ಮತ್ತೆ ಕೊರೊನಾ, ದೊಡ್ಡ ನಗರಗಳಿಗೆ ಸಂಕಷ್ಟ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯವಾಣಿ!

Written by Soma Shekar

Published on:

---Join Our Channel---

ದೇಶದಲ್ಲಿ ಪ್ರಚಲಿತ ವಿದ್ಯಮಾನಗಳು, ರಾಷ್ಟ ರಾಜಕೀಯ, ಕೊರೊನಾ, ಹವಾಮಾನ ಹೀಗೆ ಹತ್ತು ಹಲವು ವಿಚಾರಗಳಿಗೆ ಆಗಾಗ ಭವಿಷ್ಯವಾಣಿಯನ್ನು ನುಡಿಯುವ ಕೋಡಿ ಮಠದ ಶ್ರೀಗಳು ಈಗ ಮತ್ತೊಮ್ಮೆ ಹೊಸ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ‌. ಅವರ ಈ ಭವಿಷ್ಯವಾಣಿಯು ಕೊರೊನಾ ಹಾಗೂ ಮುಂದಿನ ದಿನಗಳಲ್ಲಿ ಏನೆಲ್ಲಾ ಅವಘಡಗಳು ಸಂಭವಿಸಲಿದೆ ಎನ್ನುವ ಕುರಿತಾಗಿಯೂ ಹಲವು ವಿಚಾರಗಳನ್ನು ಒಳಗೊಂಡಿದೆ. ಬಳ್ಳಾರಿಯಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಕೋವಿಡ್​ ಮತ್ತೆ ಬರುತ್ತದೆ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ ಎಂದು ನುಡಿದಿದ್ದಾರೆ.

ನಾನು ನುಡಿದಂತೆ ಈಗ ಕೊರೊನಾ ಪ್ರಕರಣಗಳು ನಿತ್ಯವು ಏರಿಕೆಯನ್ನು ಕಂಡಿವೆ. ಆದರೆ ಕೊರೊನಾ ಬಗ್ಗೆ ಹೆಚ್ಚು ಭಯ ಬೇಡ. ಏಕೆಂದರೆ ಅದು ಇನ್ನು  ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಇಡೀ ಜಗತ್ತಿನಿಂದ ಕಣ್ಮರೆಯಾಗಲಿದೆ. ಆದರೆ, ಕೊರೊನಾ ಈ ಜಗತ್ತನ್ನಿ ಬಿಟ್ಟು ಶಾಶ್ವತನಾಗಿ ಹೋಗುವಾಗ ಜಗತ್ತಿನಾದ್ಯಂತ ಕುಡಿಯುವುದಕ್ಕೆ ನೀರಿಲ್ಲದಂತೆ ಆಗುತ್ತದೆ ಮತ್ತು ಅದು ಬಹಳ ನೋವನ್ನು ನೀಡಿ ಹೋಗುತ್ತದೆ ಎನ್ನುವ ಒಂದು ಭ ಯಾ ನಕ ಭವಿಷ್ಯ ವಾಣಿಯನ್ನು ನುಡಿದಿದ್ದಾರೆ.


ಇದೇ ವೇಳೆ ಅವರು ಮಾತನಾಡುತ್ತಾ, ಕೊರೊನಾದ  ವಿಶೇಷ ಏನೆಂದರೆ ಮನುಷ್ಯನಿಗೆ ಕಷ್ಟ ಬಂದಾಗ ಮಾತ್ರವೇ ಅವನು ದೇವರು, ಧರ್ಮ ಎಂದೆಲ್ಲಾ ನೆನಪಿಸಿಕೊಂಡು ಪ್ರಾರ್ಥನೆ‌ ಮಾಡುವನು. ಆದರೆ, ಕೋವಿಡ್ ನೇರವಾಗಿ ಬಂದು ದೇವರನ್ನೇ ಹಿಡಿದಿತ್ತು. ಆದ್ದರಿಂದಲೇ ದೇವಸ್ಥಾನದ ಬಾಗಿಲುಗಳು ಭಕ್ತರಿಗಾಗಿ ಮುಚ್ಚಿದವು. ಆ ಮೇಲೆ ಅದು ಜನರ ಮೇಲೆ ಬಂತು. ನಂತರ ನೀರಿನ ಮೇಲೆ, ಬಳಿಕ ಭೂಮಿಯ ಮೇಲೆ ಬಂತು. ಇನ್ನು ಒಂದೂವರೆ ವರ್ಷದಲ್ಲಿ ಅದು  ಹೋಗುತ್ತದೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತದೆ.

ಆದ್ದರಿಂದಲೇ ನಾವು ಈಗಿನಿಂದಲೇ ಎಚ್ಚರವಾಗಿರಬೇಕು. ಈಗ ಎಚ್ಚರ ವಹಿಸಿದರೆ ಆ ಕಷ್ಟಗಳಿಂದ ಪಾರಾಗಬಹುದು. ಈಗ ಕೋವಿಡ್ ಗಾಳಿಯ ಮೇಲೆ ಬರಬಹುದು, ಅದರಿಂದ ಜನರಿಗೆ  ಉಸಿರಾಟದ ತೊಂದರೆಯಾಗಿ ಜನ ಬಿದ್ದು  ಸಾಯಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಮಳೆಯ ಬಗ್ಗೆ ಭವಿಷ್ಯ ವಾಣಿ ನುಡಿಯುತ್ತಾ, ಈ ಹಿಂದೆ ಕಂಡಮಂಡಲ ಆಗುತ್ತದೆ ಎಂದು ನುಡಿದಿದ್ದೆ. ಮಲೆನಾಡು ಬಯಲಾಗತ್ತೆ, ಬಯಲು ಮಲೆನಾಡಾಗತ್ತೆ ಎಂದು ನುಡಿದಿದ್ದೆ. ಈಗ ಎಲ್ಲ ಕಡೆ ನೀರು ಕಂಡಮಂಡಲ ಆಗ್ತಾ ಇದೆ. ಮುಂಗಾರು ಮಳೆ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ.

ಅಲ್ಲದೇ ಈ ಬಾರಿ ಅಕಾಲಿಕ ಮಳೆಯ ಲಕ್ಷಣವೂ ಇದ್ದು ಇದರಿಂದ ದೊಡ್ಡ ದೊಡ್ಡ ನಗರಗಳಿಗೆ ಸಮಸ್ಯೆ ಎದುರಾಗಲಿದೆ ಎಂದಿದ್ದಾರೆ. ರಾಜಕೀಯದ ವಿಚಾರವಾಗಿ ಅವರು, ರಾಜಕೀಯ ಅಸ್ಥಿರತೆ ಎಂದು ಈ ಮೊದಲೇ ನಾನು ಹೇಳಿದ್ದೆ, ಗುಂಪುಗಳು ಆಗುತ್ತವೆ ಎಂದಿದ್ದೆ.ಅದನ್ನು ಈಗ ಕಾಣುತ್ತಿದೆ. ದೇಶದಲ್ಲಿ ಅವಘಡ ಸಂಭವಿಸುತ್ತದೆ ಎಂದು ನುಡಿದಿದ್ದೆ ಅದರಂತೆ ಈಗ ನಡೆಯುತ್ತಿದ್ದು, ಪೈಗಂಬರ್ ಅವರನ್ನು   ಅವಹೇಳನ‌ ಮಾಡಿದ್ದು, ಚರ್ಚೆಗಳು ಜಗತ್ತಿನಾದ್ಯಂತ ಆರಂಭವಾಗಿದೆ ಎಂದು, ಇದರಿಂದ ಮುಂದೆ ಅಪಾಯ ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.

Leave a Comment