ಕನ್ನಡಕ್ಕಾಗಿ ಒಗ್ಗೂಡಿದ ಚಂದನವನ: ಧ್ವಜ ಸುಟ್ಟವರ ವಿ ರು ದ್ಧ ಕಿಡಿ ಕಾರಿದ ತಾರೆಯರು

Written by Soma Shekar

Published on:

---Join Our Channel---

ಕನ್ನಡ ಧ್ವಜವನ್ನು ಸುಟ್ಟು ಎಂಇಎಸ್ ಕಾರ್ಯಕರ್ತರು ಉದ್ಧಟತನವನ್ನು ಮೆರೆದಿದ್ದಾರೆ. ಕಿಡಿಗೇಡಿಗಳು ಕನ್ನಡ ಧ್ವಜವನ್ನು ಸುಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅಪಮಾನವೆಂದು ಕನ್ನಡಿಗರು ಆ ಕ್ರೋ ಶವನ್ನು ವ್ಯಕ್ತಪಡಿಸಿದ್ದಾರೆ. ಧ್ವಜ ಸುಟ್ಟು ಪುಂಡಾಟಿಕೆ ಮೆರೆದವರಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿಕಾರುತ್ತಿದ್ದಾರೆ. ಕನ್ನಡಿಗರ ಈ ಆಗ್ರಹಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಸಹಾ ಜೊತೆಯಾಗಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಟ್ವೀಟ್ ಮಾಡಿದ ನಂತರದಲ್ಲಿ, ನಟ ದರ್ಶನ್, ದುನಿಯಾ ವಿಜಯ್, ಗಣೇಶ್, ಪ್ರಜ್ವಲ್ ದೇವರಾಜ್, ಮೇಘನಾ ಗಾಂವ್ಕರ್, ವಿನೋದ್ ಪ್ರಭಾಕರ್, ಧೃವ ಸರ್ಜಾ ಅವರು ಕೂಡಾ ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ಧ್ವಜವನ್ನು ಸುಟ್ಟವರ ವಿ ರು ದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಿ ಡಿ ಗೇ ಡಿಗಳಿಗೆ ತಕ್ಕ ಶಿ ಕ್ಷೆ ಆಗಬೇಕೆಂದು, ಕನ್ನಡಕ್ಕಾಗಿ ಮತ್ತೊಮ್ಮೆ ಕನ್ನಡದ ಸ್ಟಾರ್ ಗಳು ದನಿಯನ್ನು ಎತ್ತಿದ್ದಾರೆ.

ನಟ ದರ್ಶನ್ ಅವರು ಟ್ವೀಟ್ ಮಾಡಿ, “ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ” ಎಂದು ಬರೆದುಕೊಂಡಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

ನಟ ದುನಿಯಾ ವಿಜಯ್ ಅವರು ಟ್ವೀಟ್ ಮಾಡಿ,
ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ ಎಂದು ಬರೆದುಕೊಂಡಿದ್ದಾರೆ.

ನಟ ಗಣೇಶ್ ಅವರು ಟ್ವೀಟ್ ಮಾಡಿ, “ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು” ಎಂದಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅವರು, ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಜೈ ಕನ್ನಡ, ಜೈ ಕರ್ನಾಟಕ” ಎಂದು ಪೋಸ್ಟ್​ ಮಾಡಿದ್ದಾರೆ.

ನಟ ವಿನೋದ್ ಪ್ರಭಾಕರ್ ಅವರು, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, ಜೈ ಕರ್ನಾಟಕ, ನಮ್ಮ ಕನ್ನಡದ ಬಾವುಟ ನಮ್ಮ ಘನತೆ, ಗೌರವ, ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡಿದ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಿ. ಅದೇ ರೀತಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂದು ಬರೆದುಕೊಂಡಿದ್ದಾರೆ.‌

Leave a Comment