ಪಠಾಣ್ vs ಕ್ರಾಂತಿ: ಬೆಂಗಳೂರಿನಲ್ಲೇ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಕ್ರಾಂತಿಯನ್ನು ಹಿಂದಿಕ್ಕಿದ ಪಠಾಣ್! ಏನಿದು ಶಾಕಿಂಗ್ ಸುದ್ದಿ?

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಮತ್ತು ನಟಿ ರಚಿತಾ ರಾಮ್(Rachita Ram) ಜೋಡಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಕ್ರಾಂತಿ(Krantj) ಇದೇ ಜನವರಿ 26 ಕ್ಕೆ ತೆರೆಗೆ ಬರಲು ಸಜ್ಜಾಗಿದ್ದು, ಅಭಿಮಾನಿಗಳು ಸಿಕ್ಕಾಪಟ್ಟೆ ಜೋಷ್ ನಲ್ಲಿದ್ದಾರೆ. ಇದೇ ವೇಳೆ ಕ್ರಾಂತಿಗಿಂತ ಒಂದು ದಿನ ಮೊದಲು ಅಂದರೆ ಜನವರಿ 25 ರಂದು ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್(Shah Rukh Khan) ಮತ್ತು ದೀಪಿಕಾ ಪಡುಕೋಣೆ(Deepika Padukone) ಜೋಡಿಯಾಗಿರುವ ಬಹು ನಿರೀಕ್ಷಿತ ಪಠಾಣ್(Pathan) ಸಿನಿಮಾ ತೆರೆಗೆ ಬರುತ್ತಿದೆ. ಆದ ಕಾರಣ ದರ್ಶನ್ ಅವರ ಕ್ರಾಂತಿ ಸಿನಿಮಾಕ್ಕೆ ಶಾರೂಖ್ ಖಾನ್ ಪಠಾಣ್ ಗಟ್ಟಿ ಪೈಪೋಟಿಯನ್ನು ನೀಡುವುದು ಖಂಡಿತ ಎನ್ನಲಾಗುತ್ತಿದೆ.

ಒಂದು ದಿನದ ಅಂತರದಲ್ಲಿ ಎರಡೂ ಸಿನಿಮಾಗಳು ತೆರೆಗೆ ಬರುತ್ತಿದ್ದು, ಬಾಕ್ಸಾಫೀಸಿನಲ್ಲಿ ಒಂದು ಸ್ಪರ್ಧೆ ಏರ್ಪಡಲಿದೆ. ಸಿನಿಮಾಗಳ ಟಿಕೆಟ್ ನ ಅಡ್ವಾನ್ಸ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ದರ್ಶನ್ ಮತ್ತು ಶಾರೂಖ್(Darshan , Shah Rukh) ಅಭಿಮಾನಿಗಳು ಟಿಕೆಟ್ ಖರೀದಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಾ ಭಾಷೆಯ ಸಿನಿಮಾಗಳನ್ನು ನೋಡುವ ಪ್ರೇಕ್ಷಕರು ಇರುವ ಕಾರಣದಿಂದಾಗಿ ಕ್ರಾಂತಿ ಮತ್ತು ಪಠಾಣ್ ಗೆ ಪೈಪೋಟಿ ಪ್ರಬಲವಾಗಿ ಇರಲಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಬಿಡುಗಡೆಯ ದಿನ ಯಾವ ಸಿನಿಮಾಕ್ಕೆ ಎಷ್ಟು ಶೋ ಸಿಕ್ಕಿದೆ ಎನ್ನುವುದರ ಬಗ್ಗೆ ಸುದ್ದಿಗಳಾಗಿದ್ದು, ಮಾಹಿತಿಗಳ ಪ್ರಕಾರ ಬಿಡುಗಡೆ ದಿನ ಪಠಾಣ್(Pathan first day shows) ಸಿನಿಮಾಕ್ಕೆ 672 ಶೋ ಗಳು ದಕ್ಕಿದೆ. ಇದೇ ವೇಳೆ ಕನ್ನಡದ ಕ್ರಾಂತಿ (Kranti first day shows) ಸಿನಿಮಾಕ್ಕೆ ಮೊದಲ ದಿನ 537 ಶೋ‌ಗಳು ಸಿಕ್ಕಿವೆ ಎನ್ನಲಾಗಿದೆ. ಈಗ ಈ ವಿಚಾರವಾಗಿ ಚರ್ಚೆಗಳು ಆರಂಭವಾಗಿದೆ. ಏಕೆಂದರೆ ಹಿಂದಿ ಸಿನಿಮಾಕ್ಕೆ ಸಿಕ್ಕ ಪ್ರದರ್ಶನಗಳು ಕನ್ನಡ ಸಿನಿಮಾಕ್ಕೆ ಏಕಿಲ್ಲ ಎನ್ನುವುದು ಸಹಜವಾಗಿಯೇ ಮೂಡಿರುವ ಪ್ರಶ್ನೆಯಾಗಿದೆ. ಆದರೆ ಕ್ರಾಂತಿ ಬಿಡುಗಡೆ ದಿನದಂದು ಪಠಾಣ್ ಸಿನಿಮಾಕ್ಕೆ ಕೇವಲ 357 ಶೋ ಗಳು ಸಿಕ್ಕಿವೆ ಎನ್ನಲಾಗಿದೆ.

Leave a Comment