ಮಗಳೆಂದು ಭಾವಿಸಿದವಳ ಜೊತೆ ರೊಮ್ಯಾನ್ಸ್ ಅಸಾಧ್ಯ: ಹೊಸ ಸಿನಿಮಾ ಆಫರ್ ತಿರಸ್ಕರಿಸಿ ಜನ ಮೆಚ್ಚುಗೆ ಪಡೆದ ನಟ

Written by Soma Shekar

Published on:

---Join Our Channel---

ದಕ್ಷಿಣದ ಸಿನಿಮಾರಂಗದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನವನ್ನು ಪಡೆದುಕೊಂಡು, ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ. ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದಿರುವ ಈ ನಟ ಕೇವಲ ನಾಯಕನ ಪಾತ್ರಗಳು ಮಾತ್ರವೇ ಅಲ್ಲದೇ, ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸದಾ ಸಿದ್ಧರಾಗಿರುತ್ತಾರೆ. ಆದ್ದರಿಂದಲೇ ಅನೇಕ ಜನ ನಿರ್ಮಾಪಕರು ಹಾಗೂ ನಿರ್ದೇಶಕರು ವಿಜಯ್ ಸೇತುಪತಿ ಅವರ ಕಾಲ್ ಶೀಟ್ ಪಡೆದುಕೊಳ್ಳಲು ಕಾಯುವುದುಂಟು. ತನ್ನ ಪಾತ್ರಕ್ಕೆ ಮಹತ್ವವಿದೆ ಎಂದು ತಿಳಿದರೆ ಖಂಡಿತ ಅಂತ ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ ಸಂಪೂರ್ಣ ನ್ಯಾಯವನ್ನು ಒದಗಿಸುವ ಪ್ರಯತ್ನವನ್ನು ಮಾಡುವ ನಟ ವಿಜಯ್ ಸೇತುಪತಿ ಯವರು ಇತ್ತೀಚೆಗೆ ಸಿನಿಮಾವೊಂದರ ಅವಕಾಶವನ್ನು ತಿರಸ್ಕರಿಸಿದ್ದಾರೆ ಎನ್ನುವ ವಿಷಯ ಸುದ್ದಿಯಾಗಿತ್ತು. ಅವರು ಹೀಗೆ ಸಿನಿಮಾ ಆಫರ್ ತಿರಸ್ಕರಿಸಲು ಕಾರಣವೇನು ??? ಎನ್ನುವುದನ್ನು ತಿಳಿಯುವ ಕುತೂಹಲ ಅವರ ಬಹಳಷ್ಟು ಜನ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳಿಗೆ ಮೂಡಿತ್ತು. ಈಗ ಈ ವಿಚಾರವಾಗಿ ಸ್ವತಃ ನಟ ವಿಜಯ್ ಸೇತುಪತಿಯವರೇ ಪ್ರತಿಕ್ರಿಯೆ ನೀಡಿ, ತಾನು ಸಿನಿಮಾದ ಅವಕಾಶವನ್ನು ತಿರಸ್ಕರಿಸಲು ಕಾರಣವೇನೆಂಬುದನ್ನು ವಿವರಿಸಿದ್ದಾರೆ.

ವಿಜಯ್ ಸೇತುಪತಿ ಅವರ ಅಭಿನಯದ ಲಾಭಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ನಟ ಇತ್ತೀಚೆಗೆ ಪ್ರಚಾರ ವೇಳೆಯಲ್ಲಿ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಾ, ತೆಲುಗು ಚಿತ್ರರಂಗದಲ್ಲಿ ಕೆಲವೇ ದಿನಗಳ ಹಿಂದಷ್ಟೇ ಸಖತ್ ಸದ್ದು ಮಾಡಿದ್ದ ಉಪ್ಪೆನ ಸಿನಿಮಾದ ನಾಯಕಿ ಕೃತಿ ಶೆಟ್ಟಿ ಅವರ ವಿಚಾರವಾಗಿ ಒಂದು ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ಉಪ್ಪೆನ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ನಟಿ ಕೃತಿ ಶೆಟ್ಟಿ ತಂದೆ ಮಗಳ ಪಾತ್ರದಲ್ಲಿ ನಟಿಸಿ, ಜನರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಇದೇ ಕೃತಿ ಶೆಟ್ಟಿ ಜೊತೆಗೆ ನಾಯಕನಾಗಿ ನಟಿಸಲು ಚಿತ್ರ ತಂಡವೊಂದು ವಿಜಯ್ ಸೇತುಪತಿ ಅವರಿಗೆ ಆಫರ್ ನೀಡಿತ್ತು. ಆದರೆ ನಟ ವಿಜಯ್ ಸೇತುಪತಿ ಅದನ್ನು ತಿರಸ್ಕಾರ ಮಾಡಿದ್ದಾರೆ.

ಇದಕ್ಕೆ ಕಾರಣವನ್ನು ವಿವರಿಸಿದ ಅವರು ಕೃತಿಯನ್ನು ನಾನು ನನ್ನ ಮಗಳು ಎಂದು ಭಾವಿಸಿದ್ದೇನೆ. ಮಗಳೆಂದು ತಿಳಿದುಕೊಂಡವಳ ಜೊತೆ ರೋಮ್ಯಾನ್ಸ್ ಮಾಡುವುದಕ್ಕೆ ಹೇಗೆ ಸಾಧ್ಯ?? ಹೊಸ ಸಿನಿಮಾ ತಂಡದವರು ಉಪ್ಪೆನ ಸಿನಿಮಾ ನೋಡಿರಲಿಲ್ಲ. ಆದ ಕಾರಣ ಅವರು ನನಗೆ ಆಫರ್ ನೀಡಿದ್ದರು. ಆದರೆ ನಾನು ಆ ಪಾತ್ರವನ್ನು ಮಾಡುವುದಿಲ್ಲ ಎಂದು ಹೇಳಿದೆ, ಈಗ ಮಾತ್ರವಲ್ಲ ಇಡೀ ಜೀವನದಲ್ಲಿ ಕೃತಿಗೆ ನಾಯಕನಾಗಿ ನಟಿಸುವುದು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್ ವೇಳೆಯಲ್ಲೇ ತಾನು ಕೃತಿಗೆ, ನನ್ನನ್ನು ತನ್ನ ತಂದೆಯಂತೆ ತಿಳಿದುಕೊಳ್ಳುವಂತೆ ಹೇಳಿದ್ದ ವಿಚಾರವನ್ನು ಸ್ಮರಿಸಿದ್ದಾರೆ.

ನನ್ನ ಮಗನಿಗೆ ಆಗ ಹದಿನೈದು ವರ್ಷ, ಆ ವೇಳೆ ಕೃತಿಗೂ ಸಹಾ ವಯಸ್ಸು 16 ಅಥವಾ 17 ಇರಬಹುದು. ಆಕೆ ನನಗೆ ಮಗಳಿದ್ದಂತೆ ಎಂದು ಹೇಳುವ ಮೂಲಕ ವಿಜಯ್ ಸೇತುಪತಿ ಯವರು ತಾನು ಹೊಸ ಸಿನಿಮಾವನ್ನು ತಿರಸ್ಕರಿಸಿದ ಕಾರಣವೇನೆಂಬುದನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ಹೊಸ ಸಿನಿಮಾ ಆಫರ್ ಒಪ್ಪದೇ ಇರಲು ಅವರು ನೀಡಿರುವ ಕಾರಣ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಎಂದರೆ ಕಮರ್ಷಿಯಲ್ ಎಂದು ನೋಡುವ ಮಂದಿಯ ನಡುವೆ ವಿಜಯ್ ಸೇತುಪತಿ ಅವರ ಈ ನಿರ್ಧಾರ ಮೆಚ್ಚುಗೆಯನ್ನು ಗಳಿಸಿದೆ.

Leave a Comment