ಹಂಸಲೇಖ ಪ್ರಸ್ತಾಪ ಮಾಡಿದ್ದು ಸದಾಶಯದ ವಿಷಯ: ಹಂಸಲೇಖ ಪರವಾಗಿ ಕವಿರಾಜ್ ಪೋಸ್ಟ್

Written by Soma Shekar

Published on:

---Join Our Channel---

ಕನ್ನಡ ಸಿನಿಮಾ ರಂಗದ ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇತ್ತೀಚಿಗೆ ಮೈಸೂರಿನಲ್ಲಿ ನಡೆದಂತಹ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ ಪೇಜಾವರ ಶ್ರೀಗಳ ಕುರಿತಾಗಿ ಕೆಲವು ಮಾತುಗಳನ್ನು ಆಡಿದ್ದರು. ಹಂಸಲೇಖ ಅವರು ಆಡಿದ ಈ ಮಾತುಗಳು ಒಂದು ದೊಡ್ಡ ವಿ ವಾ ದ ಹುಟ್ಟು ಹಾಕಿದ್ದು ಮಾತ್ರವೇ ಅಲ್ಲದೇ ಅವರ ಮಾತಿಗೆ ಪರ ವಿ ರು ದ್ಧ ಪ್ರತಿಕ್ರಿಯೆಗಳು ಹರಿದು ಬರುತ್ತಲೇ ಇದೆ. ಇನ್ನು ಈ ಘಟನೆ ತೀವ್ರ ರೂಪ ಪಡೆಯುತ್ತಿದ್ದ ಹಾಗೆಯೇ ಹಂಸಲೇಖ ಅವರು ತಮ್ಮ‌ ಮಾತಿಗೆ ಕ್ಷಮಾಪಣೆ ಸಹಾ ಕೋರಿದ್ದರು. ಆದರೆ ಅನೇಕರು ಅವರು ಕ್ಷಮೆ ಕೇಳುವ ಅಗತ್ಯ ವಿರಲಿಲ್ಲ ಎಂದು ಹೇಳಿದ್ದು ಉಂಟು.

ಹಂಸಲೇಖ ಅವರ ಈ ಹೇಳಿಕೆಯ ಕುರಿತಾಗಿ ಕನ್ನಡ ಚಿತ್ರ ಸಾಹಿತಿ ಕವಿರಾಜ್ ಅವರು ಹಂಸಲೇಖ ಅವರ ಪರವಾಗಿ ಒಂದು ಪೋಸ್ಟ್ ಹಾಕುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಕವಿರಾಜ್ ತಮ್ಮ ಪೋಸ್ಟ್ ನಲ್ಲಿ, ಹಂಸಲೇಖ ಸರ್ ಒಂದು ಅತ್ಯಂತ ಸದಾಶಯದ ಬದಲಾವಣೆಯ ವಿಷಯ ಪ್ರಸ್ತಾಪಿಸಿದ್ದರು. ಶತಮಾನಗಳಿಂದ ಹೀನಾಯವಾಗಿ ನಡೆಸಿಕೊಳ್ಳಲ್ಪಟ್ಟ ಜನರ ವೇದನೆಗೊಂದು ದನಿಯಾಗಿ ಮಾತಾಡಿದ್ದರು. ದೌರ್ಜನ್ಯಕ್ಕೊಳಗಾದವರ ಆಕ್ರೋಶವನ್ನು ಪ್ರತಿನಿಧಿಸುವಾಗ ಅದಕ್ಕೆ ಪೂರಕವಾಗಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಬಳಸಿದ ಖಾರವೆನಿಸಿದ ಒಂದೆರೆಡು ಪದಗಳನ್ನು ಇಟ್ಟುಕೊಂಡು ಕ್ಷಮೆ ಕೇಳಿಸಿಕೊಳ್ಳಲಾಗಿದೆ.

ಆದರೆ ನಿಜವಾದ ಮಹತ್ವ ಸಿಗಬೇಕಾಗಿದ್ದು ಅವರ ಸದಾಶಯಕ್ಕೆ. ಅದು ಈ ಗಲಭೆಯಲ್ಲಿ ಮುಚ್ಚಿಯೇ ಹೋಯಿತು.ವಿಷಾದದ ವಿಷಯ ಎಂದರೆ ಅವರ ಮಾತುಗಳು ಯಾರ ಹಿತಾಸಕ್ತಿಯ ವಿರುದ್ಧವಿತ್ತೋ ಅವರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ವಿರೋಧಿಸಿದರು. ಆದರೆ ಅವರ ಮಾತುಗಳ ಕಾಳಜಿ ಯಾರ ಪರವಿತ್ತೋ ಆ ಬಹುಸಂಖ್ಯಾತ ಜನರು ತಮಗೇನು ಸಂಬಂಧವಿಲ್ಲ , ನಮಗೇಕೆ ಎಂಬಂತೆ ಮೂಕ ಪ್ರೇಕ್ಷಕರಾಗಿ ಕುಳಿತರು.

ಕೊನೆಗೆ ಅವರದೇ ಹಾಡು ನೆನಪಾಗುತ್ತೆ. ಈ ದೇಶದ್ ಕಥೆ ಇಷ್ಟೇ ಕಣಮ್ಮೋ..ಇಲ್ಲ್ ಚಿಂತೇ (ಚಿಂತನೆ) ಮಾಡಿ ಲಾಭ ಇಲ್ಲಮ್ಮೋ.. ಎಂದು ಬರೆದುಕೊಂಡಿದ್ದಾರೆ. ಕವಿರಾಜ್ ಅವರು ಮಾಡಿರುವ ಈ ಪೋಸ್ಟ್ ಗೆ ಸಹಾ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದು, ಇಲ್ಲೂ ಕೂಡಾ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಒಟ್ಟಾರೆ ಸೆಲೆಬ್ರಿಟಿಗಳು ಇತ್ತೀಚಿಗೆ ಆಡುವ ಮಾತುಗಳು ಬಹಳ ಸುದ್ದಿಯನ್ನು ಹುಟ್ಟು ಹಾಕುತ್ತಿರುವುದು ಮಾತ್ರ ವಾಸ್ತವವಾದ ವಿಷಯವಾಗಿದೆ.

Leave a Comment