ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ ಕರಣ್ ಜೋಹರ್: ಸಲ್ಮಾನ್ ಖಾನ್ ಬಿಗ್ ಬಾಸ್ ನಿಂದ ಔಟಾದ್ರಾ??

Written by Soma Shekar

Published on:

---Join Our Channel---

ನಮ್ಮ ಇಂಡಿಯನ್ ಕಿರುತೆರೆಯಲ್ಲಿ ಬಹಳ ದೊಡ್ಡ ರಿಯಾಲಿಟಿ ಶೋ ಹಾಗೂ ಪ್ರಸಾರ ಆರಂಭಿಸಿದ ಮೇಲೆ ಸಾಕಷ್ಟು ವಿ ವಾ ದಗಳಿಗೆ ಸಹಾ ಕಾರಣವಾಗುವ ಪ್ರಖ್ಯಾತ ಶೋ ಎಂದರೆ ಅದು ಹಿಂದಿಯ ಬಿಗ್ ಬಾಸ್ ಶೋ. ಆದರೆ ಪ್ರತಿ ಹೊಸ ಸೀಸನ್ ನಲ್ಲಿ ಹೊಸ ಐಡಿಯಾದೊಂದಿಗೆ ಜನರ ಮುಂದೆ ಬರುವ ಹಿಂದಿಯ ಬಿಗ್ ಬಾಸ್ ಈಗಾಗಲೇ ಯಶಸ್ವಿ 14 ಸೀಸನ್ ಗಳನ್ನು ಮುಗಿಸಿದೆ. ಈಗ 15 ನೇ ಸೀಸನ್ ಗೆ ಸಜ್ಜಾಗಿದೆ. ಹಿಂದಿ ಬಿಗ್ ಬಾಸ್ ನ ಹೊಸ ಸೀಸನ್ ಈ ಬಾರಿ ವಿಶೇಷತೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲಿರುವುದು ಇದೀಗ ಸುದ್ದಿಯಾಗಿದೆ. ಬಿಗ್ ಬಾಸ್ ನಾಲ್ಕನೇ ಸೀಸನ್ ನಿಂದಲೂ ಅದನ್ನು ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ.

ಬಿಗ್ ಬಾಸ್ ಪ್ರತಿ ಬಾರಿಯೂ ಟಿ ಆರ್ ಪಿ ಯಲ್ಲಿ ದಾಖಲೆಗಳನ್ನು ಬರೆಯುತ್ತದೆ. ಈಗ ಹದನೈದನೇ ಸೀಸನ್ ನ ಪ್ರೋಮೋ ಒಂದು ಬಿಡುಗಡೆ ಆಗಿ ಎಲ್ಲರ ಗಮನವನ್ನು ಸೆಳೆದಿದೆ. ಪ್ರೋಮೋ ಗಮನ ಸೆಳೆಯಲು ಪ್ರಮುಖವಾದ ಕಾರಣ ಏನು ಎನ್ನುವುದಾದರೆ ಈ ಬಾರಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಈ ಶೋ ನ ನಿರೂಪಣೆ ಮಾಡುತ್ತಿರುವುದು. ಕರಣ್ ಜೋಹರ್ ನಿರೂಪಣೆ ಮಾಡಿದರೆ ಸಲ್ಮಾನ್ ಖಾನ್ ಶೋ ನಿರೂಪಣೆ ಮಾಡೋದಿಲ್ವಾ ಅನ್ನೋದಾದ್ರೆ ಇಲ್ಲೇ ಇದೆ ಟ್ವಿಸ್ಟ್.

ಕರಣ್ ಜೋಹರ್ ಶೋ ನಿರೂಪಣೆ‌‌ ಮಾಡುವುದೇನೋ ನಿಜ, ಆದರೆ ಅದು ಟಿವಿ ಆವೃತ್ತಿಯಲ್ಲಿ ಅಲ್ಲ. ಹೌದು ಕರಣ್ ಜೋಹರ್ ಅವರು ಬಿಗ್ ಬಾಸ್ 15 ರ ಓಟಿಟಿ ಪ್ಲಾಟ್ ಫಾರಂ ಆವೃತ್ತಿಯನ್ನು ನಿರೂಪಣೆ ಮಾಡಲಿದ್ದಾರೆ. ಉಳಿದಂತೆ ನಟ ಸಲ್ಮಾನ್ ಖಾನ್ ಅವರೇ ಟಿವಿ ಆವೃತ್ತಿಯ ಬಿಗ್ ಬಾಸ್ ಅನ್ನು ನಿರೂಪಣೆ ಮಾಡುತ್ತಾರೆ. ಈ ಬಾರಿ ಬಿಗ್ ಬಾಸ್ ಟಿಟಿ ಪ್ಲಾಟ್ ಫಾರಂ ನಲ್ಲಿ ಸಹಾ ಮೂಡಿ ಬರಲಿದ್ದು, ಆಗಸ್ಟ್ ಎಂಟರಂದು ಕರಣ್ ಜೋಹರ್ ಮೊದಲ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ಕರಣ್ ಜೋಹರ್ ಅವರಿಗೆ ನಿರೂಪಣೆ ಎನ್ನುವುದು ಹೊಸತೇನೂ ಅಲ್ಲ. ಅವರು ಈಗಾಗಲೇ ಕಾಫಿ ವಿತ್ ಕರಣ್ ಟಾಕ್ ಶೋ ಮೂಲಕ ಹೆಸರಾಗಿದ್ದಾರೆ. ಇದಲ್ಲದೇ ರಿಯಾಲಿಟಿ ಶೋ ಗಳ ಜಡ್ಜ್ ಆಗಿದ್ದಾರೆ ಮಾತ್ರವಲ್ಲದೇ ಅವರು ಅನೇಕ ಸಿನಿಮಾ ಅವಾರ್ಡ್ ಗಳ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಕರಣ್ ಜೋಹರ್ ಬಿಗ್ ಬಾಸ್ ಓಟಿಟಿ ಆವೃತ್ತಿ ಸಹಾ ದೊಡ್ಡ ಯಶಸ್ಸನ್ನು ಪಡೆಯಲಿದರೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಕರಣ್ ಜೋಹರ್ ಕೆಲವು ಕಡೆ ತಮ್ಮ ತಾಯಿ ಬಿಗ್ ಬಾಸ್ ನ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ‌. ಅವರ ತಾಯಿ ಬಿಗ್ ಬಾಸ್ ನ ಪ್ರತಿ ಎಪಿಸೋಡ್ ಕೂಡಾ ತಪ್ಪದೇ ನೋಡುತ್ತಾರೆ ಎಂದಿದ್ದರು. ಇದೀಗ ನಾನು ಕಾರ್ಯಕ್ರಮ ಹೋಸ್ಟ್ ಮಾಡುವುದು ಅವರ ಕನಸು ನನಸಾದ ಅನುಭವ ಅವರದಾಗಲಿದೆ ಎಂದು ಕರಣ್ ಜೋಹರ್ ಬಹಳ ಖುಷಿಯಲ್ಲಿದ್ದಾರೆ. ಕರಣ್ ಜೋಹರ್ ಅವರು ತಮ್ಮ ನಿರೂಪಣೆಯನ್ನು ರೋಚಕ ಹಾಗೂ ತಮ್ಮದೇ ಆದ ಆ ವಿಭಿನ್ನ ಶೈಲಿಯಲ್ಲಿ ನಡೆಸಿಕೊಡುವುದಾಗಿಯೂ ಹೇಳಿದ್ದಾರೆ.‌

Leave a Comment