ಪದಕ ಗೆದ್ದರೂ ಪಿ.ವಿ.ಸಿಂಧು ಗೆ ಸಿಗಲಿಲ್ಲ ಅಭಿನಂದನೆ:ಬ್ಯಾಡ್ಮಿಂಟನ್ ತಾರೆಯರ ನಡುವೆ ಇದೆಂತ ಶೀತಲ ಸಮರ

Written by Soma Shekar

Published on:

---Join Our Channel---

ಭಾರತದ ಬ್ಯಾಡ್ಮಿಂಟನ್ ತಾರೆಯರು ಎಂದ ಕೂಡಲೇ ನಾವು ಹೇಳುವ ಎರಡು ಹೆಸರುಗಳು ಎಂದರೆ ಅವು ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್. ಈ ಇಬ್ಬರೂ ಸಹಾ ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ ಕ್ರೀಡಾಪಟುಗಳು. ಆದರೆ ಈ ಇಬ್ಬರೂ ಕ್ರೀಡಾ ತಾರೆಯರ ನಡುವೆ ಒಂದು ಶೀತಲ ಸಮರ ನಡೆದಿದೆಯಾ? ಇವರ ನಡುವೆ ಏನಾದರೂ ವೈಮನಸ್ಯ ಉಂಟಾಗಿದೆಯೇ?? ಎನ್ನುವ ಪ್ರಶ್ನೆಯೊಂದು ಇದೀಗ ಟೋಕಿಯೋ ಒಲಂಪಿಕ್ಸ್ ನಲ್ಲಿ ಪಿ. ವಿ. ಸಿಂಧು ಕಂಚಿನ ಪದಕವನ್ನು ಗೆದ್ದು ಬಂದ ಮೇಲೆ ಎದ್ದಿವೆ‌. ಭಾನುವಾರ ನಡೆದಂತಹ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪಿ.ವಿ. ಸಿಂಧು ಅವರು ಬಿಂಗ್ಜಿಯಾವೋ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು ಪಿ.ವಿ.ಸಿಂಧು.

ಈ ಸಾಧನೆಯ ಮೂಲಕ ಪಿ.ವಿ.ಸಿಂಧು ಒಲಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತೀಯ ಮಹಿಳಾ ಕ್ರೀಡಾ ತಾರೆ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಅವರ ಈ ಗೆಲುವಿನ ನಂತರ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಪಿ.ವಿ.ಸಿಂಧು ಅವರನ್ನು ಮಾದ್ಯಮ ಮಿತ್ರರು ಪ್ರಶ್ನೆಗಳನ್ನು ಕೇಳುವ ವೇಳೆ, ನಿಮ್ಮ ಹಳೆಯ ಕೋಚ್ ಗೋಪಿ ಚಂದ್ ಹಾಗೂ ಸಹ ಆಟಗಾರ್ತಿ ಸೈನಾ ನೆಹ್ವಾಲ್ ಅವರು ನಿಮ್ಮ ಗೆಲುವಿಗೆ ಅಭಿನಂದನೆ ಯನ್ನು ತಿಳಿಸಿದರಾ? ಎನ್ನುವ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪಿ.ವಿ.ಸಿಂಧು ಅವರು ಗೋಪಿ ಸರ್ ಅಭಿನಂದಿಸಿದ್ದಾರೆ, ಆದರೆ ನಾನು ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ನೋಡಿಲ್ಲ ಎಂದಿದ್ದಾರೆ.

ಅಲ್ಲದೇ ಸೈನಾ ಅವರ ಬಗ್ಗೆ ಕೇಳಿದಾಗ ಅವರಿನ್ನೂ ಯಾವುದೇ ಅಭಿನಂದನೆಯನ್ನು ತಿಳಿಸಿಲ್ಲ. ಅಲ್ಲದೇ ನಾನು ಅವರು ಹೆಚ್ಚು ಮಾತನಾಡುವುದಿಲ್ಲ ಎಂದು ಸಹಾ ಹೇಳಿದ್ದಾರೆ. ಇನ್ನೊಂದು ಕಡೆ ಪಿ.ವಿ.ಸಿಂಧು ಅವರು ಒಲಂಪಿಕ್ಸ್ ನಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರೂ ಸಹಾ ಸೈನಾ ನೆಹ್ವಾಲ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪಿ.ವಿ.ಸಿಂಧು ಅವರಿಗೆ ಯಾವುದೇ ಅಭಿನಂದನೆ ಯನ್ನು ತಿಳಿಸಿಲ್ಲ ಈ ವಿಷಯ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿತ್ತು. ಅಲ್ಲದೇ ಈ ಬೆಳವಣಿಗೆ ನಂತರ ಭಾರತದ ಈ ಇಬ್ಬರು ಬ್ಯಾಡ್ಮಿಂಟನ್ ತಾರೆಯರ ನಡುವಿನ ಶೀತಲ ಸಮರವೂ ಬಹಿರಂಗವಾಗಿದೆ.‌

ಕೆಲವು ಸಮಯದ ಹಿಂದೆ ಪಿ.ವಿ.ಸಿಂಧು ಅವರು ಮೂರು ತಿಂಗಳ ತರಬೇತಿ ಗಾಗಿ ಲಂಡನ್ ಗೆ ತೆರಳಿದ ವೇಳೆಯಲ್ಲಿ ಅವರ ಕೋಚ್ ಗೋಪಿ ಚಂದ್ ಅವರ ಜೊತೆಗೆ ಭಿನ್ನಾಭಿಪ್ರಾಯಗಳು ಮೂಡಿತ್ತು.. ಟೋಕಿಯೋ ಒಲಂಪಿಕ್ಸ್ ನಲ್ಲೂ ಸಿಂಧು ಅವರು ಇಂಡೋನೇಷ್ಯಾ ದ ಕೋಚ್ ಟೇ ಸಾಂಗ್ ಅವರ ಮಾರ್ಗದರ್ಶನದಲ್ಲಿ ಕಣಕ್ಕೆ ಇಳಿದಿದ್ದು ವಿಶೇಷ. ಅವರು ಧ್ಯಾನ್ ಚಂದ್ ಅವರ ಮಾರ್ಗದರ್ಶನದಲ್ಲಿ ಒಲಂಪಿಕ್ಸ್ ನಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೂ ವೈಮನಸ್ಯ ಮರೆತು ಗೋಪಿ ಚಂದ್ ಅವರು ಪಿ.ವಿ.ಸಿಂಧು ಅವರ ಸಾಧನೆಗೆ ಅಭಿನಂದಿಸಿದ್ದಾರೆ.

ಆದರೆ ಪಿ.ವಿ.ಸಿಂಧು ಮತ್ತು ಸೈನಾ ನೆಹವಾಲ್ ನಡುವಿನ ವೈಮನಸ್ಸು ಇನ್ನೂ ಮುಂದುವರೆದಿದೆ ಎನ್ನಲಾಗಿದ್ದು, ಅದೇ ಕಾರಣದಿಂದಲೇ ಸೈನಾ ಅವರು ಪಿ.ವಿ.ಸಿಂಧು ಅವರು ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದರೂ ಸಹಾ ಅಭಿನಂದಿಸಿಲ್ಲ ಎನ್ನಲಾಗಿದೆ. ಇನ್ನು ಸೈನಾ ನೆಹವಾಲ್ ಅವರು ಈ ಬಾರಿ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುವಲ್ಲಿ ವಿಫಲರಾಗಿದ್ದರು. ಏನೇ ಆದರೂ ಇದೀಗ ಇಬ್ಬರು ಕ್ರೀಡಾ ತಾರೆಯರ ನಡುವಿನ ಶೀತಲ ಸಮರವು ಜಗಜ್ಜಾಹೀರಾಗಿದೆ ಎನ್ನುವುದು ವಾಸ್ತವ ಎನಿಸಿದೆ.

Leave a Comment