೆ ಮಾತೆ ಲಕ್ಷ್ಮಿಯ ಕೃಪೆ ದೊರೆಯುತ್ತದೆ ಎಂದು ಹೇಳಲಾಗಿದೆ. ಪುರಾಣ ಕಥೆಗಳ ಪ್ರಕಾರ ದೇವಿ ಲಕ್ಷ್ಮಿಯು ಸಮುದ್ರರಾಜನ ಪುತ್ರಿ.

ಶಂಖ ಆಕೆಯ ಸಹೋದರನಾಗಿದ್ದಾನೆ. ಆದ್ದರಿಂದಲೇ ಎಲ್ಲಿ ಶಂಖ ಇರುತ್ತದೆಯೋ ಅಲ್ಲಿ ಮಾತೆ ಲಕ್ಷ್ಮಿಯು ನೆಲೆಸಿರುತ್ತಾಳೆ ಎನ್ನುತ್ತಾರೆ. ಹಿಂದೂ ಧರ್ಮದಲ್ಲಿ ಶುಭಕಾರ್ಯಗಳಲ್ಲಿ ಶಂಖವನ್ನು ಬಳಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ ಸಾಗರ ಮಂಥನ ನಡೆಯುವಾಗ ಹದಿನಾಲ್ಕು ರತ್ನಗಳು ಹೊರಗೆ ಬಂದವು. ಅವುಗಳಲ್ಲಿ ಶಂಖವೂ ಒಂದಾಗಿತ್ತು. ಶಂಖದಲ್ಲಿ ದಕ್ಷಿಣಾವರ್ತಿ ಶಂಖವನ್ನು ಅತ್ಯುತ್ತಮ ಎಂದು ಹೇಳಲಾಗಿದೆ. ದೇವಿ ಮಹಾಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ದಕ್ಷಿಣಾವರ್ತಿ ಶಂಖವನ್ನು ಇಡಲು ವಾಸ್ತುವಿನಲ್ಲಿಯೂ ಸಲಹೆ ನೀಡಲಾಗಿದೆ.

ಈ ಶಂಖವನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು ಮತ್ತು ಧಾನ್ಯಗಳು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ದಕ್ಷಿಣಾವರ್ತಿ ಶಂಖವನ್ನು ಆರಾಧಿಸುವುದು ಹೇಗೆ ? ಪೂಜೆ ಮಾಡುವುದು ಹೇಗೆ ? ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಮನೆಗಳಲ್ಲಿ ವಾಮವರ್ತಿ ಶಂಖಗಳನ್ನು ಇಟ್ಟಿರುವುದನ್ನು ನೋಡಬಹುದು. ಆದರೆ ವಾಸ್ತುವಿನಲ್ಲಿ ದಕ್ಷಿಣಾಭಿಮುಖವಾಗಿರುವ ಶಂಖಗಳು ಶ್ರೇಷ್ಠವಾದದ್ದು ಎಂದು ಹೇಳಲಾಗಿದೆ.

ಎಡ ಶಂಖವು ನೋಡಲು ಭಿನ್ನವಾಗಿರುತ್ತದೆ. ಅದರ ಹೊಟ್ಟೆಯ ಭಾಗವು ಎಡಭಾಗಕ್ಕೆ ತೆರೆದುಕೊಂಡಿರುತ್ತದೆ. ಆದರೆ ದಕ್ಷಿಣಾವರ್ತಿ ಶಂಖವು ಬಲಭಾಗಕ್ಕೆ ತೆರೆದುಕೊಂಡಿರುತ್ತದೆ. ಧರ್ಮ ಗ್ರಂಥಗಳಲ್ಲಿ ದಕ್ಷಿಣಾವರ್ತಿ ಶಂಖ ಅತ್ಯಂತ ಮಂಗಳಕರವಾದುದು ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಶಂಖಗಳನ್ನು ಕಿವಿಯಹತ್ತಿರ ಇಟ್ಟುಕೊಂಡಾಗ ಅದರ ಒಳಗಿನಿಂದ ಶಬ್ದವೊಂದು ಕೇಳುತ್ತದೆ ಎನ್ನಲಾಗಿದೆ

ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ಇಡಬೇಕಾದರೆ ಕೆಲವೊಂದು ನಿಯಮಗಳಿವೆ. ಆ ನಿಯಮಗಳಿಗೆ ಗಮನ ನೀಡದೇ ಹೋದರೆ ದೇವಿ ಲಕ್ಷ್ಮಿಯು ಕೋಪಗೊಳ್ಳುವಳು ಎಂದು ಹೇಳಲಾಗುತ್ತದೆ. ದಕ್ಷಿಣಾವರ್ತಿ ಶಂಖವನ್ನು ಸದಾ ಕೆಂಪು ಬಟ್ಟೆಯ ಮೇಲೆ ಇರಿಸಿ, ಅದರಲ್ಲಿ ಗಂಗಾಜಲವನ್ನು ತುಂಬಿದ ನಂತರ ‘ಓಂ ಶ್ರೀ ಲಕ್ಷ್ಮಿ ಸಹೋದರಾಯ ನಮಃ’ ಎನ್ನುವ ಮಂತ್ರವನ್ನು ಜಪಿಸಿ ಅನಂತರ ಅದನ್ನು ಕೆಂಪು ವಸ್ತ್ರದಿಂದ ಮುಚ್ಚಿಡಬೇಕು.

ಶುಕ್ರವಾರದ ದಿನಗಳಂದು ಈ ಶಂಖವನ್ನು ವಿಶೇಷವಾಗಿ ಪೂಜಿಸಿ ಅದರಿಂದ ಧ್ವನಿಯನ್ನು ಮಾಡಬೇಕು. ನಂಬಿಕೆಗಳ ಪ್ರಕಾರ ದಕ್ಷಿಣಾವರ್ತಿ ಶಂಖವನ್ನು ಮನೆಯಲ್ಲಿ ಇಡುವುದರಿಂದ ಮಹಾಲಕ್ಷ್ಮಿಯು ಮನೆಗಳಲ್ಲಿ ನೆಲೆಸುತ್ತಾಳೆ. ದಕ್ಷಿಣಾವರ್ತಿ ಶಂಖವನ್ನು ಪೂಜಿಸುವ ಮನೆಗಳಲ್ಲಿ ಮಾತೆ ಮಹಾಲಕ್ಷ್ಮಿಯ ಕೃಪೆ ಸದಾ ಇರುತ್ತದೆ. ವಿಧಿವತ್ತಾಗಿ ನಿಯಮಗಳ ಪಾಲನೆ ಮಾಡಿ ಈ ಶಂಖವನ್ನು ಆರಾಧನೆ ಮಾಡಿದರೆ ಹಣದ ಸಮಸ್ಯೆಗಳು ದೂರವಾಗುತ್ತವೆ. ಈ ಶಂಖದಿಂದ ಧ್ವನಿಯನ್ನು ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.

Leave a Comment