ಬೋರಾಗ್ತಿದೆ ಅಂತ ಪೇಂಟಿಂಗ್ ಮೇಲೆ ಆ ಕೆಲಸ ಮಾಡಿದ ಸೆಕ್ಯೂರಿಟಿ ಗಾರ್ಡ್: ಉದ್ಯೋಗಕ್ಕೆ ಬಂತು ಕುತ್ತು!!

Written by Soma Shekar

Published on:

---Join Our Channel---

ಸಾಮಾನ್ಯವಾಗಿ ಸುಮ್ಮನೆ ಇದ್ದಾಗಲಾಗಲೀ ಅಥವಾ ಮಾಡಿದ ಕೆಲಸವನ್ನು ಮತ್ತೆ ಮತ್ತೆ ಮಾಡುವಾಗ ನಮಗೆ ಬೇಸರ ಆಗುತ್ತದೆ. ಆಗೆಲ್ಲಾ ನಾವು ಬೇಸರವನ್ನು ಕಳೆಯುವ ಸಲುವಾಗಿ ಏನಾದರೊಂದು ಪರ್ಯಾಯ ಮಾರ್ಗವನ್ನು ಅನುಸರಿಸುತ್ತಾರೆ. ಹಲವರಿಗೆ ಮೊಬೈಲ್ ಗಳೇ ಬೋರಾದಾಗ ಮನರಂಜನೆಯ ಮೂಲವಾಗಿದೆ. ಆದರೆ ಎಲ್ಲೆಡೆಯಲ್ಲಿ ಮೊಬೈಲ್ ಗಳನ್ನು ಬಳಸುವುದು ಸಾಧ್ಯವಿಲ್ಲ. ಆಗ ಕೆಲವರಿಗೆ ಟೈಮ್ ಪಾಸ್ ಮಾಡೋದು ಹೇಗೆ ಅಂತ ತೋಚಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬರು ಮಾಡಿದ ಕೆಲಸ ದೊಡ್ಡ ಸುದ್ದಿಯಾಗಿದೆ.

ರಷ್ಯಾದ ಯೆಕಟೆರಿನ್ಬರ್ಗ್ ಪ್ರದೇಶದಲ್ಲಿ ಎಲ್ಟ್ಸಿನ್ ಆರ್ಟ್ ಗ್ಯಾಲರಿಯಲ್ಲಿ ನಡೆದಿದೆ ಒಂದು ವಿಚಿತ್ರವಾದ ಘಟನೆ. ಈ ಆರ್ಟ್ ಗ್ಯಾಲರಿಯ ಸೆಕ್ಯೂರಿಟಿ ಗಾರ್ಡ್ ಗೆ ಮಾಡಲೂ ಬೇರೆನೂ ಕೆಲಸವಿಲ್ಲದ ಕಾರಣ ಆತನಿಗೆ ಸಿಕ್ಕಾಪಟ್ಟೆ ಬೋರಾಗಿದೆ. ಅದಕ್ಕಾಗಿ ಆತ ತನ್ನ ಬೋರ್ ಮೂಡ್ ನಿಂದ ಹೊರಗೆ ಬರಲು ಆರ್ಟ್ ಗ್ಯಾಲರಿಯ ಒಂದು ವರ್ಣಚಿತ್ರದ ( painting ) ಮೇಲೆ ಕಣ್ಣುಗಳನ್ನು ಬಿಡಿಸಿದ್ದಾನೆ. ವಿಷಯ ಯಾಕಿಷ್ಟು ಸೀ ರಿ ಯ ಸ್ ಆಯಿತು ಎನ್ನುವುದಾದರೆ ಆತ ಯಾವ ವರ್ಣಚಿತ್ರದ ಮೇಲೆ ಕಣ್ಣು ಬಿಡಿಸಿದ್ದನೋ ಅದು ಸಾಮಾನ್ಯದ್ದು ಆಗಿರಲಿಲ್ಲ.

ಹೌದು, ಸೆಕ್ಯೂರಿಟಿ ಗಾರ್ಡ್ ಕಣ್ಣುಗಳನ್ನು ಬಿಡಿಸಿದ ವರ್ಣಚಿತ್ರದ ಬೆಲೆ ಬರೋಬ್ಬರಿ 7 ಕೋಟಿ ರೂ.ಗಳು ಎನ್ನಲಾಗಿದೆ. ಸಾಮಾನ್ಯವಾಗಿ ಆರ್ಡ್ ಗ್ಯಾಲರಿಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಡುವ ವರ್ಣಚಿತ್ರಗಳು ಬಹಳ ವಿಶೇಷವಾಗಿರುತ್ತವೆ ಹಾಗೂ ಅವುಗಳಿಗೆ ಅವುಗಳದ್ದೇ ಆದ ಅರ್ಥವೂ ಇರುತ್ತದೆ. ಇವುಗಳ ಬೆಲೆ ಸಾವಿರಗಳಿಂದ ಹಿಡಿದು ಬಹುಕೋಟಿಗಳವರೆಗೆ ಇರುತ್ತದೆ. ಇಂತಹ ವರ್ಣಚಿತ್ರಗಳನ್ನು ಮನೆಗಳಲ್ಲಿ ಅಲಂಕರಿಸುವುದು ಶ್ರೀಮಂತರ ಹವ್ಯಾಸ ಕೂಡಾ ಹೌದು.

ಅಂತಹ ಒಂದು ದುಬಾರಿ ವರ್ಣಚಿತ್ರಗಳಲ್ಲೊಂದು, ಮುಖ ಇರದ ವರ್ಣವಿತ್ರ ಆರ್ಟ್ ಗ್ಯಾಲರಿಯಲ್ಲಿ ಇದ್ದು, ಸೆಕ್ಯೂರಿಟಿ ಗಾರ್ಡ್ ಬಾಲ್ ಪೆನ್ ಗಳನ್ನು ಬಳಸಿ ಈ ವರ್ಣಚಿತ್ರಕ್ಕೆ ಕಣ್ಣುಗಳನ್ನು ಬರೆದಿದ್ದಾನೆ. ಈಗ ಸೆಕ್ಯೂರಿಟಿ ಗಾರ್ಡ್ ಈ ಅಪರೂಪದ ವರ್ಣಚಿತ್ರವನ್ನು ವಿ ರೂ ಪಗೊಳಿಸಿದ್ದಾನೆ ಎನ್ನುವ ಕಾರಣದಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಚಿತ್ರವನ್ನು 1930 ರಲ್ಲಿ ರಚಿಸಲಾಗಿತ್ತು ಎನ್ನಲಾಗಿದ್ದು, ಸುಮಾರು 7.5 ಕೋಟಿ ರೂಗಳ ವಿಮೆಯನ್ನು ಮಾಡಿಸಲಾಗಿತ್ತು ಎನ್ನಲಾಗಿದೆ.

ಪ್ರಸ್ತುತ ಸೆಕ್ಯೂರಿಟಿ ಗಾರ್ಡ್ ಯಾರು? ಏನು? ಎನ್ನುವ ಮಾಹಿತಿಯನ್ನು ಹೊರಹಾಕಿಲ್ಲ. ಆತನ ಮೇಲಿನ ಆ ರೋ ಪ ಏನಾದರೂ ಸಾಬೀತಾದರೆ ಆತನಿಗೆ ಶಿ ಕ್ಷೆ ಯನ್ನು ವಿಧಿಸಲಾಗುವುದು ಎನ್ನಲಾಗಿದೆ. ಸೆಕ್ಯೂರಿಟಿ ಗಾರ್ಡ್ ವಿ ರೂ ಪಗೊಳಿಸದ್ದಾನೆ ಎನ್ನಲಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಲಾಗಿದೆ. ಈ ವಿಷಯ ಈಗ ಎಲ್ಲೆಡೆ ಸುದ್ದಿಯಾಗಿದ್ದು ಕೆಲವರು ಸೆಕ್ಯೂರಿಟಿ ಗಾರ್ಡ್ ನ ಪ್ರತಿಭೆಯನ್ನು ಮೆಚ್ಚಬೇಕು ಎಂದಿದ್ದಾರೆ.

Leave a Comment