ಗರ್ಭಗುಡಿಯಲ್ಲಿ ದೇವರ ವಿಗ್ರಹ ಇಡುವ ಹಿಂದಿನ ಕಾರಣವೇನು ಗೊತ್ತಾ? ಇನ್ಮುಂದೆ ತಪ್ಪದೇ ಇದನ್ನು ನೆನಪಿಡಿ.

Written by Soma Shekar

Published on:

---Join Our Channel---

ಹಿಂದೂ ಧರ್ಮದಲ್ಲಿನ ಕೆಲವು ನಂಬಿಕೆಗಳು ಮತ್ತು ಸಂಪ್ರದಾಯಗಳು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಬಹಳ ಶ್ರದ್ಧೆಯಿಂದ ನಿರ್ವಹಿಸಲ್ಪಡುತ್ತವೆ. ಆದರೆ ಅವುಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಸರಿಸುವುದರಿಂದ ನಮಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಪ್ರಯೋಜನಗಳಾಗುತ್ತವೆ. ನಮ್ಮ ಮನೆಯಲ್ಲಿ ಸುಖ, ಸಂಪತ್ತು ಮತ್ತು ಸಮೃದ್ಧಿಯನ್ನು ಕಾಣಬಹುದು. ಈ ಕೆಲವು ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನು ನಾವೀಗ ತಿಳಿಯೋಣ ಬನ್ನಿ.

ದೇವಸ್ಥಾನದ ಹೊರಗೆ ನಮ್ಮ ಚಪ್ಪಲಿಯನ್ನು ಏಕೆ ತೆಗೆಯಬೇಕು? ದೇವಸ್ಥಾನವನ್ನು ಪ್ರವೇಶಿಸುವ ಮೊದಲು ನಾವೆಲ್ಲರೂ ನಮ್ಮ ಚಪ್ಪಲಿ ಮತ್ತು ಬೂಟುಗಳನ್ನು ದೇಗುಲದ ಹೊರಗೆ ಬಿಡುತ್ತೇವೆ. ಇದರ ಹಿಂದಿನ ವೈಜ್ಞಾನಿಕ ಕಾರಣ ಏನೆಂದರೆ ಪ್ರಾಚೀನ ಕಾಲದಲ್ಲಿ ದೇವಾಲಯಗಳ ನಿರ್ಮಾಣದಲ್ಲಿ ಕೆಲವೊಂದು ತಂತ್ರಗಳನ್ನು ಬಳಸಲಾಗಿದ್ದು, ನಮ್ಮ ದೇವಾಲಯಗಳು ವಿದ್ಯುತ್ ಮತ್ತು ಕಾಂತೀಯ ಅಲೆಗಳ ಅತಿದೊಡ್ಡ ಮೂಲಗಳಾಗಿವೆ ಎಂದು ಪರಿಗಣಿಸಲಾಗಿದೆ.

ಆದ್ದರಿಂದಲೇ ನಮ್ಮ ಶಾಸ್ತ್ರಗಳ ಪ್ರಕಾರ, ದೇವಾಲಯವನ್ನು ಪ್ರವೇಶಿಸುವ ಮೊದಲು ನಾವು ನಮ್ಮ‌ ಪಾದರಕ್ಷೆಗಳನ್ನು ಅಥವಾ ಚಪ್ಪಲಿಯನ್ನು ತೆಗೆದು ಬರಿಗಾಲಿನಲ್ಲಿ ದೇಗುಲವನ್ನು ಪ್ರವೇಶಿಸುತ್ತೇವೆ. ಏಕೆಂದರೆ ದೇವಾಲಯದ ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವಾಗ ಗರಿಷ್ಠ ಪ್ರಮಾಣದ ಧನಾತ್ಮಕ ಶಕ್ತಿಯು ಪಾದಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ ಮತ್ತು ನಮಗೆ ಚುರುಕುತನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಆರತಿಯನ್ನು ಈ ಕಾರಣದಿಂದ ನೀಡುತ್ತಾರೆ : ದೇವರ ಆರತಿ ಮಾಡಿದ ನಂತರ ಎಲ್ಲರೂ ದೀಪ ಅಥವಾ ಕರ್ಪೂರದ ಮೇಲೆ ಕೈಯಿಟ್ಟು ತಲೆಗೆ ಮತ್ತು ಕಣ್ಣುಗಳನ್ನು ಸ್ಪರ್ಶಿಸಬೇಕು. ಇದನ್ನು ಮಾಡುವುದರಿಂದ, ಬೆಳಕಿನ ಬೆಚ್ಚಗಿನ ಕೈಗಳಿಂದ ದೃಷ್ಟಿಯ ಭಾವವನ್ನು ಸಕ್ರಿಯಗೊಳಿಸಲಾಗುತ್ತದೆ. ಇದರಿಂದ ಅವರಲ್ಲಿ ಸಕಾರಾತ್ಮಕತೆ ಜಾಗೃತವಾಗುತ್ತದೆ. ಆರತಿ ಹಿಡಿದುಕೊಂಡು ಬೆಚ್ಚಗಿನ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸುವುದರಿಂದ ದೃಷ್ಟಿ ಚುರುಕಾಗುತ್ತದೆ ಎಂದು ನಂಬಲಾಗಿದೆ.

ಗರ್ಭಗುಡಿಯ ಮಧ್ಯದಲ್ಲಿ ದೇವರ ಪ್ರತಿಮೆ ಏಕಿರುತ್ತದೆ? ನೀವು ದೇವಸ್ಥಾನವನ್ನು ಪ್ರವೇಶಿಸಿದಾಗ, ಗರ್ಭಗುಡಿಯ ಮಧ್ಯದಲ್ಲಿ ದೇವರ ವಿಗ್ರಹವನ್ನು ಏಕೆ ಇರಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ದೇವಾಲಯದ ಈ ಸ್ಥಳವು ಅತ್ಯುನ್ನತ ಶಕ್ತಿಯ ಕೇಂದ್ರ ಎನ್ನಲಾಗಿದ್ದು, ಆ ಸ್ಥಳದಲ್ಲಿ ನಿಂತು ನೀವು ಧನಾತ್ಮಕ ಚಿಂತನೆಯೊಂದಿಗೆ ನಿಮ್ಮ ಕೈಗಳನ್ನು ಮಡಚಿದಾಗ, ಧನಾತ್ಮಕ ಶಕ್ತಿಯು ನಿಮ್ಮನ್ನು ಸೇರಿ, ನಿಮ್ಮಿಂದ ನಕಾರಾತ್ಮಕ ಶಕ್ತಿ ಮಾಯವಾಗುತ್ತದೆ ಎನ್ನಲಾಗಿದೆ.

ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲು ವೈಜ್ಞಾನಿಕ ಕಾರಣ:
ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಮಾಡಿದ ನಂತರ ಪ್ರದಕ್ಷಿಣೆ ಹಾಕುತ್ತೇವೆ. ಈ ಸಂಪ್ರದಾಯದ ಹಿಂದಿರುವ ಕಾರಣವೇನು ಎನ್ನುವುದಾದರೆ, ದೇವಸ್ಥಾನವನ್ನು ಪ್ರದಕ್ಷಿಣೆ ಮಾಡುವಾಗ, ಎಲ್ಲಾ ಧನಾತ್ಮಕ ಶಕ್ತಿಯು ದೇಹವನ್ನು ಪ್ರವೇಶಿಸುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಈ ಪ್ರದಕ್ಷಿಣೆಯನ್ನು ಕನಿಷ್ಠ ಏಳರಿಂದ ಎಂಟು ಬಾರಿ ಮಾಡಬೇಕು ಎಂದು ನಂಬಲಾಗಿದೆ.

Leave a Comment