ಪ್ಯಾರಾಸೈಲಿಂಗ್ ವೇಳೆ ಸಂಭವಿಸಿತು ಅನಾಹುತ ಭ ಯಾ ನಕ ಘಟನೆಯ ವೀಡಿಯೋ ವೈರಲ್

Written by Soma Shekar

Published on:

---Join Our Channel---

ಪ್ಯಾರಾ ಸೈಲಿಂಗ್ ಒಂದು ರೋಮಾಂಚಕಾರಿ ಅನುಭವ. ಅನೇಕರಿಗೆ ಎದೆ ಪ್ಯಾರಾ ಸೈಲಿಂಗ್ ಮಾಡುವಾಗ ಡವಗುಟ್ಟುವುದು ಕೂಡಾ ನಿಜ. ಪ್ಯಾರಾ ಸೈಲಿಂಗ್ ವೀಡಿಯೋಗಳನ್ನು ನೋಡುವಾಗಲೇ ಅದ್ಬುತ ಹಾಗೂ ರೋಮಾಂಚಕಾರಿ ಎನಿಸುತ್ತದೆ. ಅಂತಹುದರಲ್ಲಿ ಪ್ರಾಯೋಗಿಕವಾಗಿ ಅದರ ಅನುಭವ ಹೇಗಿರುತ್ತದೆ ಎನ್ನುವುದನ್ನು ಹೇಳುವುದು ಅಸಾಧ್ಯ. ಅದನ್ನು ಅನುಭವಿಸಿಯೇ ನೋಡಬೇಕು. ಪ್ರಸ್ತುತ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು ಪ್ಯಾರಾ ಸೈಲಿಂಗ್ ನ ಈ ವೀಡಿಯೋ ಭ ಯಾ ನಕವಾಗಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತಿದೆ.

ಗುಜರಾತ್ ಮೂಲದ ಅಜಿತ್ ಕಥಾಡ್ ಮತ್ತು ಸರಳಾ ಕಥಾಡ್ ದಂಪತಿಯು ದಿಯು ನಲ್ಲಿರುವ ನಗೋವಾ ಬೀಚ್ ನಲ್ಲಿ ವಾರಾಂತ್ಯದ ದಿನವನ್ನು ಎಂಜಾಯ್ ಮಾಡಲು ಹೋಗಿದ್ದರು. ಈ ವೇಳೆ ಅವರಿಗೆ ಅಲ್ಲಿದ್ದಂತಹ ಪ್ಯಾರಾ ಸೈಲಿಂಗ್ ಮಾಡಬೇಕೆನ್ನುವ ಆಸಕ್ತಿ ಹಾಗೂ ಇಚ್ಛೆ ಉಂಟಾಗಿದೆ. ತಮ್ಮ ಇಚ್ಚೆಯನ್ನು ಪೂರ್ತಿ ಮಾಡಿಕೊಳ್ಳಲು ಅವರು ಪ್ಯಾರಾ ಸೈಲಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ರೋಮಾಂಚನದ ಅನುಭವ ಭ ಯಾ ನಕ ಅನುಭವ ಕೂಡಾ ಆಗಲಿದೆ ಎನ್ನುವುದನ್ನು ಅವರು ಆ ಕ್ಷಣದಲ್ಲಿ ಖಂಡಿತ ನಿರೀಕ್ಷೆ ಮಾಡಿರಲಿಲ್ಲ.

ಪ್ಯಾರಾ ಸೈಲಿಂಗ್ ನಲ್ಲಿ ಬಹಳ ಎತ್ತರಕ್ಕೆ ಹೋದ ಮೇಲೆ ಇದ್ದಕ್ಕಿದ್ದಂತೆ ಹಗ್ಗ ತುಂಡಾಗಿ ದಂಪತಿ ಮೇಲಿನಿಂದ ನೀರೊಳಗೆ ಬಿದ್ದಿದ್ದಾರೆ. ಆದರೆ ಅವರು ಧರಿಸಿದ್ದ ಲೈಫ್ ಜಾಕೆಟ್ ಗಳಿಂದಾಗಿ ಅವರಿಗೆ ಅಪಾಯ ಸಂಭವಿಸಿಲ್ಲ. ಆದರೆ ಈ ವಿಚಾರವಾಗಿ ಪ್ಯಾರಾ ಸೈಲಿಂಗ್ ನಡೆಸುವವರು ಇದು ನಮ್ಮ ಜವಾಬ್ದಾರಿ ಅಲ್ಲ ಎಂದು ಹೇಳಿದೆ ಎನ್ನಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು ಅನೇಕರು ಸುರಕ್ಷತಾ ಕ್ರಮಗಳ ಕುರಿತಾಗಿ ತಮ್ಮ ಸಿಟ್ಟು ಆ ಕ್ರೋ ಶ ವನ್ನು ಹೊರ ಹಾಕಿದ್ದಾರೆ.

ಈ ಪೋಸ್ಟ್ ಶೇರ್ ಮಾಡಿರುವ ವ್ಯಕ್ತಿಯು ವೀಡಿಯೋ ಜೊತೆಗೆ, ಪ್ಯಾರಾಸೈಲಿಂಗ್ ಅ ಪ ಘಾ ತ, ಭಾರತದಲ್ಲಿ ಸುರಕ್ಷತೆ ಕ್ರಮಗಳು, ಮತ್ತು ಇದು ನಮ್ಮ ಜವಾಬ್ದಾರಿಯಲ್ಲ ಎಂದು ಬಹಳ ಅ ಸ ಭ್ಯವಾಗಿ ಹೇಳಿದ್ದಾರೆ ಅವರು ( ಕಂಪನಿ ). ಇಂತಹ ಸಂಗತಿಗಳು ನಡೆಯುತ್ತವೆ ಹಾಗೂ ಅವರ ಪ್ರತಿಕ್ರಿಯೆ ಸಂಪೂರ್ಣವಾಗಿ ಕರುಣಾಜನಕವಾಗಿದೆ ಎಂದು ಬರೆದುಕೊಂಡು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Comment