ಕೊರೊನಾ ಭೀತಿಗೆ ಬೆಚ್ಚಿದ ಚೀನಾ: ಜನರನ್ನು ಮನೆಯಲ್ಲೇ ಲಾಕ್ ಮಾಡಲು ಮುಂದಾದ ಅಧಿಕಾರಿಗಳು

Written by Soma Shekar

Published on:

---Join Our Channel---

ಚೀನಾ ಹಾಗೂ ಕೊರೊನಾ ಹೆಸರನ್ನು ಕೇಳಿದರೆ ಜನರು ಭ ಯ ಪಡುವಂತಾಗಿದೆ. ಕೊರೊನಾ ಸೋಂಕು ಮತ್ತೆ ಹರಡಿದರೆ ಎನ್ನುವ ಆ ತಂ ಕ ಇನ್ನೂ ಕಡಿಮೆ ಆಗಿಲ್ಲ ಕೋವಿಡ್ ನ ಡೆಲ್ಟಾ ತಳಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕಿನ ಈ ಹಿಂದಿನ ವಿ ಧ್ವಂ ಸವನ್ನು ಮರೆಯದ ಚೀನಾ ಇದೀಗ ಕೊರೊನಾ ಸೋಂಕಿನ ವಿಷಯದಲ್ಲಿ ಆರಂಭದಲ್ಲೇ ಜಾಗೃತವಾಗಿದೆ. ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ಎಚ್ಚೆತ್ತುಕೊಂಡಿದ್ದು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸೋಂಕು ತಗುಲಿರುವ ಕುಟುಂಬದ ಸದಸ್ಯರನ್ನು ಅವರ ಮನೆಗಳಲ್ಲಿಯೇ ಲಾಕ್ ಮಾಡುತ್ತಿರುವ ಚೀನಾದ ಅಧಿಕಾರಿಗಳು ಫೋಟೋಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ..

ಚೀನಾದ ವುಹಾನ್ ನಲ್ಲಿ ಮೊದಲು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಾಗ ಇದೇ ರೀತಿಯ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಇದೀಗ ಮತ್ತೊಮ್ಮೆ ಅಧಿಕಾರಿಗಳು ಅದನ್ನೇ ಪ್ರಯೋಗಿಸಲು ಮುಂದಾಗಿದ್ದಾರೆ ಎಂದು ತೈವಾನ್ ನ್ಯೂಸ್ ಹೇಳಿದೆ. ಇಲ್ಲಿ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ ಮನೆಗಳ ಒಳಗೆ ಜನರನ್ನು ಲಾಕ್ ಮಾಡಿ, ಹೊರಗೆ ಬರದಂತೆ ಬಾಗಿಲಿಗೆ ಕಬ್ಬಿಣದ ಪಟ್ಟಿಯನ್ನು ಜೋಡಿಸಿ, ಮೊಳೆ ಹೊಡೆಯುವ ಫೋಟೋಗಳು ಹಾಗೂ ವೀಡಿಯೋಗಳು ವೈರಲ್ ಆಗಿವೆ. ವೈರಲ್ ಆದ ವೀಡಿಯೋ ನೋಡಿ ಜನರು ಚೀನಾವನ್ನೇ ಲಾಕ್ ಮಾಡಿ ಬಿಡಿ ಎನ್ನುತ್ತಿದ್ದಾರೆ.

ಕ್ವಾರಂಟೈನ್ ನಲ್ಲಿ ಇರಬೇಕಾದ ವ್ಯಕ್ತಿಯೊಬ್ಬನು ಶುದ್ಧ ಗಾಳಿ ಸೇವನೆಯ ಹೆಸರಿನಲ್ಲಿ ಹೊರಗೆ ಬಂದು ಸುತ್ತಾಡುವ ವೇಳೆಯಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ನಿಯಮವನ್ನು ಉಲ್ಲಂಘಿಸಿ ಹೊರಗೆ ಬಂದಿದ್ದ ಕ್ಕಾಗಿ ಆತನನ್ನು ಮನೆಯಲ್ಲಿ ಕೂಡಿ ಹಾಕುವ ವೀಡಿಯೋ ವೈರಲ್ ಆಗಿದೆ. ಚೀನಾದಲ್ಲಿ ಯಾವುದಾದರೂ ಅಪಾರ್ಟ್ಮೆಂಟ್ ಗಳಲ್ಲಿ ಕೋವಿಡ್ ಸೋಂಕು ಇರುವ ವ್ಯಕ್ತಿ ಕಂಡು ಬಂದು, ಆತನು ಅಲ್ಲಿ ಅನ್ಯ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿ ಇದ್ದ ಎಂದು ತಿಳಿದು ಬಂದರೆ ಕೂಡಲೇ ಆ ಇಡೀ ಅಪಾರ್ಟ್ಮೆಂಟ್ ಅನ್ನು ಎರಡಿಂದ ಮೂರು ವಾರಗಳ‌ ಕಾಲ ಸೀಲ್ ಡೌನ್ ಮಾಡಲಾಗುತ್ತಿದೆ.

Leave a Comment