“ನಿಮ್ಮದು ಎಷ್ಟು ದೊಡ್ಡದಿದೆ ತೋರಿಸಿ”: ಪಂದ್ಯದ ನಡುವೆ ಮಹಿಳಾ ಕಾಮೆಂಟೇಟರ್ ಡಬಲ್ ಮೀನಿಂಗ್ ಕಾಮೆಂಟ್

Written by Soma Shekar

Published on:

---Join Our Channel---

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಟಿ 20 ಲೀಗ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಐಪಿಎಲ್ ಯಾವ ಮಟ್ಟಕ್ಕೆ ಜನಪ್ರಿಯತೆಯನ್ನು ಪಡೆದುಕೊಂಡಿದೆಯೋ ಅದೇ ರೀತಿಯಲ್ಲಿ ಬಿಗ್ ಬ್ಯಾಷ್ ಟಿ 20 ಆಸ್ಟ್ರೇಲಿಯಾದಲ್ಲಿ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದೆ.‌ ವಿಶ್ವಮ ಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನೇಕ ಆಟಗಾರರು ಈ ಪಂದ್ಯಗಳ ಮೂಲಕ ಕಣಕ್ಕಿಳಿಯುತ್ತಾರೆ. ಪ್ರಸ್ತುತ 2021- 22 ನೇ ಸಾಲಿನ ಡಿಪಿಎಲ್ ಬಹಳ ಕುತೂಹಲಕಾರಿಯಾಗಿ ಸಾಗುತ್ತಿದೆ.

ಸದ್ಯಕ್ಕೆ ಈ ಪಂದ್ಯಾವಳಿಗಳು ಹೊಸದೊಂದು ವಿಷಯಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈಗ ಯಾವ ಹೊಸ ವಿಷಯಕ್ಕೆ ಬಿಬಿಎಲ್ ಸುದ್ದಿಯಾಗಿದೆ ಮತ್ತು ಅದಕ್ಕೆ ಕಾರಣ ಯಾರು?? ಎನ್ನುವುದಾದರೆ, ಇಂಗ್ಲೆಂಡ್ ನ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ, ವಿಕ್ಷಕ ವಿವರಣೆಗಾರರ್ತಿ ಇಶಾ ಗುಹಾ ಅವರು ಪಂದ್ಯದ ನಡುವೆ ಆಡಿದ ಒಂದು ಮಾತು ದೊಡ್ಡ ಸುದ್ದಿಯಾಗಿದೆ. ಭಾರತ ಮೂಲದ ಇಶಾ ಗುಹಾ ಅವರು ನಿವೃತ್ತಿಯ ನಂತರ ಕಾಮೆಂಟೇಟರ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ.

ಬಿಬಿಎಲ್ ನಲ್ಲಿ ಕಾಮೆಂಟರಿ ನೀಡುವಾಗ ಅವರು ಆಡಿದ ಒಂದು ಡಬಲ್ ಮೀನಿಂಗ್ ಮಾತು ಈಗ ವೈರಲ್ ಆಗುತ್ತಿದೆ. ಪದ್ಯವೊಂದು ನಡೆಯುತ್ತಿರುವ ವೇಳೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆ್ಯಡಂ ಗಿಲ್ ಕ್ರಿಸ್ಟ್ ಮತ್ತು ಮತ್ತೊಬ್ಬ ಮಾಜಿ ಆಟಗಾರ ಕೆರ್ರಿ ಓ ಕೀಫ್ ಕಾಮೆಂಟರಿ ನೀಡುತ್ತಿದ್ದರು ಹಾಗೂ ಅವರ ಜೊತೆ ಇಶಾ ಗುಹಾ ಕೂಡಾ ಇದ್ದರು. ಈ ವೇಳೆ ಮೂವರು ಕಾಮೆಂಟೇಟರ್ ಗಳು ಕ್ಯಾರ. ಬಾಲ್ ಆಟದ ವಿಷಯವಾಗಿ ಚರ್ಚೆ ಪ್ರಾರಂಭಿಸಿದ್ದಾರೆ.

ಆ ವೇಳೆ ಮಾಜಿ ಸ್ಪಿನ್ನರ್ ಓ ಕೀಫ್ ಅವರು ಅಕಾಡೆಮಿಗಳಲ್ಲಿ ಕೋಚ್ ಗಳು ಸ್ಪಿನ್ ಬೌಲರ್ ಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ?? ಎನ್ನುವ ವಿಚಾರವನ್ನು ಹೇಳುತ್ತಿದ್ದರು. ನಮ್ಮಲ್ಲಿ ಅತ್ಯಂತ ಉದ್ದವಾದ ಮಧ್ಯದ ಕೈಬೆರಳು ಉಳ್ಳವರನ್ನು ಕೋಚ್ ಹೆಚ್ಚಾಗಿ ಕ್ಯಾರಂ ಬಾಲ್ ಆಟದಲ್ಲಿ ಸ್ಪಿನ್ನರ್ ಗಳಾಗಿ ಆಯ್ಕೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಆಗ ಅವರ ಮಾತನ್ನು ಕೇಳಿ ಇಶಾ, “ನಿಮ್ಮದು ಎಷ್ಟು ದೊಡ್ಡದಿದೆ ತೋರಿಸಿ??” ಎಂದು ಕೇಳಿದ್ದಾರೆ.

ತಕ್ಷಣವೇ ಅವರಿಗೆ ತಮ್ಮ ಮಾತಿನಲ್ಲಿ ಇರುವ ಡಬಲ್ ಮೀನಿಂಗ್ ಅರ್ಥವಾಗಿ ಜೋರಾಗಿ ನಕ್ಕಿದ್ದಾರೆ. ಗಿಲ್ ಕ್ರಿಸ್ಟ್ ಅವರು ತಮ್ಮ ನಗುವನ್ನು ತಡೆದುಕೊಂಡಿದ್ದಾರೆ. ಪಂದ್ಯದ ನಡುವೆ ನಡೆದ ಸಂಭಾಷಣೆ ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ವೈರಲ್ ಆಗಿದೆ. ಇದು ದೊಡ್ಡ ಸುದ್ದಿಯಾದ ನಂತರ ಇಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, “ನನ್ನ ಮಾತು ಸಮಂಜಸವಾಗಿದೆ. ಅದು ಕ್ಯಾರಂ ಬಾಲ್ ಗೆ ಸಂಬಂಧಿಸಿದ ಮಾತು” ಎಂದು ಟ್ವೀಟ್ ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

Leave a Comment