ಪಾಠಗಳಲ್ಲಿ ನಮ್ಮ ರಾಜರ ಬಗ್ಗೆ ಎರಡು ಸಾಲು, ಮೊಘಲರ ಬಗ್ಗೆ ಹೆಚ್ಚು ಉಲ್ಲೇಖ: ನಟ ಅಕ್ಷಯ್ ಕುಮಾರ್ ಅಸಮಾಧಾನ

Written by Soma Shekar

Published on:

---Join Our Channel---

ಕರ್ನಾಟಕದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಆರಂಭವಾಗಿರುವ ಸಂ ಘ ರ್ಷಕ್ಕೆ ಇನ್ನೂ ಒಂದು ಕೊನೆಯಾಗಿಲ್ಲ. ಅದಿನ್ನೂ ಕೂಡಾ ಮುಂದುವರೆದಿರುವಾಗಲೇ ಮತ್ತೊಂದು ಕಡೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೀಡಿರುವ ಒಂದು ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡಿದೆ. ನಟ ಅಕ್ಷಯ್ ಕುಮಾರ್ ಅವರು ನಾಯಕ ನಾಗಿ ನಟಿಸಿರುವ ಐತಿಹಾಸಿಕ ಪಾತ್ರದ ಕಥಾ ಹಂದರ ಹೊಂದಿರುವ ಸಿನಿಮಾ ಪೃಥ್ವಿರಾಜ್ ತೆರೆಗೆ ಬರಲು ಸಜ್ಜಾಗಿದೆ.‌ ಈ ವೇಳೆ ನಟ ತಮ್ಮ ಸಿನಿಮಾ ಬಗ್ಗೆ ಮಾತನಾಡುತ್ತಾ ನೀಡಿದ ಹೇಳಿಕೆಯೊಂದು ಈಗ ಎಲ್ಲರ ಗಮನವನ್ನು ಸಹಾ ಸೆಳೆದಿದೆ.

ತಮ್ಮ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನಟ ಅಕ್ಷಯ್ ಕುಮಾರ್ ಅವರು, ಇತಿಹಾಸ ಪಠ್ಯ ಪುಸ್ತಕದಲ್ಲಿ ಭಾರತೀಯ ರಾಜರ ಬಗ್ಗೆ ಹೆಚ್ಚಿನ ಉಲ್ಲೇಖವನ್ನು ಮಾಡಲಾಗಿಲ್ಲ. ದುರಾದೃಷ್ಟವಶಾತ್ ನಮ್ಮ ಇತಿಹಾಸ ಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಬಗ್ಗೆ ಎರಡು, ಮೂರು ಸಾಲುಗಳನ್ನು ನೀಡಲಾಗಿದೆ. ಆದರೆ ಆ ಕ್ರ ಮಣಕಾರರು, ಮೊಘಲರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಎರಡರ ನಡುವೆ ಒಂದು ಸಮತೋಲನ ಇರುವಂತೆ ಇತಿಹಾಸದ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಕೇಂದ್ರ ಶಿಕ್ಷಣ ಇಲಾಖೆಗೆ ನಟ ಅಕ್ಷಯ್ ಕುಮಾರ್ ಅವರು ಮನವಿಯನ್ನು ಮಾಡಿದ್ದಾರೆ. ಮೊಘಲರ ಆಳ್ವಿಕೆಯನ್ನು ತಿಳಿದುಕೊಳ್ಳುವುದು ನಮಗೆ ಮುಖ್ಯ, ಆದರೆ ಅದೇ ವೇಳೆಯಲ್ಲಿ ನಮ್ಮ ರಾಜರ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಲ್ಲವೇ? ಎಂದು ಅಕ್ಷಯ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಇದೇ ಸುದ್ದಿಗೋಷ್ಠಿಯಲ್ಲಿ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದು, ಭಾರತೀಯ ಚಿತ್ರರಂಗವು ಜಾಗತಿಕವಾಗಿ ತೆರೆದುಕೊಳ್ಳಲು ಮೋದಿ ಅವರಿಂದ ಸಾಧ್ಯವಾಯಿತು ಎನ್ನುವ ಮಾತೊಂದನ್ನು ಹೇಳಿದ್ದಾರೆ. ಅದಕ್ಕಾಗಿ ಮೋದಿ ಅವರಿಗೆ ನಟ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಹಾಗೂ ಮಿಸ್ ವರ್ಲ್ಡ್ ಕಿರೀಟಿ ಗೆದ್ದಿದ್ದ ಸುಂದರಿ ಮಾನುಷಿ ಚಿಲ್ಲರ್ ಬಾಲಿವುಡ್ ಗೆ ಎಂಟ್ರಿ ನೀಡುತ್ತಿರುವ ಪೃಥ್ವಿರಾಜ್ ಸಿನಿಮಾ ಇದೇ ಶುಕ್ರವಾರ ಬೆಳ್ಳಿ ತೆರೆಯಲ್ಲಿ ಮೂಡಿ ಬರಲು ಸಜ್ಜಾಗಿದೆ.

Leave a Comment